ಮೈಸೂರು : ಫುಟ್‌ಪಾತ್‌ನಲ್ಲಿ ದೋಸೆ ಸವಿದ ಸಂತೋಷ್ ಲಾಡ್
ಮೈಸೂರು, ಜನವರಿ 21 : ಕಾರ್ಮಿಕ ಸಚಿವ ಸಂತೋಷ್ ಲಾಡ್ ಫುಟ್‌ಪಾತ್‌ನಲ್ಲಿ ಕುಳಿತು ದೋಸೆ ತಿನ್ನುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ಬೆಳಗ್ಗೆ ಮೈಸೂರಿನಲ್ಲಿ ಸಚಿವ ಸಂತೋಷ್ ಲಾಡ್ ಫುಟ್‌ಪಾತ್ ಮೇಲೆ ಕುಳಿತು ದೋಸೆ ಸವಿದಿದ್ದಾರೆ. ಸಚಿವರ ಸರಳತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಸಂತೋಷ್ ಲಾಡ್ ಇಂದು ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್‌ಗೆ ಆಗಮಿಸಿದ್ದರು. ಜನಸಂದಭಿ ಹೆಚ್ಚಿದ್ದ ಕಾರಣ ಫುಟ್‌ಪಾತ್‌ನಲ್ಲೇ ಕುಳಿತು ದೋಸೆ ತಿನ್ನಲು ಆರಂಭಿಸಿದರು.

ಈ ಸಂದರ್ಭದಲ್ಲಿ ಮೈಸೂರು ಗ್ರಾಮಾಂತರದ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್ ಜೊತೆಗಿದ್ದರು. ಸಚಿವರ ಸರಳತೆಗೆ ಜನರು ಆಶ್ಚರ್ಯಪಟ್ಟರು.
ಖಾದರ್ ಉಪಹಾರ ಸವಿದಿದ್ದರು : ಮೈಸೂರಿನ ಚಾಮುಂಡಿ ಬೆಟ್ಟದ ಕ್ಯಾಂಟೀನ್‌ನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉಪಹಾರ ಸವಿದಿದ್ದು, ಹೆಚ್ಚು ಸುದ್ದಿಯಾಗಿತ್ತು.
ದಸರಾ ಉದ್ಘಾಟನೆಗೆ ಮೈಸೂರಿಗೆ ಆಗಮಿಸಿದ್ದ ಸಚಿವ ಖಾದರ್ ಫುಟ್‌ಪಾತ್‌ನಲ್ಲಿರುವ ಕ್ಯಾಂಟೀನ್‌ನಲ್ಲಿ ಕುಳಿತು ಉಪಹಾರ ಸೇವಿಸಿದ್ದರು. ಈಗ ಸಂತೋಷ್ ಲಾಡ್ ಅವರ ಸರದಿ.












Click it and Unblock the Notifications