ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಶಿಲ್ಪಾನಾಗ್ ಅಸಮಾಧಾನ!

ಮೈಸೂರು, ಜೂನ್ 04; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮತ್ತೊಮ್ಮೆ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

ಶುಕ್ರವಾರ ಸುತ್ತೂರು ಶಾಖಾ ಮಠದಲ್ಲಿ ಮಾತನಾಡಿದ ಶಿಲ್ಪಾನಾಗ್, "ಯಾರಿಗೂ ಸಹ ನಾನು ಮಾಡಿದ್ದೇ ಸರಿ ಎಂಬ ಭಾವನೆ ಬೇಡ. ಒಬ್ಬರ ಅಹಂಕಾರದಿಂದ ವ್ಯವಸ್ಥೆ ಹಾಳಾಗುತ್ತಿದೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಎಲ್ಲವೂ ನಾನೇ ಸರಿ ಎಂಬುದು ಸರಿಯಲ್ಲ" ಎಂದರು.

"ಜಿಲ್ಲಾಡಳಿತದಿಂದ ತುಂಬಾ ಲೋಪದೋಷ ಇತ್ತು. ಪಾಲಿಕೆಯಿಂದ ಸಾಕಷ್ಟು ಕೋವಿಡ್ ಕೆಲಸ ಆಗಿದೆ. ಈ ನಡುವೆ ಜಿಲ್ಲಾಧಿಕಾರಿಗಳು ಹೆಚ್ಚು ಆಸಕ್ತಿ ತೋರಿಸಬಹುದಿತ್ತು. ನಾನು ಎಲ್ಲ ಸಂಸ್ಥೆಗಳ‌ ಜೊತೆ ಮಾತಾಡಿ ಕೋವಿಡ್ ನಿಯಂತ್ರಣಕ್ಕೆ ಸಿದ್ಧರೆ ಮಾಡಿದ್ದವು. ಅಹಂಕಾರ ಇಷ್ಟು ದೊಡ್ಡದಾಗಿ ಇರಬಾರದು. ಎಲ್ಲವನ್ನು, ಎಲ್ಲರನ್ನ ಸಮಾನಾಗಿ ನೋಡಬೇಕು" ಎಂದು ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Shilpa Nag Upset With Rohini Sindhuri Again

"ನನಗೆ ಅಹಂಕಾರ ಇರಲಿಲ್ಲ, ಕೆಲಸ ಮಾಡಬೇಕಿದ್ದಿದ್ದು ನನ್ನ ಉದ್ದೇಶ. ಸಿಎಸ್‌ಆರ್ ಫಂಡ್ ಬಗ್ಗೆ ಯಾರು ಜವಾಬ್ದಾರಿ ತೆಗೆದುಕೊಂಡಿಲ್ಲ. ಹಾಗಾಗಿ ನಾನೇ ಇದರ ಜವಾಬ್ದಾರಿ ತೆಗೆದುಕೊಂಡೆ. ಎಲ್ಲರೂ ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಿದ್ದಾರೆ" ಎಂದು ಶಿಲ್ಪಾನಾಗ್ ತಿಳಿಸಿದರು.

"ರಾಜೀನಾಮೆ ನನ್ನ ದುಡುಕಿನ ನಿರ್ಧಾರ ಅಲ್ಲ. ರಾಜೀನಾಮೆ ನಿರ್ಧಾರ ನೋವಿನಿಂದ ತೆಗೆದುಕೊಂಡಿದ್ದು. ವಾರ್ ರೂಮ್‌ನಲ್ಲಿ ಲೋಪದೋಷಗಳಿತ್ತು. ಕೋವಿಡ್ ನಿಯಂತ್ರಣದಲ್ಲಿ ಕೆಲಸ ಮಾಡಿದ್ದೇನೆ. ನಿಯಂತ್ರಣಕ್ಕೆ ಶ್ರಮಿಸಿದ್ದೇನೆ. ನಾನು ಯಾವುದೇ ರೀತಿ ತಪ್ಪು ಮಾಡಿದ್ದರೆ ಕ್ಷಮಿಸಿ" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+