• search
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಂಸ್ಕೃತಿಕ ನಗರಿಯಲ್ಲಿ ತಲೆ ಎತ್ತಿದ ಮೊದಲ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ

|

ಮೈಸೂರು, ಅಕ್ಟೋಬರ್. 08 : ಮೈಸೂರಿನ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅದೆಂದರೆ ರಾಜ್ಯದ ಮೊಟ್ಟ ಮೊದಲ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನಾವರಣಗೊಂಡಿದೆ.

ಕೆಂಪೇಗೌಡ ವಸ್ತು ಸಂಗ್ರಹಾಲಯಕ್ಕೆ ದೊರೆಯಲಿದೆ ಡಿಜಿಟಲ್‌ ಸ್ಪರ್ಶ

ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್ ಟುಸ್ಸಾಡ್ಸ್ ಮಾದರಿಯಲ್ಲೇ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ನಗರದ ರೇಸ್ ಕೋರ್ಸ್ ಹಿಂಭಾಗ ಸಿಎಆರ್ ಪಿ ಮೈದಾನ ಬಳಿ ತಲೆ ಎತ್ತಿದೆ.

ಗಾಂಧೀಜಿ ಕಲಿತ 164 ವರ್ಷ ಹಳೆ ಶಾಲೆ ಮ್ಯೂಸಿಯಂ ಆಗಿ ಪರಿವರ್ತನೆ

ಇಲ್ಲಿ ಪ್ರಮುಖ ರಾಜಕಾರಣಿಗಳು, ಚಿತ್ರ ನಟರು, ಸಾಧು ಸಂತರು, ಸ್ವಾತಂತ್ರ್ಯ ಯೋಧರು, ಕೀಡಾಪಟುಗಳು ಸೇರಿದಂತೆ ಹಲವು ಖ್ಯಾತನಾಮರ ಪ್ರತಿಮೆಗಳು ಸ್ಥಾನ ಪಡೆದಿವೆ. ರಾಜ್ಯದ ಮೊದಲ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಎಂಬ ಗೌರವಕ್ಕೆ ಪಾತ್ರವಾಗಿರುವ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಭಾನುವಾರ ಲೋಕಾರ್ಪಣೆಗೊಂಡಿದೆ.

The first Celebrity Wax Museum in Mysore was inaugurated on Sunday

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮೇರು ನಟ ಡಾ.ರಾಜ್ ಕುಮಾರ್, ಸೂಪರ್ ಸ್ಟಾರ್ ರಜನಿ ಕಾಂತ್, ಅಭಿನವ ಭಾರ್ಗವ ಡಾ.ವಿಷ್ಣು ವರ್ಧನ್, ಶಂಕರ್‍ ನಾಗ್ ಪ್ರಭಾಸ್, ಸರ್.ಎಂ. ವಿಶ್ವೇಶ್ವರಯ್ಯ, ಯದುವಂಶದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಬಾಬಾ ರಾಮ್ ದೇವ್, ಹಿಟ್ಲರ್, ಭಗತ್ ಸಿಂಗ್, ಚಾರ್ಲಿ ಚಾಪ್ಲಿನ್, ಸಾಯಿಬಾಬಾ, ಶೀ ರಾಘವೇಂದ್ರ ಸ್ವಾಮಿ, ಎಂ.ಎಸ್.ಧೋನಿ, ಗಗನ ಯಾತ್ರಿ ಕಲ್ಪನಾ ಚಾವ್ಲಾ ಸೇರಿದಂತೆ ಹಲವರ ಪ್ರತಿಮೆಗಳು ಇಲ್ಲಿವೆ.

ಮ್ಯೂಸಿಯಂಗೆ 'ನೆಹರೂ ಕೋಟ್' ತೊಟ್ಟ ಮೋದಿ ಪ್ರತಿಮೆ

The first Celebrity Wax Museum in Mysore was inaugurated on Sunday

ಶಿಲ್ಪಿ ಹಾಗೂ ಕಲಾವಿದ ಉಮೇಶ್ ಶೆಟ್ಟಿ ಅವರ ಕನಸಿನ ಕೂಸು ಇದಾಗಿದ್ದು, ಇಲ್ಲಿ ವಿಶ್ವ ನಾಯಕರ, ನಟರ, ಕ್ರೀಡಾಪಟುಗಳ ಹಾಗೂ ಧಾರ್ಮಿಕ ಗುರುಗಳು ಸೇರಿದಂತೆ 50 ವ್ಯಕ್ತಿಗಳ ರೂಪಗಳು ಮೈದಾಳಿವೆ.

The first Celebrity Wax Museum in Mysore was inaugurated on Sunday

ಹೊನ್ನಾವರ ಮೂಲದ ಉಮೇಶ್ ಶೆಟ್ಟಿ ಅವರು, ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಲಾ ಶಿಕ್ಷಕರಾಗಿ ಮುಂಬೈ ಮತ್ತು ಪುಣೆಯಲ್ಲಿ ಕೆಲಸ ಮಾಡಿದ್ದಾರೆ. ಈಗ ಮೇಣದ ಪ್ರತಿಮೆ ನಿರ್ಮಾಣದಲ್ಲಿ ತೊಡಗಿದ್ದಾರೆ.

ಇನ್ನಷ್ಟು ಮೈಸೂರು ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The first Celebrity Wax Museum in Mysore was inaugurated on Sunday. Here are the statues of celebrities, including prominent politicians, film actors etc.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more