ಗಜಪಯಣದ ವೇಳೆ ಮಾಜಿ ಮೇಯರ್ ಜೇಬಿಗೆ ಕನ್ನ: ಕಳ್ಳನ ಬಂಧನ

ಮೈಸೂರು, ಆಗಸ್ಟ್ 23: ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಗುರುವಾರ ನಡೆದ ಗಜಪಯಣದ ವೇಳೆ ಬಿಜೆಪಿ ಮುಖಂಡ ಹಾಗೂ ಮಾಜಿ ಮೇಯರ್ ಸಂದೇಶ್ ಸ್ವಾಮಿ ಅವರ ಕಿಸೆಗಳ್ಳತನ ಮಾಡಿದ್ದ ಆರೋಪಿಯನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ.

ಹುಣಸೂರಿನ ವಿಜಯನಗರ ಬಡಾವಣೆ ನಿವಾಸಿ ಅಹಮ್ಮದ್ (38) ಬಂಧಿತ ಆರೋಪಿ. ಈತ ಗಜಪಯಣದ ವೇಳೆ ಸಂದೇಶ್‌ಸ್ವಾಮಿ ಅವರ ಕಿಸೆಯಿಂದ 34 ಸಾವಿರ ಹಣ ಕದ್ದಿದ್ದ. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ಕೈಗೊಂಡ ಪೊಲೀಸರು ಬಸ್‌ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿ, ಹಣವನ್ನು ವಶಪಡಿಸಿಕೊಂಡಿದ್ದಾರೆ.

Theft happened in Mysuru Dassara gajapayana program

ಇದೇ ವೇಳೆ ಜನಜಂಗುಳಿ ನಡುವೆ ಸಚಿವ ವಿ.ಸೋಮಣ್ಣ ಅವರ ಕಿಸೆಗೂ ಮತ್ತೊಬ್ಬ ಕಳ್ಳ ಕೈ ಹಾಕಿ ಹಣ ಎಗರಿಸಲು ನೋಡಿದ. ಆದರೆ ಗನ್ ಮ್ಯಾನ್ ಕಣ್ಣಿಗೆ ಬಿದ್ದು ಸಿಕ್ಕಿ ಬಿದ್ದ. ತಮ್ಮ ಉಪಸ್ಥಿತಿಯಲ್ಲೇ ಸಚಿವರ ಕಿಸೆಗೆ ಜೇಬುಗಳ್ಳರು ಕೈ ಹಾಕಿದ್ದು ಕಂಡು ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಮುಜುಗರಕ್ಕೊಳಗಾದ ಘಟನೆ ಸಹ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+