ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯನ ಅಭಿಮಾನಿಗಳಿಂದ ಮುಗಿಲು ಮುಟ್ಟಿದ ಸಂಭ್ರಮ
ಮೈಸೂರು, ಮೇ, 18: ದೇವರಾಜ ಅರಸು ನಂತರ ಎರಡನೇ ಬಾರಿಗೆ ಸಿದ್ದರಾಮಯ್ಯ ಅವರು ರಾಜ್ಯದ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿ ಮಂತ್ರಿ ಸ್ಥಾನ ಅಲಂಕರಿಸುತ್ತಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಅವರ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಹಲವರು ಸಿದ್ದರಾಮಯ್ಯ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.
ಸಿದ್ದರಾಮಯ್ಯ ಮತ್ತೆ ಸಿಎಂ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟ ಆಗುತ್ತಿದ್ದಂತೆ, ಸಿದ್ದರಾಮಯ್ಯ ಅವರ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಅಲ್ಲದೆ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಿದ್ದರಾಮಯ್ಯ ಅವರು ಮೇ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಗುರುವಾರ ಪ್ರಕಟವಾಗುತ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಸಿದ್ದರಾಮಯ್ಯ ಅವರಿಗೆ ಶುಭ ಕೋರಿದರು. ಸಿದ್ದರಾಮನಹುಂಡಿಯಲ್ಲಿ ಮೂರು ವರ್ಷಕ್ಕೊಮ್ಮೆ ಮಾಡುವ ಸಿದ್ದೇಶ್ವರಸ್ವಾಮಿ ಜಾತ್ರೆಯಲ್ಲಿ ಹೇಗಿರತ್ತದೆಯೋ ಹಬ್ಬದ ವಾತಾವರಣ, ಅದೇ ಉತ್ಸಾಹ ಗುರುವಾರ ಬೆಳಗ್ಗೆ ನಿರ್ಮಾಣ ಆಗಿತ್ತು.
ಹುಟ್ಟೂರಲ್ಲಿ ಸಂಭ್ರಮ
ಕಳೆದ ಎರಡು ದಿನದಿಂದ ಸಿದ್ದರಾಮಯ್ಯ ಅವರ ಹುಟ್ಟೂರಾದ ಸಿದ್ದರಾಮನಹುಂಡಿಯಲ್ಲಿ ಸಾಹೇಬ್ರು ಯಾವಾಗ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾದು ಕುಳಿತಿದ್ದರು. ಅದಕ್ಕೆ ಪೂರಕವೆಂಬಂತೆ ಗುರುವಾರ ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ಸಿಎಂ ಎಂಬ ಸುದ್ದಿ ಪ್ರಕಟವಾಗುತ್ತಿದಂತೆ ಸಿದ್ದರಾಮನಹುಂಡಿಯಲ್ಲಿ ಗ್ರಾಮಸ್ಥರು ಸಂತೋಷದಿಂದ ಸಂಭ್ರಮಿಸಿದರು. ಇನ್ನು ಸಿದ್ದರಾಮಯ್ಯ ಅಭಿಮಾನಿಗಳು ನೃತ್ಯ ಮಾಡಿದ್ದು, ಯುವಕರು ಸಿದ್ದರಾಮಯ್ಯ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಜೈಕಾರ ಹಾಕಿದರು.
30 ಅಡಿ ಕಟೌಟ್ ತಯಾರಿ
ಸಿದ್ದರಾಮನಹುಂಡಿ ಹಾಗೂ ಬಿದರಹಳ್ಳಿ ಹುಂಡಿಯಲ್ಲಿ ಸಿದ್ದರಾಮಯ್ಯ ಸಿಎಂ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ ಅಭಿಮಾನಿಗಳು 30 ಅಡಿ ಎತ್ತರದ ಕಟೌಟ್ ಕಟ್ಟಿದ್ದಾರೆ. ಇನ್ನು ಕೆಲವು ಕಡೆ ಪ್ರಮಾಣ ವಚನದ ಸುದ್ದಿಗಳನ್ನು ಹಳ್ಳಿಗಳಿಗೆ ಬಿತ್ತರಿಸಲು ಎಲ್‌ಇಡಿ ಸ್ಕ್ರೀನ್ ಕೂಡ ಆರ್ಡರ್ ಕೊಟ್ಟಿದ್ದಾರೆ. ಊರಿನಲ್ಲಿ ಕೆಲವು ಸಿದ್ದರಾಮಯ್ಯ ಆಪ್ತರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಲು ಹೊಸ ಬಟ್ಟೆ ಹೊಲಿಸಿ ಇಟ್ಟುಕೊಂಡಿದ್ದಾರೆ.
ಅಣ್ಣ ಮತ್ತೆ ಸಿಎಂ ಆದ್ರು?
ಅಣ್ಣ ಸಿಎಂ ಆದರೆ ಖುಷಿ ಆಗದೆ ಇರುತ್ತಾ? ಪ್ರಮಾಣ ವಚನ ದಿನ ಯಾವಾಗ ಬರುತ್ತದರಯೋ ಎಂದು ಕಾಯುತ್ತ ಇದ್ದೇವೆ. ಊರಿಗೆ ಇಂತಹ ಕೆಲಸ ಆಗಬೇಕೆಂಬ ಬೇಡಿಕೆ ಏನಿಲ್ಲ. ಸಿಎಂ ಆಗಿರುವುದರಿಂದ ಏನು ಬೇಕು ಎಲ್ಲವನ್ನೂ ಸಿದ್ದರಾಮಯ್ಯ ಅವರು ಮಾಡುತ್ತಾರೆ. ಇಡೀ ರಾಜ್ಯವೇ ಅಭಿವೃದ್ಧಿ ಕಾಣುವ ಕೆಲಸ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಅವರ ತಮ್ಮ ಸಿದ್ದೇಗೌಡ ಸಂತಸ ವ್ಯಕ್ತಪಡಿಸಿದರು.
ಈಗಾಗಲೇ ಕರ್ನಟಕದ ಸಿಎಂ ಸಿದ್ದರಾಮಯ್ಯ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಮತ್ತೊಂದೆಡೆ ಹಲವೆಡೆ ಈ ವಿಚಾರವನ್ನು ತಿಳಿದ ತಕ್ಷಣ ಅಭಿಮಾನಿಗಳು ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲು ಮುಂದಾಗಿದ್ದಾರೆ. ಬರೀ ಯುವಕರಲ್ಲದೆ ವಯಸ್ಸಾದವರು ಕೂಡ ಸಿದ್ದರಾಮಯ್ಯ ಸಿಎಂ ಎನ್ನುವ ಸುದ್ದಿ ಕೇಳಿ ಸಂಭ್ರಮಿಸುತ್ತಿದ್ದಾರೆ.












Click it and Unblock the Notifications