ರಸ್ತೆ ಪಕ್ಕ ಟೀ ಕುಡಿಯುತ್ತಿದ್ದವರ ಪ್ರಾಣ ತೆಗೆದ ಮರ
ಹುಣಸೂರು ಪಟ್ಟಣದ ಕೊಯಮತ್ತೂರು ಕಾಲೋನಿಯಲ್ಲಿ ಬಟ್ಟೆ ವ್ಯಾಪಾರದ ನಡುವೆ ಟೀ ಕುಡಿಯಲು ನಿಂತಾಗ ಘಟನೆ.
ಮೈಸೂರು, ಏಪ್ರಿಲ್ 11 : ಟೀ ಕುಡಿಯಲು ನಿಂತಿದ್ದ ಇಬ್ಬರು ವ್ಯಾಪಾರಿಗಳ ಮೇಲೆ ಅರಳಿ ಮರವೊಂದು ಬಿದ್ದ ಪರಿಣಾಮ ಸ್ಥಳದಲ್ಲೇ ಅವರು ಸಾವನ್ನಪ್ಪಿದ ಘಟನೆ ಘಟನೆ ಹುಣಸೂರಿನ ಹೆಚ್.ಡಿ ಕೋಟೆ ರಸ್ತೆಯಲ್ಲಿರುವ ಆಜಾದ್ ನಗರದಲ್ಲಿ ನಡೆದಿದೆ.
ಹುಣಸೂರು ಪಟ್ಟಣದ ಕೊಯಮತ್ತೂರು ಕಾಲೋನಿಯ ಮೂವರು ದ್ವಿಚಕ್ರ ವಾಹನಗಳಲ್ಲಿ ಹಳ್ಳಿಗಳ ಮೇಲೆ ಬಟ್ಟೆ ವ್ಯಾಪಾರಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯ ಟೀ ಕುಡಿಯಲು ನಿಂತಿದ್ದರು. ಆಗ ಜೋರಾದ ಗಾಳಿಗೆ ಒಣಗಿದ ಅರಳಿ ಮರ ಬುಡ ಸಮೇತ ಬಟ್ಟೆ ವ್ಯಾಪಾರಿಗಳ ಮೇಲೆ ಬಿದ್ದಿದೆ.

ಮರ ಮೈಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ನಜೀಬ್ ಎಂಬಾನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನ ಮಹೇಶ(40), ಪ್ರಕಾಶ(38) ಎಂದು ಗುರುತಿಸಲಾಗಿದೆ.












Click it and Unblock the Notifications