ತಿ.ನರಸೀಪುರ: ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತನ ಪತ್ನಿಗೆ 4.12 ಲಕ್ಷ ರೂ. ಪರಿಹಾರ ಚೆಕ್‌ ವಿತರಿಸಿದ H.C.ಮಹದೇವಪ್ಪ

ಮೈಸೂರು, ಜುಲೈ, 13: ಟಿ.ನರಸೀಪುರದಲ್ಲಿ ಹತ್ಯೆಯಾದ ಯುವ ಬ್ರಿಗೇಡ್ ಕಾರ್ಯಕರ್ತನ ವೇಣುಗೋಪಾಲ್ ನಿವಾಸಕ್ಕೆ ಇಂದು (ಜುಲೈ 13) ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಅವರು ಭೇಟಿ ನೀಡಿದ್ದರು. ಈ ವೇಳೆ ಅವರು ಮೃತನ ಪತ್ನಿ ಪೂರ್ಣಿಮಾಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 4.12 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.

ನಂತರ ಡಾ.ಹೆಚ್‌.ಸಿ.ಮಹದೇವಪ್ಪ ಅವರು ಕೊಲೆ ಪ್ರಕರಣದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್‌ಪಿ ಸೀಮಾ ಲಾಟ್ಕರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

H.C.Mahadevappa

ನಂತರ ಈ ಕುರಿತು ಮಾತನಾಡಿದ ಅವರು, ವೇಣುಗೋಪಾಲ ನಾಯಕನ ಹತ್ಯೆ ಧರ್ಮದ ವ್ಯಾಪ್ತಿ ಹಾಗೂ ರಾಜಕೀಯ ವ್ಯಾಪ್ತಿ ಎರಡಕ್ಕೂ ಬರುವುದಿಲ್ಲ. ಬ್ರಿಗೇಡ್ ಕಟ್ಟಿಕೊಂಡು ಹನುಮ ಜಯಂತಿ ಚೆನ್ನಾಗಿಯೇ ಮಾಡಿದ್ದಾರೆ. ಹನುಮ ಜಯಂತಿಗೆ ಯಾರ ಅಡ್ಡಿ, ತಕಾರಾರು ಇರಲಿಲ್ಲ. ಜಯಂತಿ ವೇಳೆ ಬ್ರಿಗೇಡ್‌ನವರಲ್ಲೇ ಬೈಕ್ ನಿಲ್ಲಿಸುವ ಹಾಗೂ ಪುನೀತ್‌ ಪೋಟೋ ವಿಚಾರಕ್ಕೆ ಜಗಳ ನಡೆದಿವೆ. ನಂತರ ಅವರೇ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ಈ ಘಟನೆ ನಡೆದಿದೆ ಎಂದರು.

ಈ ಕುರಿತು ರಾಜಕೀಯ ಪಿತೂರಿ ಮಾಡಬಾರದು. ಕೊಲೆಗೆ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯವರ ಈ ಆಟ ಬಹಳ ಕಾಲ ನಡೆಯುವುದಿಲ್ಲ. ಹತ್ಯೆಯ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನು ಬಿಜೆಪಿ ವಿನಾ ಕಾರಣ ಎಳೆದು ತರುತ್ತಿದೆ. ನನ್ನ ಮಗನ ಮೇಲೆ ಹೀಗೆ ಹಿಂದೆಯೂ ವಿನಾ ಕಾರಣ ಆರೋಪ ಮಾಡಿದ್ದರು. ಮಾಫಿಯಾ ಮಾಡಿದ್ದವರೇ ಮಗನ ಮೇಲೆ ಕೇಸ್ ಕೊಟ್ಟಿದ್ದರು. ಹೀಗೆ ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ ಎಂದರು.

ಪೊಲೀಸರ ತನಿಖೆ ಸರಿ ದಾರಿಯಲ್ಲಿ ಇದ್ದು, ಘಟನೆಯಾದ 6 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಬಿಜೆಪಿಯವರು ಧರ್ಮದ ಕಲರ್ ಕೊಡಲು ಹೊರಟ್ಟಿದ್ದಾರೆ. ಈ ಕೊಲೆ ದೌರ್ಜನ್ಯ ಪ್ರಕರಣ ಅಲ್ಲ.

ಆದರೆ ಎಸ್‌ಸಿ, ಎಸ್ಟಿ ಸಮುದಾಯದ ಯಾರಾದರೂ ಈ ರೀತಿ ಕೊಲೆಯಾದರೆ 8 ಲಕ್ಷ ಪರಿಹಾರ ಕೊಡಬಹುದು. ಪರಿಹಾರದ ಮೊದಲ ಕಂತು 4.12 ಲಕ್ಷವನ್ನು ಈಗ ಕೊಟ್ಟಿದ್ದೇವೆ. ಪ್ರಕರಣದ ಚಾರ್ಜ್ ಶೀಟ್ ಆದ ಮೇಲೆ ಉಳಿದ ಹಣ ಕೊಡುತ್ತೇವೆ. ಕೊಲೆಯಾದ ವ್ಯಕ್ತಿಯ ಪತ್ನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+