ಮೈಸೂರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 10 ವರ್ಷ ಕಠಿಣ ಸಜೆ
ಮೈಸೂರು, ಫೆಬ್ರವರಿ 21: 13 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಮೈಸೂರಿನ ಪೊಕ್ಸೊ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 31 ಸಾವಿರ ದಂಡ ವಿಧಿಸಿದೆ.
ಆರೋಪಿಯು ಬಾಲಕಿಯ ಮೇಲೆ ನಿತ್ಯ ರಾತ್ರಿ ಅತ್ಯಾಚಾರ ಎಸಗುತ್ತಿದ್ದ. ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡುತ್ತಿದ್ದ. ನಂತರ ಬಾಲಕಿಯ ತಾಯಿಯು 2017ರ ನವೆಂಬರ್ 17ರಂದು ಪೊಲೀಸರಿಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ಅವರು 35 ವರ್ಷದ ಆರೋಪಿಗೆ 10 ವರ್ಷಗಳ ಜೈಲು ಸಜೆ ವಿಧಿಸಿದ್ದಾರೆ.

ವೇಶ್ಯಾವಾಟಿಕೆ:ಮೂವರ ಬಂಧನ
ಹೊರರಾಜ್ಯಗಳಿಂದ ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಚಿಕ್ಕಮಗಳೂರಿನ ಎಡತಾಳು ಗ್ರಾಮದ ರಘುನಂದ, ನಿಲುವಾಗಿಲು ಗ್ರಾಮದ ಪ್ರಶಾಂತ್, ಹಾಸನದ ಹಿರೀಸಾವೆ ಗ್ರಾಮದ ಪ್ರದೀಪ್ ಎಂಬ ಆರೋಪಿಗಳನ್ನು ಮೈಸೂರಿನ ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ವಿಜಯನಗರದ 4ನೇ ಹಂತದ ಮನೆಯೊಂದರ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಗೆ ಬಳಕೆ ಮಾಡಿದ್ದ 10,500 ಹಣ, 8 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಇಬ್ಬರು, ಉಡುಪಿ ಹಾಗೂ ಪಶ್ಚಿಮ ಬಂಗಾಳದ ತಲಾ ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications