ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ಏನೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ?
ಮೈಸೂರು, ಡಿಸೆಂಬರ್ 18: ಸಣ್ಣಗೆ ನಡುಕ ಹುಟ್ಟಿಸುವ ಚಳಿಯಲ್ಲಿ ಪುಷ್ಪಲೋಕದಲ್ಲಿ ವಿಹರಿಸುತ್ತಾ ಕಣ್ಮನಕ್ಕೆ ಮುದತಂದು ಕಿವಿಗಳಿಗೆ ಇಂಪು ನೀಡಿ ತನ್ನೊಳಗಿದ್ದ ಒತ್ತಡವನ್ನೆಲ್ಲ ಬದಿಗೆ ಸರಿಸಿ ಪ್ರತಿಯೊಬ್ಬರೂ ಹಗುರವಾಗಲೆಂದು ಮೈಸೂರು ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಂಜೆಯಾಗುತ್ತಿದ್ದಂತೆಯೆ ಬೆಚ್ಚಗೆ ಮನೆ ಸೇರಿಕೊಳ್ಳುತ್ತಿದ್ದವರೆಲ್ಲರೂ ಮನೆಯಾಚೆಗೆ ಬಂದು ಅರಮನೆ ಆವರಣದಲ್ಲಿ ವಿಹರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಅದರಂತೆ ವರ್ಷದ ಕೊನೆಯ ಸಾಂಸ್ಕೃತಿಕ ಕಾರ್ಯಕ್ರಮ ಅರಮನೆ ಆವರಣದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ರಮ ಹಳೆಯ ವರ್ಷದ ವಿದಾಯಕ್ಕೂ ಹೊಸವರ್ಷದ ಸ್ವಾಗತಕ್ಕೂ ಸಾಕ್ಷಿಯಾಗುತ್ತಿದೆ. ಮಾಗಿಯ ಚಳಿಯಲ್ಲಿ ಮೈಕೊಡವಿಕೊಂಡು ಹೊರಗೆ ಬರುವವರಿಗಾಗಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಹಾಗಾದರೆ ಸಂಗೀತ ಪ್ರೇಮಿಗಳನ್ನು ರಂಜಿಸಲು ಏನೆಲ್ಲ ಕಾರ್ಯಕ್ರಮಗಳಿವೆ ಎಂಬುದರ ವಿವರ ಇಲ್ಲಿದೆ.

ಅರಮನೆ ಮಂಡಳಿ ವತಿಯಿಂದ ಅರಮನೆ ಆವರಣದಲ್ಲಿ ಡಿ.21ರಿಂದ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಒಂದೆಡಯಾದರೆ ಮತ್ತೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮವೂ ಇಲ್ಲಿ ನಡೆಯಲಿದೆ. ಯಾವ ದಿನ ಯಾವ ಕಾರ್ಯಕ್ರಮ ಇರಲಿದೆ ಎಂಬುದನ್ನು ನೋಡಿದ್ದೇ ಆದರೆ ಡಿಸೆಂಬರ್ 21 ರಂದು ಸಂಜೆ 5 ಗಂಟೆಗೆ ಅರಮನೆಯ ಫಲಪುಷ್ಪ ಪ್ರದರ್ಶನ, ವರಾಹ ಉದ್ಯೋನವನದಲ್ಲಿ ಕುಸ್ತಿ ಪಂದ್ಯಾವಳಿ ಹಾಗೂ ಬೊಂಬೆ ಮನೆ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಸಂಜೆ 5.30ರಿಂದ 6.30ರವರೆಗೆ ಸಿ.ಆರ್.ರಾಘವೇಂದ್ರ ಪ್ರಸಾದ್ ಮತ್ತು ತಂಡದವರಿಂದ ವಾದ್ಯಸಂಗೀತ ಕಾರ್ಯಕ್ರಮ, ಸಂಜೆ 7 ಗಂಟೆಗೆ ಎ.ಆರ್.ಕಲಾ ತಂಡದವರಿಂದ ನಾಡಗೀತೆ ಮತ್ತು ಮೈಸೂರು ಸಂಸ್ಥಾನದ ನಾಡಗೀತೆಯಾದ ಕಾಯೌ ಶ್ರೀಗೌರಿ ಕರುಣಾಲಹರಿ ಗೀತೆ ಹಾಡಲಿದ್ದಾರೆ.
ಸಂಜೆ 7:15 ರಿಂದ 7:30 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಸಂಜೆ 7:30 ರಿಂದ 9:30 ರವರೆಗೆ ಹಿನ್ನಲೆಗಾಯಕ ಮಧುಬಾಲಕೃಷ್ಣನ್ ಮತ್ತು ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಮತ್ತು ಬೊಂಬೆಗಳ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ವಿವಿಧ ಕಾರ್ಯಕ್ರಗಳು ನಡೆಯಲಿದೆ. ಡಿ.21 ರಿಂದ 31 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಫಲಪುಷ್ಪ ಪ್ರದರ್ಶನ ಹಾಗೂ ಸಂಜೆ 7 ರಿಂದ 9ರವರೆಗೆ ಅರಮನೆ ವಿದ್ಯುತ್ ದೀಪಾಲಂಕಾರವಿರುತ್ತದೆ.

22ರಂದು ಸಂಜೆ 6 ರಿಂದ 6.45ರವರೆಗೆ ರಘು.ಆರ್ ಮತ್ತು ತಂಡದವರಿಂದ ಗೀತಗಾಯನ, ಸಂಜೆ 6.45ರಿಂದ 7.15ರವರೆಗೆ ಭಾರತೀಯ ವಿದ್ಯಾಭವನದಿಂದ ನೃತ್ಯರೂಪಕ ಹಾಗೂ ಸಂಜೆ 7.30 ರಿಂದ 9.30ರವರೆಗೆ ಹಿನ್ನಲೆ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿವೆ. 23 ರಂದು ಸಂಜೆ 6 ರಿಂದ 6.45 ರವರೆಗೆ ಆಯುಷ್ ಎಂ.ಡಿ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ 7 ರಿಂದ 8.30ರವರೆಗೆ ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿಂದ ಲಯ- ಲಾವಣ್ಯ ಕಾರ್ಯಕ್ರಮ ನಡೆಯಲಿದೆ.
ರಿಯಾಲಿಟಿ ಶೋ ಗಾಯಕರ ಸಂಗೀತಯಾನ
24ರಂದು ಸಂಜೆ 6 ರಿಂದ 6.45ರವರೆಗೆ ಶಡಜ್ ಗೊಡ್ಖಂಡಿ(ಕೊಳಲು) ಮತ್ತು ಅಪೂರ್ವ ಕೃಷ್ಣ (ಪಿಟೀಲು ವಾದನ) ಹಾಗೂ ತಂಡದವರಿಂದ ಫೂಶನ್ ಸಂಗೀತ ಕಾರ್ಯಕ್ರಮ, ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಸಿದ್ದಾರ್ಥ ಬೆಲ್ಮಣ್ಣ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಗಂಜಿಫ ರಘುಪತಿ ಭಟ್ ವರ್ಣಚಿತ್ರ ಕಲಾವಿದರಿಂದ ದಾಸವಾಣಿ ಚಿತ್ರಣ ಕಾರ್ಯಕ್ರಮ ಹಾಗೂ ಸಂಜೆ 8 ರಿಂದ 9.30 ರವರೆಗೆ ಚಂಪಕ ಅಕಾಡೆಮಿ ವೃಂದ ಡಾ.ನಾಗಲಕ್ಷ್ಮಿ ನಾಗರಾಜನ್ ಹಾಗೂ 40 ಜನ ತಂಡದವರಿಂದ ಶ್ರೀ ಕೃಷ್ಣ ಲೀಲಾ ವಿಭೂತಿ ಪದ್ಮಭೂಷಣ ಡಿವಿಜಿ ವಿರಚಿತ ಗೇಯ ನೃತ್ಯ ನಾಟಕ ಕಾರ್ಯಕ್ರಮ ನಡೆಯಲಿವೆ.
25 ಸಂಜೆ 5.45ರಿಂದ 6.30ರವರೆಗೆ ನಾಹರ್ ಗುರುದತ್ತ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಸಂಜೆ 6.30 ರಿಂದ 7.30ರವರೆಗೆ ಸಂಗೀತ ವಿದ್ವಾನ್ ಪ್ರೊ.ಡಾ.ಸಿ.ಎ.ಶ್ರೀಧರ, ವಿದ್ವಾನ್ ಸಿ.ಎಸ್.ಕೇಶವಚಂದ್ರ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ದ್ವಂದ್ವ ವೇಣುವಾದನ ಕಾರ್ಯಕ್ರಮ ಹಾಗೂ ಸಂಜೆ 7.30 ರಿಂದ 9 ಗಂಟೆಯವರೆಗೆ ಜೀ ಕನ್ನಡ ರಿಯಾಲಿಟಿ ಶೋ ಖ್ಯಾತಿಯ ಗಾಯಕರುಗಳಾದ ದರ್ಶನ್ ನಾರಾಯಣ್, ಐಶ್ವರ್ಯ ರಂಗರಾಜನ್, ಸುನಿಲ್ ಗುಜಗೊಂಡ್, ವಸುಶ್ರೀ ಹಳೆಮನೆ, ಜ್ಞಾನಗುರುರಾಜ್ ಮತ್ತು ತಂಡದವರಿಂದ ಸಂಗೀತಯಾನ ಕಾರ್ಯಕ್ರಮಗಳು ನಡೆಯಲಿದೆ.
ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ
ಪೊಲೀಸ್ ಇಲಾಖೆಯ ವತಿಯಿಂದ ಡಿ.31 ರಂದು ರಾತ್ರಿ 11 ರಿಂದ 12 ಗಂಟೆಯವರೆಗೆ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ, ಮಧ್ಯರಾತ್ರಿ 12 ರಿಂದ 12.15ರವರೆಗೆ ಮೈಸೂರು ಅರಮನೆ ಮಂಡಳಿಯ ವತಿಯಿಂದ ಹೊಸ ವರ್ಷಾಚರಣೆಯ ಪ್ರಯುಕ್ತ ಬಣ್ಣಗಳ ಚಿತ್ತಾರದಿಂದ ಕೂಡಿದ ಶಬ್ಧರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಲಿದ್ದು ಆ ಮೂಲಕ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಒಟ್ಟಾರೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ಹಿನ್ನಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಎಲ್ಲರ ಮನಗೆಲ್ಲುವುದರಲ್ಲಿ ಎರಡು ಮಾತಿಲ್ಲ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications