ಬೈಕ್‌ನಿಂದ ಬಿದ್ದು 6 ತಿಂಗಳ ಮಗು ಸಾವು, ತಂದೆ-ತಾಯಿಗೆ ಗಾಯ
ಮೈಸೂರು, ಏ.24: ರಸ್ತೆ ಅಪಘಾತದಲ್ಲಿ ಬೈಕ್‌ನಿಂದ ಬಿದ್ದು 6 ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಪರಿಯಾಪಟ್ಟಣದ ಕಂಪಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಾರ್ದ್ವಿಕ್ ಮೃತ ಮಗು. ತಂದೆ-ತಾಯಿಯೊಂದಿಗೆ ಖುಷಿ ಖುಷಿಯಾಗಿ ಬರುತ್ತಿದ್ದ ಮಗು ತಂದೆ-ತಾಯಿ ಎದುರೇ ಮೃತಪಟ್ಟಿದೆ.
ಹಾರ್ದ್ವಿಕ್ ತಂದೆ ಮಧು ಹಾಗೂ ತಾಯಿ ಅರ್ಪಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧು ಹಾಗೂ ಅರ್ಪಿತಾ ಹುಣಸೂರಿನ ಅತ್ತಿಗುಪ್ಪೆ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

ಮಧು, ಅರ್ಪಿತಾ ಹಾಗೂ ಹಾರ್ದ್ವಿಕ್ ಸತ್ಯಗಾಲದಿಂದ ಹಬ್ಬ ಮುಗಿಸಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications