CD ವಾರ್ ಮುಗೀತು, ಇದೀಗ ಮೈಸೂರಲ್ಲಿ ವೈರಲ್ ಆಗಿದೆ ಆಡಿಯೋ ವಾರ್!
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಸೋದರಿ ಪುತ್ರ ಎಸ್.ಸಿ. ರಾಜೇಶ್ ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ತಗಾದೆ ತೆಗೆದಿದ್ದಾರೆ. ಯಡಿಯೂರಪ್ಪ ಬಂಟ ಕಾ.ಪು. ಸಿದ್ದಲಿಂಗಸ್ವಾಮಿಗೆ ಬೈಗುಳಗಳ ಹಿಡಿಶಾಪ ಹಾಕಿದ್ದಾರೆ.
ಮೈಸೂರು, ಮೇ 06: ಮೈಸೂರಿನಲ್ಲಿ ರಾಜಕೀಯ ಮನರಂಜನೆಗಂತೂ ಇತ್ತೀಚೆಗೆ ಕೊರತೆಯೇ ಇಲ್ಲ! ದಿನೇ ದಿನೇ ಒಂದಿಲ್ಲೊಂದು ತಕರಾರು ಶುರುವಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅಧಿಕಾರದ ಗದ್ದುಗೆಗಾಗಿ ಲಾಭಿ ಹಾಗೂ ಗುದ್ದಾಟ ಕಾಮನ್ ಆದಂತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ನಾಯಕರು ವರುಣಾ ಕ್ಷೇತ್ರದ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ತಮ್ಮ ತಮ್ಮಲ್ಲಿಯೇ ಬೈಗುಳಗಳ ಸುರಿಮಳೆಯನ್ನೇ ಹರಿಸಲು ಶುರುವಿಟ್ಟುಕೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಸೋದರಿ ಪುತ್ರ ಎಸ್.ಸಿ. ರಾಜೇಶ್ ವರುಣಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ತಗಾದೆ ತೆಗೆದಿದ್ದಾರೆ. ಯಡಿಯೂರಪ್ಪ ಬಂಟ ಕಾ.ಪು. ಸಿದ್ದಲಿಂಗಸ್ವಾಮಿಗೆ ಬೈಗುಳಗಳ ಹಿಡಿಶಾಪ ಹಾಕಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ವ್ಯಾಟ್ಸಾಪ್ ನಲ್ಲಿ ಪರಸ್ಪರ ನಿಂದನೆ, ಪ್ರತ್ಯಾರೋಪಗಳನ್ನು ನಡೆಸಿರುವ ಆಡಿಯೋಗಳು ವೈರಲ್ ಆಗಿವೆ.
ಆಡಿಯೋದಲ್ಲೇನಿದೆ...?[ರಾಯಣ್ಣ ಬ್ರಿಗೇಡ್ ನಲ್ಲಿ ರಾಜಕೀಯ ಮಾಡಲ್ಲ: ಈಶ್ವರಪ್ಪ ಸ್ಪಷ್ಟನೆ]

"ಉಪ್ಪು ತಿಂದ ಮನೆ ಋಣ ತೀರಿಸಬೇಕು ಅಂತಾರೆ ಆದರೆ ಉಪ್ಪು ತಿಂದವರ ಮನೆಗೆ ದ್ರೋಹ ಬಗೆಯುತ್ತೀರಲ್ರಿ. ಮೈಸೂರಲ್ಲಿ ಈ ರಾಜೇಶಣ್ಣ ಯಾರು ಅನ್ನೋದು ಗೊತ್ತು. ಮೈಸೂರಿಗೆ ಮಿನಿ ಯಡಿಯೂರಪ್ಪ ಇದ್ದಂತೆ" ಎಂದು ಎಸ್.ಸಿ.ರಾಜೇಶ್, ಸಿದ್ದಲಿಂಗಸ್ವಾಮಿಯವರಿಗೆ ಆವಾಜ್ ಹಾಕಿದ್ದಾರೆ.[ಕಾರ್ಯಕಾರಣಿಯಲ್ಲಿ ಈಶ್ವರಪ್ಪಗೆ ಮಾತಾಡಲು ಅವಕಾಶ: ಬಿಎಸ್ ವೈ]

'ನೀವು ಯಡಿಯೂರಪ್ಪನವರಿಗೆ ಸಂಬಂಧಿ ಇರಬಹುದು ಆದರೆ ನಾವು ನಿಮ್ಮ ಮನೆಯ ಆಳಲ್ಲ. ನಿಮಗೆ ತಾಕತ್ತಿದ್ದರೆ ಗ್ರಾಮಪಂಚಾಯತ್ ಚುನಾವಣೆಯಲ್ಲಿ ನಿಂತು ಗೆದ್ದು ತೋರಿಸಿ. ಆ ಪುಣ್ಯಾತ್ಮನ ಹೆಸರು ಹೇಳಿಕೊಂಡು ಯಾಕೆ ಜೀವನ ಮಾಡುತ್ತಿದ್ದೀರಿ, ಯಡಿಯೂರಪ್ಪನವರ ಸಾಧನೆಗೆ ನೀವು ಸಮ ಅಲ್ಲ. ನಿಮ್ಮಿಂದಲೇ ಯಡಿಯೂರಪ್ಪನವರಿಗೆ ಕೆಟ್ಟಹೆಸರು ಬರುತ್ತಿದೆ" ಎಂದು ಸಿದ್ದಲಿಂಗಸ್ವಾಮಿ ಆರೋಪಿಸಿದ್ದಾರೆ.
ಇಂದು (ಮೇ.6) ಮತ್ತು ನಾಳೆ (ಮೇ 7) ರಂದು ಮೈಸೂರಿನಲ್ಲೇ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಅದಕ್ಕೂ ಮುನ್ನ ಈ ಇಬ್ಬರ ಅನಗತ್ಯ ಜಗಳ ಬಿಜೆಪಿ ನಾಯಕರಲ್ಲಿ ಇರಿಸುಮುರಿಸುಂಟಾಗುವಂತೆ ಮಾಡಿದೆ.












Click it and Unblock the Notifications