ಮೈಸೂರಿನಲ್ಲಿ ಐದು ಪೈಸೆಗೆ ಚೆಕ್ ಪಡೆದ ಬ್ಯಾಂಕ್!
ಮೈಸೂರಿನ ವಿಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ತನ್ನ ಕ್ರೆಡಿಟ್ ಕಾರ್ಡ್ ಸೇವೆಯನ್ನ ಸ್ಥಗಿತಗೊಳಿಸಲು ಖಾತೆಯಲ್ಲಿ ಬಾಕಿಯಿದ್ದ 5 ಪೈಸೆಯನ್ನ ಖಾತೆದಾರ ಚೆಕ್ ಮೂಲಕ ನೀಡಿರುವ ಅಪರೂಪದ ಘಟನೆ ನಡೆದಿದೆ.
ಮೈಸೂರು, ಮಾರ್ಚ್ 21 : ಐದು ಪೈಸೆಗೆ ಚೆಕ್ ಕೊಡೋದಾ? ಸಾಧ್ಯಾನೇ ಇಲ್ಲ ಅಂದ್ಕೋತಾ ಇದೀರಾ? ಹಾಗಿದ್ರೆ ಈ ಸುದ್ದಿ ಓದಿ.
ಮೈಸೂರಿನ ವಿಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ತನ್ನ ಕ್ರೆಡಿಟ್ ಕಾರ್ಡ್ ಸೇವೆಯನ್ನ ಸ್ಥಗಿತಗೊಳಿಸಲು ಖಾತೆಯಲ್ಲಿ ಬಾಕಿಯಿದ್ದ 5 ಪೈಸೆಯನ್ನ ಖಾತೆದಾರ ಚೆಕ್ ಮೂಲಕ ನೀಡಿರುವ ಅಪರೂಪದ ಘಟನೆ ನಡೆದಿದೆ.[ಕಪ್ಪ ಕಾಣಿಕೆ ಆರೋಪ ನೂರಕ್ಕೆ ನೂರು ಸತ್ಯ: ಯಡಿಯೂರಪ್ಪ]
ವಿಜಯನಗರದ ಮೊದಲ ಹಂತದ ನಿವಾಸಿ ಸತೀಶ್ ಎಂಬುವರು ವಿಜಯನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ 25 ಸಾವಿರ ಠೇವಣೆ ಹಣ ಇಟ್ಟು 5 ವರ್ಷಗಳ ಹಿಂದೆ ಕ್ರೆಡಿಟ್ ಕಾರ್ಡ್ ಪಡೆದಿದ್ದರು. ಆದರೆ ಕ್ರೆಡಿಟ್ ಕಾರ್ಡ್ ಬಳಕೆ ದುಬಾರಿಯಾದ ಹಿನ್ನಲೆಯಲ್ಲಿ ಬೇಸತ್ತ ಸತೀಶ್ ಠೇವಣಿ ಇಟ್ಟಿದ್ದ ತಮ್ಮ 25 ಸಾವಿರ ಹಣವನ್ನ ವಾಪಸ್ ಪಡೆದಿದ್ದರು.[ಮೈಸೂರಿನಲ್ಲಿ ಮಂಡ್ಯರಮೇಶ್ ರಿಂದ ಬೇಸಿಗೆ ಶಿಬಿರ]

ಬ್ಯಾಂಕಿನ ಸೂಚನೆ ಮೇರೆಗೆ ಐದು ಪೈಸೆ ಚೆಕ್!
ಇನ್ನು ಕ್ರೆಡಿಟ್ ಕಾರ್ಡ್ ಸೇವೆಯನ್ನ ಸ್ಥಗೀತಗೊಳಿಸುವಂತೆ ಬ್ಯಾಂಕ್‌ನವರಿಗೆ ಕೇಳಿದಾಗ ಕ್ರೆಡಿಟ್ ಕಾರ್ಡ್ ಸೇವೆಯನ್ನ ಪರೀಶಿಲಿಸಿದ್ದಾರೆ. ಬಳಿಕ ಬ್ಯಾಂಕ್‌ನವರು ನಿಮ್ಮ ಖಾತೆಯಲ್ಲಿ 5 ಪೈಸೆ ಬಾಕಿಯಿದೆ. ಅದನ್ನ ಪಾವತಿಸಿದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸಬಹುದು ಎಂದಿದ್ದಾರೆ.
ಸತೀಶ್ ಬ್ಯಾಂಕ್‌ನವರು ತಮಾಷೆ ಮಾಡುತ್ತಿದ್ದಾರೆ ಎಂದು ಅನುಮಾನಗೊಂಡು ಪುನಃ ಬ್ಯಾಂಕ್‌ನವರನ್ನ ಕೇಳಿದಾಗ ಬ್ಯಾಂಕ್‌ನ ಹಣಕಾಸು ವ್ಯವಸ್ಥೆಯ ಪ್ರಕಾರ 5 ಪೈಸೆ ಬಾಕಿ ಪವಾತಿಸುವುದು ಅನಿರ್ವಾಯವೆಂದು ಹೇಳಿದ್ದಾರೆ.[ವಂಚನೆ ಪ್ರಕರಣ: ಇನ್ನಿಬ್ಬರು ಆರೋಪಿಗಳ ಬಂಧನ]
ಮುಗುಳ್ನಗುತ್ತಲೇ ಚೆಕ್ ನೀಡಿದ ಸತೀಶ್
5 ಪೈಸೆ ಈಗ ಚಾಲ್ತಿಯಲ್ಲಿಲ್ಲ. ಅದನ್ನ ಎಲ್ಲಿಂದ ತರುವುದು ಎಂಬ ತಲೆಬಿಸಿಯಲ್ಲಿ ಸಿಲುಕಿದ ಸತೀಶ್ ಗೆ ಬ್ಯಾಂಕ್‌ನ ಸಿಬ್ಬಂದಿ ಚೆಕ್ ಮೂಲಕ 5 ಪೈಸೆ ಪಾವತಿಸಲು ಸೂಚಿಸಿದರು. ಅದರಂತೆ ಮಾರ್ಚ್ 18 ರಂದು ಚೆಕ್ ಮೂಲಕವೇ 5 ಪೈಸೆಯನ್ನ ಪಾವತಿಸಿದರು. ಈ ಪ್ರಕ್ರಿಯೆಗೆ 3 ರೂಪಾಯಿ ವೆಚ್ಚವಾಗಿದೆ ಎಂದು ದಟ್ಸ್ ಕನ್ನಕ್ಕೆ ವಿವರಿಸುತ್ತ ನಗುತ್ತಾರೆ ಸತೀಶ್!
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications