ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಹಿಣಿ ವರ್ಗಾವಣೆ ತಡೆಯಿಂದ ಮುಜುಗರವಾಗಿಲ್ಲ: ಸಿದ್ದರಾಮಯ್ಯ

By Yashaswini
|
Google Oneindia Kannada News

ಮೈಸೂರು, ಮಾರ್ಚ್ 9 : ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ತಡೆಯಿಂದ ಸರ್ಕಾರಕ್ಕೆ ಮುಜುಗರವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆಯಿಂದ ಸರ್ಕಾರಕ್ಕೆ ಮುಜುಗರವಾಗಿಲ್ಲ. ತಡೆ ನೀಡಿದರೆ ನಾವೇನು ಮಾಡುವುದು, ಇದು ಆಡಳಿತಾತ್ಮಕ ವಿಚಾರ ಸಾರ್ವಜನಿಕ ಸ್ಥಳದಲ್ಲಿ ಚರ್ಚೆ ಮಾಡುವುದಿಲ್ಲ ಎಂದು ಜಾರಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಧ್ವಜದ ಬಗ್ಗೆ ನಡೆಯುತ್ತಿರುವ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾಡಧ್ವಜದ ರೂಪುರೇಷೆಗಳನ್ನು ಕೇಂದ್ರದ ಒಪ್ಪಿಗೆಗೆ ಕಳುಹಿಸಲಾಗಿದೆ. ಇದು ರಾಷ್ಟ್ರಧ್ವಜದಂತೆ ನಾಡಧ್ವಜ ಅಷ್ಟೇ. ಕನ್ನಡ ಧ್ವಜವೇ ಬೇರೆ ನಾಡ ಧ್ವಜವೇ ಬೇರೆ. ಇದನ್ನು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ, ಕನ್ನಡ ರಾಜ್ಯೋತ್ಸವದಂದು ಬಳಸಬಹುದು. ರಾಷ್ಟ್ರ ಧ್ವಜದಂತೆ ಈ ಧ್ವಜಕ್ಕೂ ಸಹ ತನ್ನದೇ ಆದ ಗೌರವಗಳಿರುತ್ತದೆ. ಕೆಲ ನಿಯಮಗಳನ್ನು ರೂಪಿಸಲಾಗುತ್ತದೆ. ಎಲ್ಲರೂ ಅದಕ್ಕೆ ಗೌರವಿಸಬೇಕಾಗುತ್ತದೆ ಎಂದರು.

ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ತಡೆರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಟಿಯಿಂದ ತಡೆ

ವರುಣಾ ಕ್ಷೇತ್ರದಲ್ಲಿ ಹೆಚ್. ಡಿ ಕುಮಾರಸ್ವಾಮಿಯವರ ಕುಮಾರಪರ್ವ ಕಾರ್ಯಕ್ರಮ ಮಾಡಲಿ ತೊಂದರೆಯಿಲ್ಲ. ಸಾರ್ವಜನಿಕ ಕಾರ್ಯಕ್ರಮ, ಯಾತ್ರೆ ಎಲ್ಲರೂ ಮಾಡಬಹುದು. ಆದರೆ ಅಲ್ಲಿ ಗೆಲ್ಲೋಕ್ಕಾಗುತ್ತಾ ? ಕಳೆದ ಬಾರಿ ಕೂಡಾ ಕಾರ್ಯಕ್ರಮ, ಚುನಾವಣಾ ಪ್ರಚಾರ ಮಾಡಿದ್ದರು. ಎಷ್ಟು ಮತಗಳಿಸಿದ್ದರು ಎಂದು ಪ್ರಶ್ನಿಸಿದರು.

Siddaramaiah speaks about IAS officeres' transfers in Karnataka

ಲೋಕಾಯುಕ್ತ ಸಂಸ್ಥೆ ನಾಶ ಮಾಡಿದ್ದು ಸಿದ್ದರಾಮಯ್ಯ ಎಂಬ ವಿಶ್ವನಾಥ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಇದೇ ವೇಳೆ ಇಂಧನ ಸಚಿವ ಡಿಕೆಶಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ 4 ತಿಂಗಳಿಗೆ ಆಗುವಷ್ಟು ವಿದ್ಯುತ್, ನೀರು ಸಂಗ್ರಹಿಸಲಾಗಿದೆ. ಪಾವಗಡದ ಸೋಲಾರ್ ಪಾರ್ಕ್ ನಿಂದ ಗಾಗಲೇ 600 ಮೆಗಾವ್ಯಾಟ್ ವಿದ್ಯುತ್ ಸಂಗ್ರಹಿಸಲಾಗಿದೆ ಎಂದರು.

ದೇವೇಗೌಡ್ರು ಯಜಮಾನ್ರು, ಅವರನ್ನು ಟೀಕಿಸೋಲ್ಲ: ಸಿದ್ದರಾಮಯ್ಯದೇವೇಗೌಡ್ರು ಯಜಮಾನ್ರು, ಅವರನ್ನು ಟೀಕಿಸೋಲ್ಲ: ಸಿದ್ದರಾಮಯ್ಯ

ರೋಹಿಣಿ ಸಿಂಧೂರಿ ವರ್ಗಾವಣೆ ತಡೆ ಕಾರಣ ಮೈಸೂರು ಜಿಲ್ಲಾಧಿಕಾರಿಯಾಗಿ ರಂದೀಪ್ ಅವರೇ ಕೆಲ ದಿನ ಮುಂದುವರಿಯಲಿದ್ದಾರೆ. ಅವರನ್ನು ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

English summary
''We are not feeling bad about The Central Administrative Tribunal (CAT)'s decision of staying the transfer of Hassan Deputy Commissioner Rohini Sindhuri" Karnataka chief minister Siddaramaiah told in Mysuru today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X