ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಮನೆ ನಗರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹವಾ!

ಇಂದಿನಿಂದ ಏಪ್ರಿಲ್ 12 ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅರಮನೆ ನಗರಿ ಮೈಸೂರಿನ ವಿದ್ಯಾರ್ಥಿಗಳು ಉತ್ಸಾಹದಿಂದ ಸಜ್ಜಾದರು.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 30: ಹಲವರು ಕಣ್ಮುಚ್ಚಿ ಕುಳಿತು ಓದಿರುವುದನ್ನು ನೆನಪು ಮಾಡಿಕೊಳ್ಳುತ್ತಿದ್ದರೆ, ಇನ್ಕೆಲವರು ಪ್ರಶ್ನೆ ಹೀಗೆ ಬರಬಹುದಾ ಎಂದು ತಮ್ಮ ಸಹಪಾಠಿಗಳಲ್ಲಿ ಚರ್ಚಿಸುತ್ತಿದ್ದರು. ಹಲವರು ನಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು... ಇಂದು ಜೀವನದ ಪ್ರಮುಖ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಮೈಸೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬಂದಿದ್ದು ಹೀಗೆ. ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ನಡೆಯಲಿರುವ ಪರೀಕ್ಷೆ ಸುಸೂತ್ರವಾಗಬೇಕೆಂದು ಈಗಾಗಲೇ ಸರ್ಕಾರ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ.

ಮೈಸೂರು ಜಿಲ್ಲೆಯಲ್ಲಿ 19,831 ಹುಡುಗರು ಮತ್ತು 19,492 ಹುಡುಗಿಯರು ಪರೀಕ್ಷೆ ಬರೆಯುತ್ತಿದ್ದು, ಒಟ್ಟು 39,323 ವಿದ್ಯಾರ್ಥಿಗಳ ಭವಿಷ್ಯ 134 ಪರೀಕ್ಷಾ ಕೇಂದ್ರಗಳಲ್ಲಿ ಭದ್ರವಾಗಲಿದೆ. ಪರೀಕ್ಷೆಯಲ್ಲಿ ಯಾವುದೇ ನಕಲು ನಡೆಯಬಾರದು ಎನ್ನುವ ಉದ್ದೇಶದಿಂದ ಜಾಗೃತ ದಳವನ್ನು ನೇಮಿಸಲಾಗಿದೆ.[ಸದ್ದು. ನಮ್ಮ ಹುಡುಗರು, ಹುಡುಗಿಯರು ಪರೀಕ್ಷೆ ಬರೀತಾಯಿದಾರೆ]

SSLC examination in Mysuru: students are enthusiastic to write exam.

ಪರೀಕ್ಷೆ ಬೆಳಿಗ್ಗೆ 9.30ರಿಂದ ಆರಂಭವಾಗಿದ್ದು, 9.15 ರಿಂದ 9.30ರೊಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರುವುದು ಕಡ್ಡಾಯವೆಂದು ಈ ಮೊದಲೇ ತಿಳಿಸಲಾಗಿದೆ. ಪರೀಕ್ಷಾ ಕೊಠಡಿಯೊಳಗೆ ವಿದ್ಯಾರ್ಥಿಗಳು ತಮ್ಮ ಗುರುತಿನ ಪತ್ರವನ್ನಲ್ಲದೆ ಇನ್ಯಾವುದೇ ದಾಖಲೆಯನ್ನು ತೆಗೆದುಕೊಂಡು ಹೋಗುವಂತಿಲ್ಲ. ಅಷ್ಟೇ ಅಲ್ಲದೇ ಮೇಲ್ವಿಚಾರಕರು ಕೂಡಾ ಸಂಚಾರಿ ದೂರವಾಣಿಯನ್ನು ಕೊಠಡಿಯೊಳಗೆ ಕೊಂಡೊಯ್ಯಲು ಅನುಮತಿ ನಿರಾಕರಿಸಲಾಗಿದೆ.[ಪರೀಕ್ಷೆಗೆ ತೆರಳುವ ಮುನ್ನ ಈ 10 ಅಂಶಗಳನ್ನು ಮರೆಯಲೇಬೇಡಿ]

SSLC examination in Mysuru: students are enthusiastic to write exam.

ಪರೀಕ್ಷೆಯಲ್ಲಿ ಯಾವುದೇ ನಕಲು ನಡೆಯದಂತೆ ತಡೆಯಲು ಪರೀಕ್ಷಾ ಕೇಂದ್ರದ ನೂರು ಮೀಟರ್ ಅಂತರದಲ್ಲಿ ಇರುವ ಜೆರಾಕ್ಸ್ ಅಂಗಡಿಗಳನ್ನುತೆರೆಯದಂತೆ ಸೂಚನೆ ಹೊರಡಿಸಲಾಗಿದೆ. ಪರೀಕ್ಷೆ ಪ್ರಯುಕ್ತ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

English summary
39,323 students are facing SSLC examination in Mysuru, today. The examination board has taken necessary precautions to avoid unpleasant incidents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X