ಮೈಸೂರಿನಲ್ಲಿ ಜರ್ಮನಿ ಮಹಿಳೆಯ ಮುಖ, ಎದೆ ಕಚ್ಚಿ, ಪರಾರಿಯಾದ ಕಾಮುಕ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಹಿಂತಿರುಗುತ್ತಿದ್ದ ಜರ್ಮನಿ ಮೂಲದ ಇಪ್ಪತ್ತೇಳು ವರ್ಷದ ಮಹಿಳೆ ಜೆನ್ನಿಫರ್ ಮೇಲೆ ಆಗಂತುಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆಕೆಯ ಎದೆ ಹಾಗೂ ಮುಕಕ್ಕೆ ಕಚ್ಚಿ ಗಾಯಗೊಳಿಸಿದ್ದಾನೆ

ಮೈಸೂರು, ಫೆಬ್ರವರಿ 21: ಪ್ರಸಿದ್ಧ ಧಾರ್ಮಿಕ ಸ್ಥಳದಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ವಿದೇಶಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಲೈಂಗಿಕ ಕಿರುಕುಳ ನೀಡಿ, ಹಣ ದೋಚಿ ಪರಾರಿಯಾದ ಘಟನೆ ನಡೆದಿದೆ. ಧಾರ್ಮಿಕ ಸ್ಥಳವಾದ ಚಾಮುಂಡಿಬೆಟ್ಟದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.

ಜರ್ಮನಿ ಮೂಲದ 27 ವರ್ಷದ ಮಹಿಳೆ ಜನ್ನಿಫರ್ ಆಗುಂತಕನಿಂದ ಪಾರಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರ ಸಂಜೆ ನಗರ ಸಾರಿಗೆ ಬಸ್ ನಲ್ಲಿ ಜನ್ನಿಫರ್ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ದೇವಿಯ ದರ್ಶನದ ಬಳಿಕ ಮೆಟ್ಟಿಲುಗಳ ಮೂಲಕವೇ ಬೆಟ್ಟದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.[ಬೆಳ್ಳಂದೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ]

Sexual assault on German woman in Mysuru

ರಾತ್ರಿ 7.15ರ ವೇಳೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಎದುರಾಗಿ ಜನ್ನಿಫರ್ ಮೇಲೆ ದಾಳಿ ನಡೆಸಿದ್ದಾನೆ. ಆಕೆ ಗಾಬರಿಗೊಂಡು ಸಹಾಯಕ್ಕೆ ಕೂಗಿಕೊಂಡಿದ್ದಾರೆ. ಆದರೆ ಆದಾಗಲೇ ಕತ್ತಲು ಕವಿಯುತ್ತಿದ್ದುದರಿಂದ ಜನ ಸಂಚಾರ ವಿರಳವಾಗಿತ್ತು. ಆ ಆಗುಂತಕ ವಿದೇಶಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಮುಖ ಹಾಗೂ ಎದೆ ಭಾಗವನ್ನು ಕಚ್ಚಿದ್ದಾನೆ.

ಆತನ ವರ್ತನೆಯಿಂದ ಆಘಾತಕ್ಕೀಡಾದ ಜನ್ನಿಫರ್, ನನ್ನನ್ನು ಬಿಟ್ಟುಬಿಡು ಎಂದು ಅಂಗಲಾಚಿದ್ದಾರೆ. ಸಹಾಯಕ್ಕಾಗಿ ಕೂಗಿದ್ದಾರೆ. ಜನರು ಸೇರಬಹುದು ಎಂಬ ಭೀತಿಯಲ್ಲಿ ಆ ಅಪರಿಚಿತ ಆಕೆ ಬಳಿಯಿದ್ದ 2 ಸಾವಿರ ರುಪಾಯಿ ನಗದು ಕಸಿದುಕೊಂಡು ಪರಾರಿಯಾಗಿದ್ದಾನೆ. ಆ ನಂತರ ಜನ್ನಿಫರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.[ಎಚ್ ಆರ್ ಬಿಆರ್ ಲೇಔಟ್ ನಲ್ಲಿ ಗಗನ ಸಖಿ ಮೇಲೆ ಲೈಂಗಿಕ ದೌರ್ಜನ್ಯ]

ನಗರದ ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಯಲ್ಲಿ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದೆ. ಮೂರು ತಿಂಗಳ ಭಾರತ ಪ್ರವಾಸಕ್ಕಾಗಿ ಬಂದಿರುವ ಜನ್ನಿಫರ್, ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣ ವೀಕ್ಷಣೆಗಾಗಿ ಸೋಮವಾರ ಬಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+