ಮೈಸೂರಿನಲ್ಲಿ 2 ವರ್ಷದ ಬಾಲಕಿ ಕೊಲೆ, ಅತ್ಯಾಚಾರ ಶಂಕೆ
ಮೈಸೂರು, ಅಕ್ಟೋಬರ್ 31 : ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ನಗರದ ಮೇಟಗಳ್ಳಿ ಸಮೀಪದ ಅಂಬೇಡ್ಕರ್ ನಗರದಲ್ಲಿ ಈ ಘಟನೆ ಶನಿವಾರ ನಡೆದಿದೆ.
ತಾಯಿಯಿಂದ ದೂರವಾಗಿರುವ ಮಗುವನ್ನು ತಂದೆಯೇ ಸಾಕಿ ಸಲಹುತ್ತಿದ್ದರು. ಈ ನಡುವೆ ಅವರ ಆರೋಗ್ಯ ಹದಗೆಟ್ಟಿತ್ತು. ಇದರಿಂದ ಮಗುವನ್ನು ಕೆಸರೆಯಲ್ಲಿರುವ ತಂಗಿಯ ಮನೆಯಲ್ಲಿ ಬಿಟ್ಟಿದ್ದರು. ಆದರೆ ತಂಗಿಯ ಗಂಡನೇ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕಾರಣ ಈತನೇ ಮಗು ಮೃತಪಟ್ಟಿರುವ ವಿಷಯ ತಿಳಿಸಿದ್ದನು. [ವರ್ಷದಲ್ಲಿ ದಲಿತರ ಮೇಲೆ 47,064 ಸಾರಿ ದೌರ್ಜನ್ಯ!
]

ಮಗುವಿನ ಮೃತ ದೇಹವನ್ನು ಅಂಬೇಡ್ಕರ್ ನಗರದ ಮನೆಗೆ ತಂದು ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸುವ ಸಂದರ್ಭ ಮಗುವಿನ ಮೈಮೇಲಿದ್ದ ಹಾಗೂ ಗುಪ್ತಾಂಗದಲ್ಲಿದ್ದ ಗಾಯದಿಂದಾಗಿ ಅತ್ಯಾಚಾರ ನಡೆದಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ಮೇಟಗಳ್ಳಿ ಠಾಣೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೆ ನಿಜ ವಿಷಯ ಬೆಳಕಿಗೆ ಬರಬೇಕಿದೆ. [ಕಾಮುಕರ ಪುರುಷತ್ವ ಹರಣ ಮಾಡಿ: ಹೈಕೋರ್ಟ್]












Click it and Unblock the Notifications