• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಂಬೂಸವಾರಿ ದಿನದಂದು ಅನಾವರಣವಾಗಲಿದೆ ವಿಶೇಷ ಸ್ತಬ್ಧ ಚಿತ್ರ

By ಮೈಸೂರು ಪ್ರತಿನಿಧಿ
|

ಮೈಸೂರು, ಅಕ್ಟೊಬರ್ 25: ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ದಿನದಂದು ಕೊರೊನಾ ಮಹಾಮಾರಿಯ ವಿಷಯಾಧಾರಿತ ಪುಟ್ಟ ಸ್ತಬ್ಧ ಚಿತ್ರ ಸಾರ್ವಜನಿಕರಿಗೆ ಅನಾವರಣವಾಗಲಿದೆ. ಯುವ ಕಲಾವಿದ ಶಿವಕುಮಾರ್.ಎಚ್.ದೊಡ್ಡರಿಸಿನಕೆರೆ ಕೊರೊನಾ ವಾರಿಯರ್ಸ್ ಗೆ ಅರ್ಪಿಸಿದ್ದಾರೆ.

ಕಲಾವಿದ ಶಿವಕುಮಾರ್.ಎಚ್ ದೊಡ್ಡರಿಸಿನಕೆರೆ ಅವರು ಮಹಾಮಾರಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು ನಾಲ್ಕು ಅಡಿ ಉದ್ದ, ಮೂರು ಅಡಿ ಅಗಲ, ಮೂರು ಅಡಿ ಎತ್ತರವುಳ್ಳ ಪುಟ್ಟ ಸ್ತಬ್ಧಚಿತ್ರವನ್ನು (ಟ್ಯಾಬ್ಲೋ) ತಯಾರಿಸಿದ್ದಾರೆ.

ಮೈಸೂರು: ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಜೀಬ್ರಾ ಮರಿ ಜನನ

ಮೈಸೂರು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಅ.26 ರಂದು ಬೆ.11ಕ್ಕೆ ಕೊರೊನಾ ವಾರಿಯರ್ಸ್ ಅವರು ಸ್ತಬ್ಧ ಚಿತ್ರವನ್ನು ಉದ್ಘಾಟಿಸಲಿದ್ದಾರೆ. ಮೈಸೂರು ನಗರದ ಜನತೆ ಕೊರೊನಾ ವಿರುದ್ಧ ಜಾಗೃತರಾಗಿ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

   Corona ಓಡಿಸೋ ಸಮಯ ದೂರ ಇಲ್ಲಾ | Corona Vaccine | Oneindia Kannada

   ನಗರದ ಪ್ರಮುಖ ವೃತ್ತಗಳಾದ ಚಾಮರಾಜೇಂದ್ರ ಮತ್ತು ಕೃಷ್ಣರಾಜೇಂದ್ರ ವೃತ್ತಗಳಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುವುದು. ಇದರಿಂದ ಟ್ರಾಫಿಕ್ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗದಂತೆ ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಕಲಾವಿದ ಶಿವಕುಮಾರ್ ಎಚ್.ದೊಡ್ಡರಸಿನಕೆರೆ ತಿಳಿಸಿದ್ದಾರೆ.

   English summary
   Coronavirus themed Tablo will be unveiled to the public on the day of the world famous Dasara Jamboo Savari.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X