ದಸರಾ ಜಂಬೂಸವಾರಿಗೆ ಅಣಿಯಾಗಲು ಅರ್ಜುನನಿಗೆ ಇಂದಿನಿಂದ ಭಾರ ಹೊರುವ ತಾಲೀಮು
ಮೈಸೂರು, ಸೆಪ್ಟೆಂಬರ್ 6: ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆ ಜಂಬೂಸವಾರಿಗೆ ಅಣಿಯಾಗಲು ಕ್ಯಾಪ್ಟನ್ ಅರ್ಜುನನಿಗೆ ಇಂದು ಭಾರ ಹೊರುವ ತಾಲೀಮನ್ನು ನಡೆಸಲಾಯಿತು.
ಅರಮನೆಯ ಆವರಣದಿಂದ ಗಜಪಡೆ, ಸಯ್ಯಜಿರಾವ್ ರಸ್ತೆ ಮೂಲಕ ಹೈವೇ ವೃತ್ತ, ಬನ್ನಿಮಂಟಪವನ್ನು ತಲುಪಿತು. ಕೆಲಕಾಲ ಅಲ್ಲೇ ವಿಶ್ರಾಂತಿ ಪಡೆದು ನಂತರ ಅರಮನೆ ಪ್ರವೇಶಿಸಿದವು.

ಗಾದಿ, ಛಾಪು, ಮರಳು ಮೂಟೆ ಹೊತ್ತು ಹೆಜ್ಜೆ ಹಾಕಿದ ಕ್ಯಾಪ್ಟನ್ ಅರ್ಜುನನ ಹಿಂದೆ ಮಿಕ್ಕೆಲ್ಲಾ ಆನೆಗಳು ನಡೆದವು. 350 ಕೆ.ಜಿ ತೂಕ ಮೂಟೆ ಹೊತ್ತ ಅರ್ಜುನನಿಗೆ 750 ಕೆ.ಜಿ.ಅಂಬಾರಿ ಹೊತ್ತು ಸಾಗುವ ಮುನ್ನ ಭಾರ ಹೊರುವ ತಾಲೀಮು ನಡೆಸಲಾಗುವುದು. ಅರಮನೆಯಿಂದ ಬನ್ನಿಮಂಟಪದವರೆಗೆ ಮೊದಲ ಹಂತದ ಗಜಪಡೆ ಸಾಗಿತು. ಮೊದಲ ದಿನಗಳಲ್ಲಿ ಅರ್ಜುನನಿಗೆ ಭಾರ ಹೊರುವ ತಾಲೀಮು ನಡೆಸಲಾಗಿದ್ದು, ನಂತರದ ದಿನಗಳಲ್ಲಿ ಅಭಿಮನ್ಯು ಹಾಗೂ ಧನಂಜಯನಿಗೂ ಈ ತಾಲೀಮು ನಡೆಯುತ್ತದೆ.
ಇಂದಿನಿಂದ ನಿತ್ಯ ಮರಳಿನ ಅರ್ಜುನ ಆನೆಗೆ ಮೂಟೆ ಹೊರಿಸಿ ತಾಲೀಮು ನಡೆಸಿದ್ದು, ಬಳಿಕ ದಿನ ಬಿಟ್ಟು ದಿನ ಅಭಿಮನ್ಯು, ಗಜೇಂದ್ರ ಹಾಗೂ ಅಭಿಮನ್ಯು, ಈಶ್ವರ ಆನೆಗಳಿಗೂ ಭಾರ ಹೊರುವ ತಾಲೀಮು ನಿಗದಿ ಮಾಡಲಾಗುತ್ತದೆ ಎಂದು ಆನೆ ವೈದ್ಯರು ತಿಳಿಸಿದ್ದಾರೆ.












Click it and Unblock the Notifications