ಟಿ ನರಸೀಪುರ ಚುನಾವಣಾ ಫಲಿತಾಂಶ 2023: ಎಚ್‌ಸಿ ಮಹದೇವಪ್ಪಗೆ ಗೆಲುವು
ಮೈಸೂರು, ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ ಮತ ಎಣಿಕೆ ಬಹುತೇಕ ಮುಗಿದಿದ್ದು ಟಿ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಚ್‌ಸಿ ಮಹದೇವಪ್ಪ ಅವರು 77,885 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಟಿ ನರಸೀಪುರದಲ್ಲಿ ಮಾಜಿ ಸಚಿವ ಎಚ್‌ಸಿ ಮಹದೇವಪ್ಪ ಅವರು ಜೆಡಿಎಸ್‌ನ ಅಶ್ವಿನ್ ಕುಮಾರ್ ವಿರುದ್ದ ಕಳೆದ ಬಾರಿಯೂ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಟಿ ನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್‌ನ ಅಶ್ವಿನ್ ಕುಮಾರ್ 59,265 ಮತಗಳನ್ನು ಪಡೆದಿದ್ದಾರೆ. ಅವರು ಮಹದೇವಪ್ಪ ಅವರ ವಿರುದ್ಧ 18,620 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಕಳೆದ ಬಾರಿಯೂ ಪ್ರಬಲ ಪೈಪೋಟಿ ನೀಡಿದ್ದ ಎಚ್‌ಸಿ ಮಹದೇವಪ್ಪ ಅವರು ಜೆಡಿಎಸ್‌ನ ಅಶ್ವಿನಿ ಕುಮಾರ್ ವಿರುದ್ಧ ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿ ಅಶ್ವಿನ ಕುಮಾರ್ ಅವರು 83,929 ಮತಗಳನ್ನು ಪಡೆದಿದ್ದರು, ಅವರ ವಿರುದ್ಧ ಎಚ್‌ಸಿ ಮಹದೇವಪ್ಪ 55,451 ಮತಗಳನ್ನು ಪಡೆದಿದ್ದರು. ಅಶ್ವಿನ ಕುಮಾರ್ ಅವರು 28,478 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದರು.












Click it and Unblock the Notifications