ವಿಷ ಪ್ರಸಾದ ಪ್ರಕರಣ: ಸಾವಿನ ಸಂಖ್ಯೆ 17ಕ್ಕೆ ಏರಿಕೆ, ಐವರ ಸ್ಥಿತಿ ಗಂಭೀರ

ಮೈಸೂರು, ಡಿಸೆಂಬರ್ 22: ಚಾಮರಾಜನಗರದ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವಿಸಿ ಮೃತಪಟ್ಟಿರುವವರ ಸಂಖ್ಯೆ 17ಕ್ಕೇರಿದ್ದು, ಐವರ ಸ್ಥಿತಿ ಗಂಭೀರವಾಗಿದೆ.

ಕಿಚ್ಚುಗುತ್ತಿ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ 100 ಹೆಚ್ಚು ಮಂದಿಯನ್ನು ಮೈಸೂರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಮೈಸೂರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಂಗನ್(45) ಮೃತಪಟ್ಟಿದ್ದಾರೆ. ರಂಗನ್ ದೊರೆಸ್ವಾಮಿಮೇಡು ಗ್ರಾಮದ ನಿವಾಸಿಯಾಗಿದ್ದರು.

ಈಗಾಗಲೇ ಹಲವು ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Temple tragedy: Death toll rises to 17

ಇಮ್ಮಡಿ ಮಹದೇವಸ್ವಾಮಿ ಹಾಗೂ ಅಂಬಿಕಾ ಅವರನ್ನು ವಿಷಬೆರೆಸಿದ ಆರೋಪದ ಮೇಲೆ ಬಂಧಿಸಲಾಗಿದೆ.ಅಂಬಿಕಾ, ಮಹದೇವಸ್ವಾಮಿ ಇಬ್ಬರದ್ದೂ ಒಂದೇ ಊರು. ಅಂಬಿಕಾ, ವರಸೆಯಲ್ಲಿ ಇಮ್ಮಡಿ ಮಹದೇವಸ್ವಾಮಿಗೆ ಅಕ್ಕನ ಮಗಳು.

ಮೊದಲಿನಿಂದಲೂ ಮಹದೇವಸ್ವಾಮಿಗೆ ಅಂಬಿಕಾ ಮೇಲೆ ಒಲವು ಇತ್ತು, ಈ ಹಿನ್ನೆಲೆ ಅಂಬಿಕಾ ಪತಿ ಮಾದೇಶ್ ಗೆ ಈ ಕಳ್ಳ ಸ್ವಾಮಿಯೇ ಕರೆದು ದೇವಸ್ತಾನದ ಮ್ಯಾನೇಜರ್ ಕೆಲಸ ನೀಡಿದ್ದ. ಮನೆಯಲ್ಲಿ ಅಂಬಿಕಾ ಹೇಳಿದ ಹಾಗೆಯೇ ಮಾದೇಶ್ ನಡೆದುಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+