ಮೈಸೂರಿನಲ್ಲಿ ಬಂದೂಕು ಸಹಿತ ಜಿಂಕೆ ಮಾಂಸ ವಶ: ಆರೋಪಿ ಪರಾರಿ

ಮೈಸೂರು ಡಿಸೆಂಬರ್ 21: ಜಿಂಕೆಯನ್ನು ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಸಂದರ್ಭ ಅರಣ್ಯಾಧಿಕಾರಿಗಳನ್ನೊಳಗೊಂಡ ತಂಡ ದಾಳಿ ಮಾಡಿದ್ದು ಬಂದೂಕು ಮತ್ತು ಮಾಂಸವನ್ನು ಸ್ಥಳದಲ್ಲೇ ಬಿಟ್ಟು ಆರೋಪಿ ಪರಾರಿಯಾಗಿರುವ ಘಟನೆ ಪಿರಿಯಾಪಟ್ಟಣದ ಆನೆಚೌಕೂರು ವಲಯದಲ್ಲಿ ಬುಧವಾರ ನಡೆದಿದೆ.

ಆನೆಚೌಕೂರು ಭಾಗ 1 ಸಿಪಿಟಿ1 ಅರಣ್ಯದ ಜಮೀನಿನ ಪಕ್ಕದಲ್ಲಿ ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಚೀಲದಲ್ಲಿ ತುಂಬಿಸಿಕೊಂಡು ಬುಧವಾರ ಬೆಳಗಿನ ಜಾವ ತನ್ನ ಮನೆಯತ್ತ ತೆರಳುತ್ತಿದ್ದನು. ಇದೇ ವೇಳೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ತಂಡ ಆತನನ್ನು ಕಂಡು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ಸಂದರ್ಭ ಆತ ಜಿಂಕೆಯ ತಲೆ, ಕಾಲು ಮಾಂಸ ಮತ್ತು ಬಂದೂಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.[ಬಂಡೀಪುರದಲ್ಲಿ ಅರಣ್ಯಾಧಿಕಾರಿಗಳಿಗೆ ಜಿಂಕೆ ಮಾಂಸ, ಮದ್ಯ ಪೂರೈಸಿದರೆ?]

Seizure of venison with a gun in Mysore

ಅರಣ್ಯ ಸಿಬ್ಬಂದಿ ಮಾಂಸ ಮತ್ತು ಬಂದೂಕನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಬಂದೂಕು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಅರಣ್ಯಾಧಿಕಾರಿಗಳು ಬಂದೂಕಿನ ಮಾಲೀಕರು ಪತ್ತೆಯಾದಲ್ಲಿ ಆರೋಪಿ ಯಾರು ಎಂಬುವುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ.[ನಾಗರಹೊಳೆ ಅರಣ್ಯದಲ್ಲಿ ಜಿಂಕೆ ಬೇಟೆಗಾರನ ಬಂಧನ]

ಘಟನೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ಪಿರಿಯಾಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ನಂಜಪ್ಪ, ಅರಣ್ಯ ರಕ್ಷಕರಾದ ವಿರೇಶ್, ಸಂಜಯ್, ಪೃಥ್ವಿ ಸುಹಾರಿಸ್, ಸಿಬ್ಬಂದಿ ರಾಘವೇಂದ್ರ, ಅಪ್ಪಣ್ಣ ಮೊದಲಾದವರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+