ಬಾದಾಮಿ ಸ್ಪರ್ಧೆಯ ಗುಟ್ಟು ರಟ್ಟು ಮಾಡಿದ ಸಿದ್ದರಾಮಯ್ಯ
Recommended Video

ಮೈಸೂರು, ಏಪ್ರಿಲ್ 18: "ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವುದಾಗಿ ಹೈಕಮಾಂಡ್ ಗೆ ತಿಳಿಸಿದ್ದೇನೆ. ಆದರೆ ಬಾದಾಮಿ ಕ್ಷೇತ್ರದ ಜನ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ " ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಿಂದಲೂ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ.
ಮೇ.12 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವ ಸಿದ್ದರಾಮಯ್ಯ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
'ಬಾದಾಮಿ ಭಾಗದಿಂದ ಸ್ಪರ್ಧಿಸುವಂತೆ ನಿನ್ನೆ ಸಹ ಬಾದಾಮಿ ಕ್ಷೇತ್ರದಿಂದ ಹಲವು ಮುಖಂಡರು ಒತ್ತಡ ಹೇರಿದ್ದಾರೆ. ಈ ಕುರಿತು ನಾನು ಏನನ್ನೂ ಹೇಳಲಾರೆ' ಎಂದು ಅವರು ಹೇಳಿದರು.

ಈಗಾಗಲೇ ಕಾಂಗ್ರೆಸ್ ಟಿಕೆಟ್ ಕಳೆದುಕೊಂಡವರಿಗೆ ಸಮಾಧಾನ ಮಾಡಲು ಯತ್ನಿಸುತ್ತಿದ್ದೇವೆ. ಬಿ ಫಾರಂ ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ಗ್ರೌಂಡ್ ರಿಪೋರ್ಟ್ ಪಡೆದು ಹೈಕಮಾಂಡ್ ಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಬೆಂಗಾವಲು ಕಾರು ಅಪಘಾತಕ್ಕೆ ಸಂಬಂಧಿಸಿದಂತೆ, 'ಹಿಂದು ಹುಲಿ ಹತ್ಯೆಗೆ ಸಂಚು ಮಾಡಿದ್ದಾರೆ' ಎಂಬ ಪ್ರತಾಪಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 'ಬಿಜೆಪಿ ಕೆಲ ಮುಖಂಡರುಗಳು ಕ್ರಿಮಿನಲ್ ಗಳಾಗಿದ್ದಾರೆ. ಅವರ ಮನಸ್ಥಿತಿ ಎಂತಹದ್ದು ಎಂಬುದು ತಿಳಿಯುತ್ತದೆ. ಕ್ರಿಮಿನಲ್ ಹಿನ್ನಲೆಯುಳ್ಳವರಿಂದ ನಾನು ಏನನ್ನೂ ಕಲಿಯಬೇಕಿಲ್ಲ' ಎಂದರು
"ಅಷ್ಟಕ್ಕೂ ಹಿಂದು ಹುಲಿ ಯಾರು? ನಾನು ಜಾತ್ಯಾತೀತ ಹಿಂದು. ಅವರಂತೆ ಕೋಮುವಾದಿ ಹಿಂದುವಲ್ಲ" ಎಂದು ಬಿಜೆಪಿ ನಾಯಕರಿಗೆ ಟಾಂಕ್ ನೀದಿದರು.












Click it and Unblock the Notifications