ಗ್ರಾಮವಾಸ್ತವ್ಯಕ್ಕೆ ಮುನ್ನುಡಿ ಬರೆದ ಮೈಸೂರು ಎಸ್ಪಿ ರವಿ ಡಿ ಚನ್ನಣ್ಣನವರ್

ಮೈಸೂರು, ಅಕ್ಟೋಬರ್ 7 : ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರ ಕರ್ತವ್ಯದ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಎಸ್ಪಿ ರವಿ ಡಿ ಚನ್ನಣ್ಣನವರ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದೆ.

ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಗ್ರಾಮ ವಾಸ್ತವ್ಯ ಮಾಡಿ ಗ್ರಾಮದ ಸಮಸ್ಯೆಗಳನ್ನ ಸ್ಥಳದಲ್ಲೇ ಪರಿಹಾರ ಮಾಡುವುದನ್ನ ನಾವೆಲ್ಲಾ ನೋಡಿದ್ದೇವೆ ಕೇಳಿದ್ದೇವೆ. ಆದರೆ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಹೊಸ ಮುನ್ನುಡಿ ಬರೆದಿದ್ದಾರೆ.

ಈಗ ಮತ್ತೆ ಹುಣಸೂರು ಹಾಗೂ ಕೆ.ಆರ್.ನಗರ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಮಾಡಿದ ಪರಿಣಾಮ ಗ್ರಾಮಸ್ಥರು ನಿಬ್ಬೆರಗಾಗಿದ್ದಾರೆ. ಸದಾ ಜನರಿಂದ ದೂರವಿರುವ ಉನ್ನತ ಅಧಿಕಾರಿಗಳ ನಡುವೆ ಜನರಿಗೆ ಹತ್ತಿರವಾಗುತ್ತಿರುವ ರವಿಯವರು ವಿಭಿನ್ನವಾಗಿ ಕಾಣುತ್ತಾರೆ.

ದೇಶದ ಮೊದಲ ಅಧಿಕಾರಿ

ದೇಶದ ಮೊದಲ ಅಧಿಕಾರಿ

ಐಪಿಎಸ್ ಅಧಿಕಾರಿಯಾಗಿ ಗ್ರಾಮ ವಾಸ್ತವ್ಯ ಮಾಡಿದ ದೇಶದ ಮೊದಲ ಅಧಿಕಾರಿ ಇವರೇ ಎನ್ನಲಾಗಿದೆ. ಪೊಲೀಸರೆಂದರೆ ಜನರಿಗೆ ಭಯವಿದೆ. ಆದ್ದರಿಂದ ಸಾರ್ವಜನಿಕರೊಂದಿಗೆ ಪಾರದರ್ಶಕತೆ ಕಾಯ್ದುಕೊಳ್ಳುವುದು, ಪೊಲೀಸರನ್ನ ಜನಸ್ನೇಹಿಗಳೆಂಬ ವಿಶ್ವಾಸವನ್ನ ಮೂಡಿಸಬೇಕಿದೆ. ಅಪರಾಧ ನಡೆದಾಗ ಯಾವುದೇ ಸಂಕೋಚವಿಲ್ಲದೆ ಪೊಲೀಸರಿಗೆ ತಿಳಿಸುವ ಕಾರ್ಯವನ್ನ ಜನ ಮಾಡಬೇಕು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗದಂತೆ ಅರಿವು ಮೂಡಿಸಲು ಈ ಗ್ರಾಮ ವಾಸ್ತವ್ಯವನ್ನು ಮಾಡಲಾಗುತ್ತಿದೆ.

ಸಮುದಾಯದತ್ತ ಪೊಲೀಸ್‌

ಸಮುದಾಯದತ್ತ ಪೊಲೀಸ್‌

ಸ್ವತಃ ಎಸ್‌ಪಿ ನಮ್ಮ ಸಮಸ್ಯೆಯನ್ನ ಕೇಳಲು ಬಂದಿದ್ದಾರೆ ಎಂದು ತಿಳಿದ ಗ್ರಾಮದ ಜನರ ಗುಂಪುಗುಂಪಾಗಿ ಆಗಮಿಸಿ, ತಮ್ಮ ಅಳಲು ತೋಡಿಕೊಂಡರು. ರಾತ್ರಿ ಇಡೀ ಗ್ರಾಮದ ಸಮಸ್ಯೆಗಳನ್ನ ಆಲಿಸಿದ ರವಿ.ಡಿ.ಚನ್ನಣ್ಣನವರ್ ಖಾಕಿ ಭಯ ಮುಕ್ತಿಗೆ ಗ್ರಾಮ ವಾಸ್ತವ್ಯ ಸಹಕಾರಿಯಾಗಲಿದೆ ಎಂದು ಹೇಳಿದರು. ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿ 'ಸಮುದಾಯದತ್ತ ಪೊಲೀಸ್‌' ವ್ಯವಸ್ಥೆಯನ್ನು ರೂಪಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸರು ಗ್ರಾಮ ವಾಸ್ತವ್ಯ ಆರಂಭಿಸಿದ್ದಕ್ಕಾಗಿ ಇಲ್ಲಿನ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

ಜಿಲ್ಲೆಯಲ್ಲೇ ಹೆಚ್ಚು ಸಾವು

ಜಿಲ್ಲೆಯಲ್ಲೇ ಹೆಚ್ಚು ಸಾವು

ರಾಜ್ಯದ ಮೈಸೂರು ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 400 ಮಂದಿ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಹೆಲ್ಮೆಟ್ ಬಳಸದಿರುವುದು, ಸಂಚಾರ ನಿಯಮ ಪಾಲಿಸದಿರುವುದು ನೋವಿನ ಸಂಗತಿ. ಈ ಬಗ್ಗೆ ವಾಹನ ಸವಾರರು ಹಾಗೂ ಅವರ ಕುಟುಂಬದವರು ಎಚ್ಚರ ವಹಿಸಬೇಕೆಂದರು.

ಪೊಲೀಸ್‌ ಇಲಾಖೆ ವತಿಯಿಂದ ಪಾಠ

ಪೊಲೀಸ್‌ ಇಲಾಖೆ ವತಿಯಿಂದ ಪಾಠ

ಚಾಲನಾ ಪರವಾನಗಿ ಪಡೆಯಲು 8 ನೇ ತರಗತಿ ಕಡ್ಡಾಯ ಮಾಡಿದ್ದು ತೊಂದರೆಯಾಗಿರುವ ಬಗ್ಗೆ ಚನ್ನಸೋಗೆ ರವಿಕುಮಾರ್ ಪ್ರಸ್ತಾಪಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ಶಿಕ್ಷಣ ಕಡ್ಡಾಯಗೊಳಿಸಿದೆ. ಓದಿಲ್ಲವೆಂದರೆ ಅಂತಹವರಿಗೆ ಪೊಲೀಸ್‌ ಇಲಾಖೆ ವತಿಯಿಂದಲೇ 3 ತಿಂಗಳ ಕಾಲ ಉಚಿತ ಪಾಠ ಮಾಡಿ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ, ಆನಂತರ ಉಚಿತವಾಗಿ ಡಿ.ಎಲ್‌ ಮಾಡಿಸಿಕೊಡಲಾಗುವುದೆಂದರು.

ದಲಿತರ ಮನೆಯಲ್ಲಿ ಊಟ

ದಲಿತರ ಮನೆಯಲ್ಲಿ ಊಟ

ಗ್ರಾಮ ವಾಸ್ತವ್ಯ ಮಾಡಿದ ಮನೆಗಳಲ್ಲಿ ಮಾಡಿದ ಅಡುಗೆಯನ್ನು ತಿಂದ ಚನ್ನಣ್ಣನವರ್, ಅವರೊಟ್ಟಿಗೆ ವಾಸ್ತವ್ಯ ಹೂಡಿದ ಅಧಿಕಾರಿಗಳಿಗೆ ಅದೇ ಊಟ ಕೊಡಿಸಿದ್ದಾರೆ. ಗ್ರಾಮವಾಸ್ತವ್ಯ, ಹಾಗೂ ದಲಿತರ ಮನೆಯಲ್ಲಿ ಊಟ ಮಾಡುತ್ತೇನೆ ಎಂದು ಮನೆಗಳಲ್ಲಿ ಮಲಗಲು ಜಾಗ ಹುಡುಕಿ, ಹೋಟೆಲ್‌ಗಳಿಂದ ಊಟ ತರಿಸಿಕೊಂಡು ತಿನ್ನುವ ಜನಪ್ರತಿನಿಧಿಗಳಿಗಿಂತ ತಾವು ವಿಭಿನ್ನ ಎಂಬುದನ್ನು ಸಾಬೀತು ಮಾಡಿದ್ದಾರೆ ಜನಸಾಮಾನ್ಯರು ಕೂಡ ತಮ್ಮ ಮನೆಗಳಲ್ಲಿ ಮಾಡಿದ ಊಟವನ್ನು ತಿಂದದ್ದಲ್ಲದೆ, ಅಡುಗೆ ಮಾಡಿದ ಮನೆಯವರು ಕೂಡ ರವಿಯವರನ್ನು ತಮ್ಮ ಮನೆಯ ಸದಸ್ಯನಂತೆ ಕಂಡಿದ್ದಾರೆ. ಇಂತಹ ಪ್ರಾಮಾಣಿಕ ಹಾಗೂ ಜನನಾಯಕ ಅಧಿಕಾರಿಗಳು ಬಂದರೆ ಗ್ರಾಮವಲ್ಲ. ಜಿಲ್ಲೆಯೇ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಹರೀಶ್ ಯೋಜನೆಯ ಉಪಯೋಗ ಪಡೆಯಿರಿ

ಹರೀಶ್ ಯೋಜನೆಯ ಉಪಯೋಗ ಪಡೆಯಿರಿ

ಯಾವುದೇ ಅಪಘಾತವಾದರೂ 24 ಗಂಟೆಯೊಳಗೆ 25ಸಾವಿರ ರೂ.,ವರೆಗೆ ಚಿಕಿತ್ಸಾ ವೆಚ್ಚವನ್ನು ಹರೀಶ್‌ ಯೋಜನೆಯಡಿ ಸರ್ಕಾರವೇ ಭರಿಸಲಿದೆ. ಅಲ್ಲದೆ ಯಾವುದೇ ಅಸಹಜ ಸಾವು, ಅಪಘಾತ ಸಂಭವಿಸಿದಲ್ಲಿ ಸ‌ರ್ಕಾರದ ವತಿಯಿಂದ ಪರಿಹಾರ ಸಿಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಎಸ್‌ಪಿ ಕಚೇರಿಯಲ್ಲಿ ಪ್ರತ್ಯೇಕ ವಿಭಾಗವಿದ್ದು ಬಳಸಿಕೊಳ್ಳಿರೆಂದು ಮನವಿ ಮಾಡಿದರು.

ಮುಕ್ತವಾಗಿ ಸಮಸ್ಯೆ ಹೇಳಿಕೊಂಡ ಜನ

ಮುಕ್ತವಾಗಿ ಸಮಸ್ಯೆ ಹೇಳಿಕೊಂಡ ಜನ

ತಾಪಂ ಸದಸ್ಯ ಶ್ರೀನಿವಾಸ್‌ ಎಸ್‌.ಐ.ಪುಟ್ಟಸ್ವಾಮಿ ಬಂದ ನಂತರ ಠಾಣೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿದೆ. ತಮ್ಮೂರಿನ ಗ್ರಾಪಂನ ಹಳೇ ರಸ್ತೆ ಒಂದುಕಡೆ ಕಿರಿದಾಗಿದ್ದು, ಜಮೀನು ಮಾಲಿಕರನ್ನು ಮನವೊಲಿಸಿ ರಸ್ತೆ ಅಗಲೀಕರಣಗೊಳಿಸಬೇಕೆಂದರು. ರೈತ ಸಂಘದ ನಾಗಣ್ಣಾಚಾರ್ ನಮ್ಮ ಅಳಿಯ ಪೊಲೀಸ್‌ ಆಗಿದ್ದು, 2ನೇ ಮದುವೆಯಾಗಿ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದಾರೆಂದರು. ಈ ವೇಳೆ ಹಲವು ಸಮಸ್ಯೆ ತಿಳಿಸಿದ ನಾಗರಿಕರಿಗೆ ಪಿಡಿಒ ರಚನಾ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಾಕಷ್ಟು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಸ್‌.ಪಿ.ಯವರ ಗ್ರಾಮ ವಾಸ್ತವ್ಯ ನಮ್ಮಲ್ಲಿ ಅನೇಕ ಪಾಠ ಕಲಿಸಿದೆ ಎಂದರು. ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಗ್ರಾಮಕ್ಕೆ ಆಗಮಿಸಿದ ಎಸ್‌.ಪಿ.ಯವರನ್ನು ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿ ಬರಮಾಡಿಕೊಂಡರು.

ಎಲ್ಲಾ ಆಗುಹೋಗಿಗೂ ಗಸ್ತು ಪೊಲೀಸರೇ ಹೊಣೆ

ಎಲ್ಲಾ ಆಗುಹೋಗಿಗೂ ಗಸ್ತು ಪೊಲೀಸರೇ ಹೊಣೆ

ಇದೀಗ ಪ್ರತಿ ಗ್ರಾಮಕ್ಕೂ ಒಬ್ಬ ಪೇದೆಯನ್ನು ನೇಮಿಸಲಾಗುತ್ತಿದ್ದು, ಇಡೀ ಗ್ರಾಮದ ಎಲ್ಲಾ ಆಗು ಹೋಗುಗಳು ಸೇರಿದಂತೆ ಎಲ್ಲಾ ಜವಾಬ್ದಾರಿಯೂ ಆತನದ್ದೇ ಆಗಿರುತ್ತದೆ. ಗ್ರಾಮದಲ್ಲಿ ನಡೆಯುವ ಅಪರಾಧಗಳು-ಅಪರಿಚಿತರ ಬಗ್ಗೆ ಮಾಹಿತಿ ನೀಡಬೇಕು. ಎಲ್ಲಾ ಇಲಾಖೆ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆ ಸೇರಿದಂತೆ ಸರ್ಕಾರ ಯೋಜನೆಗಳ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಇಲಾಖೆ ಹೊರ ತಂದಿದೆ. ಈ ಕಿರು ಹೊತ್ತಿಗೆಯನ್ನು ಪ್ರತಿ ಗ್ರಾಪಂಗೆ ವಿತರಿಸಲಾಗಿದ್ದು ಮಾಹಿತಿ ಪಡೆಯಬೇಕೆಂದು ಮೈಸೂರು ಎಸ್‌.ಪಿ.ರವಿ ಡಿ.ಚನ್ನಣ್ಣನವರ ತಿಳಿಸಿದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+