ತ್ರಿಬಲ್ ರೈಡಿಂಗ್ ಹಾಗೂ ಅಪ್ರಾಪ್ತರ ವಾಹನ ಚಾಲನೆಗೆ ದಂಡ ಗ್ಯಾರಂಟಿ
ಮೈಸೂರು, ಜುಲೈ, 21 : ಹಲವಾರು ದಿನಗಳಿಂದ ಅಪ್ರಾಪ್ತರ ವಾಹನ ಚಾಲನೆ ಹಾಗೂ ತ್ರಿಬಲ್ ರೈಡಿಂಗ್ ಕುರಿತು ಸಂಚಾರ ಪೊಲೀಸರು ಗಂಭೀರ ಆಲೋಚನೆ ನಡೆಸಿದ್ದರು. ಈ ನಿಮಿತ್ತ ಸೋಮವಾರ ವಿಶೇಷ ತಪಾಸಣೆ ಕೈಗೊಂಡು ಹಲವರನ್ನು ಬಂಧಿಸಿದ್ದಾರೆ.
ತಪಾಸಣೆ ಸಂದರ್ಭದಲ್ಲಿ ವಾಹನ ಚಾಲನೆ ಮಾಡಿದ ಒಟ್ಟು 10 ಅಪ್ರಾಪ್ತರನ್ನು ಹಾಗೂ ತ್ರಿಬಲ್ ರೈಡಿಂಗ್ ನಡೆಸಿದ 63 ಮಂದಿಯನ್ನು ಬಂಧಿಸಿ 7,500 ದಂಡ ವಿಧಿಸಿದ್ದಾರೆ. ಬಳಿಕ ಸವಾರರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.[ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ ವಿವರಗಳು]

ಜೊತೆಗೆ ಆರೋಪಿಗಳ ಪೋಷಕರ ವಿರುದ್ದವೂ ಪ್ರಕರಣಗಳನ್ನು ದಾಖಲಿಸಿದ ಪೊಲೀಸರು7,600 ರೂ ದಂಡ ವಿಧಿಸಿದ್ದಾರೆ. ಸ್ಥಳದಂಡ ಪಾವತಿಸಲು ವಿಫಲರಾದ 03 ಜನರ ವಿರುದ್ದ ಪ್ರಕರಣ ದಾಖಲಿಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಪೋಷಕರು ವಾಹನಗಳನ್ನು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ನೀಡದಂತೆ ಹಾಗೂ ತ್ರಿಬಲ್ ರೈಡಿಂಗ್ ಮಾಡದಂತೆ ತಿಳಿಸಿದ್ದು, ಕಠಿಣ ಕ್ರಮ ಜಾರಿಗೊಳಿಸುವುದರ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಪೊಲೀಸ್ ಕಮೀಷನರ್ ಅವರು ಹೇಳಿದ್ದಾರೆ.












Click it and Unblock the Notifications