ಯುವಕನನ್ನು ಬಲಿ ಪಡೆದಿದ್ದ ಹುಲಿ ಸೆರೆ: ನಿಟ್ಟುಸಿರು ಬಿಟ್ಟ ಸ್ಥಳೀಯರು

ಎಚ್‌.ಡಿ ಕೋಟೆಯ ಬಳ್ಳೆ ಹಾಡಿಯ ಯುವಕನನ್ನು ಬಲಿ ಪಡೆದು ಸ್ಥಳೀಯರಲ್ಲಿ ಆತಂಕ ಹುಟ್ಟು ಹಾಕಿದ್ದ ಹುಲಿಯನ್ನು ಎಚ್‌.ಡಿ ಕೋಟೆಯ ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೈಸೂರು, ಫೆಬ್ರವರಿ 15: ಬಳ್ಳೆ ಹಾಡಿಯ ಯುವಕನನ್ನು ಬಲಿ ಪಡೆದಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ.

ಡಿ.ಬಿ.ಕುಪ್ಪೆ ವನ್ಯ ಜೀವಿ ವಲಯದ ವಲಯ ಅರಣ್ಯಾಧಿಕಾರಿ ವಸತಿ ಗೃಹದ ಹಿಂದೆ ಸೌದೆ ತರಲು ಹೋಗಿದ್ದ ಯುವಕನನ್ನು ಹುಲಿ ಕೊಂದು ಹಾಕಿತ್ತು. ನಂತರದಲ್ಲಿ 5ಕ್ಕೂ ಹೆಚ್ಚು ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಹುಲಿ ಸೆರೆಗೆ ಕೂಂಬಿಂಗ್ ನಡೆಸುತ್ತಿತ್ತು. ಸತತ ಕಾರ್ಯಾಚರಣೆಯ ನಂತರ ಕೊನೆಗೂ ಸುಮಾರು 9 ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಗಿದೆ.

ಈ ಹುಲಿ ಕಬಿನಿ ಹಿನ್ನೀರಿನ ಬಳಿ ಹೆಚ್ಚು ಕಂಡು ಬರುತ್ತಿದ್ದರಿಂದ ಪ್ರವಾಸಿಗರು ಇದಕ್ಕೆ 'ಕಬಿನಿ ಹಿನ್ನೀರಿನ ಫೀಮೇಲ್' ಎಂದು ನಾಮಕರಣ ಮಾಡಿದ್ದರು. ಕೆಲವು ದಿನಗಳ ಹಿಂದೆ ಜಿಂಕೆ ಮತ್ತು ಜಿಂಕೆ ಮರಿಯನ್ನು ಬೇಟೆಯಾಡಿ ಬಾಯಿಯಲ್ಲಿ ಕಚ್ಚಿಕೊಂಡು ಬರುತ್ತಿದ್ದ ದೃಶ್ಯ ಪ್ರವಾಸಿಗರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿತ್ತು.

Tiger Captured In Mysuru HD Kote Taluk

ಯುವಕನನ್ನು ಬಲಿ ಪಡೆದ ಹುಲಿಯನ್ನು ಸದ್ಯ ಸೆರೆ ಹಿಡಿಯಲಾಗಿದ್ದು, ಹುಲಿಯ ಬಲ ಮುಂಗಾಲು, ಪಾದ ಮತ್ತು ಭುಜದಲ್ಲಿ ತೀವ್ರ ಗಾಯಗಳಾಗಿವೆ. ನಡೆದಾಡಲು ಶಕ್ತಿ ಇಲ್ಲ. ಶಸ ಚಿಕಿತ್ಸೆ ಅವಶ್ಯಕತೆ ಇದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಹುಲಿಗೆ 4 ಮರಿಗಳಿದ್ದು, 10ರಿಂದ 12 ತಿಂಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ತಾಯಿ ಇಲ್ಲದಿರುವುದರಿಂದ ಕೆಲವು ದಿನಗಳ ಮಟ್ಟಿಗೆ ಅವುಗಳಿಗೆ ಸ್ವಲ್ಪ ತೊಂದರೆಯಾಗಬಹುದು. ಆದರೆ, ಅವು ಬದುಕಿ ಉಳಿಯುವ ಎಲ್ಲಾ ಲಕ್ಷಣಗಳು ಇವೆ. ಮರಿಗಳ ಚಲನವಲನದ ಮೇಲೆ ನಿಗಾವಹಿಸಲು ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಮತ್ತು ಅರಣ್ಯ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ.

Tiger Captured In Mysuru HD Kote Taluk

ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯ ಜೀವಿ ವಲಯದ ಮಾಸ್ತಿಗುಡಿ ಗಸ್ತಿನ, ಕಬಿನಿ ಹಿನ್ನೀರು ಬಳಿ ಕಾಣಿಸುತ್ತಿದ್ದ ಹುಲಿ ಮೈಮೇಲೆ ಗಾಯವಾಗಿದ್ದು, ಕುಂಟುತ್ತ ನಡೆಯುತ್ತಿದ್ದುದನ್ನು ಇಲಾಖೆ ಸಿಬ್ಬಂದಿ ಮತ್ತು ಪ್ರವಾಸಿಗರು ಗಮನಿಸಿದ್ದರು. ಬೇಟೆಯಾಡಲು ಶಕ್ತಿ ಇಲ್ಲದ ಹುಲಿ, ಮುಂದಿನ ದಿನಗಳಲ್ಲಿ ಜನ ಜಾನುವಾರುಗಳ ಮೇಲೆ ದಾಳಿ ನಡೆಸಬಹುದು ಎಂಬ ಅನುಮಾನದ ಮೇರೆಗೆ ಸಾಕಾನೆಗಳ ಸಹಾಯದಿಂದ ಕೂಂಬಿಂಗ್‌ ನಡೆಸಲಾಗಿತ್ತು.

ಬಳ್ಳೆ ಅರಣ್ಯ ಇಲಾಖೆ ಸನಿಹದಲ್ಲಿರುವ ಮಾಸ್ತಿ ಗುಡಿ ದೇವಸ್ಥಾನದ ಬಳಿ ಮಂಗಳವಾರ ಕೂಂಬಿಂಗ್ ಮಾಡುತ್ತಿದ್ದಾಗ ಹುಲಿ ಕಾಣಿಸಿತು. ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವೈದ್ಯರ ತಂಡ ಅರವಳಿಕೆ ನೀಡಿ ಸೆರೆ ಹಿಡಿದಿದ್ದಾರೆ. ಬಳಿಕ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಿದ್ದಾರೆ.

ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಡಾ.ರಮೇಶ್, ಡಾ.ಮದನ್, ಅರಣ್ಯಾಧಿಕಾರಿಗಳಾದ ಸಿದ್ದರಾಜು (ಅಂತರಸಂತೆ), ಮಧು(ಡಿ.ಬಿ.ಕುಪ್ಪೆ), ಹರ್ಷಿತ್ (ಮೇಟಿಕುಪ್ಪೆ) ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+