• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಜೋಳದ ಲಾರಿಗೆ ವಿದ್ಯುತ್ ತಗುಲಿ ಮೂವರು ಕಾರ್ಮಿಕರ ದುರ್ಮರಣ

By ಮೈಸೂರು ಪ್ರತಿನಿಧಿ
|

ಮೈಸೂರು, ಮೇ 21: ಜೋಳದ ಲಾರಿಗೆ ವಿದ್ಯುತ್ ತಗುಲಿ ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಕೀಳನಪುರ ಗ್ರಾಮದಲ್ಲಿ ಇಂದು ನಡೆದಿದೆ.

ಕೀಳನಪುರದಿಂದ ಮೈಸೂರಿನ ಪಿಂಜರಾಪೂಲಿಗೆ ಜೋಳ ತುಂಬಿಸಿಕೊಂಡು ಲಾರಿ ಹೊರಟಿತ್ತು. ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿದ್ದು, ಲಾರಿಯಲ್ಲಿದ್ದ ಕೂಲಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.

ನಿಲ್ಲದ ವಲಸೆ ಕಾರ್ಮಿಕರ ಅಪಘಾತ: ದಂಪತಿ ಸೇರಿ ನಾಲ್ಕು ಮಂದಿ ಸಾವು ನಿಲ್ಲದ ವಲಸೆ ಕಾರ್ಮಿಕರ ಅಪಘಾತ: ದಂಪತಿ ಸೇರಿ ನಾಲ್ಕು ಮಂದಿ ಸಾವು

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಹೊಸೂರು ಗ್ರಾಮದ ಕೂಲಿ ಕಾರ್ಮಿಕರಾದ ಮಹದೇವು, ತೇಜು ಮತ್ತು ಮಹದೇವ್ ನಾಯಕ ಸಾವಿಗೀಡಾದವರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವರುಣ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

English summary
Three labours were died as electric line touches corn loaded lorry at Keelanpur village in Mysuru today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X