ಮೈಸೂರು ದಸರಾ 2017 : ದಸರಾ ಆನೆಗಳ ತೂಕ ಪರೀಕ್ಷೆ
ಮೈಸೂರು, ಅ.18 : ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಗಜಪಡೆ ಭರ್ಜರಿ ತಾಲೀಮು ಆರಂಭಿಸಿದೆ. ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡ ಮೈಸೂರಿಗೆ ಆಗಮಿಸಿವೆ. ಇಂದಿನಿಂದ ಗಜಪಡೆಗಳ ನಿತ್ಯ ತಾಲೀಮು ಆರಂಭವಾಗಿದೆ.
ತಾಲೀಮಿನ ಮೊದಲ ದಿನ ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿ ರಾಮ್ ಅಂಡ್ ಕೋ ವೇ ಬ್ರಿಡ್ಜ್‌ನಲ್ಲಿ ಆನೆಗಳನ್ನು ತೂಕ ಮಾಡಲಾಯಿತು.

ಯಾವ ಆನೆಗಳ ತೂಕ ಎಷ್ಟಿದೆ?
* ಅಂಬಾರಿ ಹೊರುವ ಅರ್ಜುನ 5,250 ಕೆಜಿ
* ವಿಜಯ 2,770 ಕೆಜಿ
* ಅಭಿಮನ್ಯು 4,870 ಕೆಜಿ
* ವರಲಕ್ಷ್ಮಿ 4,970 ಕೆಜಿ
* ಬಲರಾಮ 4,990 ಕೆಜಿ
* ಭೀಮ 3,410 ಕೆಜಿ
* ಕಾವೇರಿ 2,820 ಕೆಜಿ
* ಗಜೇಂದ್ರ 4,600 ಕೆಜಿ












Click it and Unblock the Notifications