"ಮಿ.ಕ್ಲೀನ್, ನಾಳೆ ನಿಮ್ಮ ರಿಯಲ್ ಎಸ್ಟೇಟ್ ದಾಖಲೆ ಬಿಡುಗಡೆ ಮಾಡ್ತೀನಿ"
ಮೈಸೂರು, ನವೆಂಬರ್ 29: "ಎಚ್.ವಿಶ್ವನಾಥ್ ಅವರೇ ನನ್ನ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾತನಾಡ್ತೀರಿ. ನಾಳೆ ನಿಮ್ಮ ರಿಯಲ್ ಎಸ್ಟೇಟ್ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ" ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.
ಹುಣಸೂರಿನಲ್ಲಿ ನಿನ್ನೆ ಮಾತನಾಡಿದ ಸಾ.ರಾ ಮಹೇಶ್, "ಹುಣಸೂರಿನಲ್ಲಿ ಕೋಟಿ ಹಣ ವಶಕ್ಕೆ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಹಣ ಯಾರದ್ದು ಎಂದು ಮಿಸ್ಟರ್ ಕ್ಲೀನ್ ವಿಶ್ವನಾಥ್ ಹೇಳಲಿ. ಮೊದಲು ಸಾಲ ಇದೆ ಎಂದು ಹೇಳಿದ್ದರು. ಆದರೆ ಚುನಾವಣಾ ಅಫಿಡೆವಿಟ್ ನಲ್ಲಿ ಸಾಲದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಅವರೇನು ಬಾಂಬೆಯಿಂದ ಹಣ ತಂದು ಸಾಲ ತೀರಿಸಿದ್ರಾ ಎಂದು ಪ್ರಶ್ನಿಸಿದರು.
ಯಾರು ಭೀಮ, ಯಾರು ದುರ್ಯೋಧನ ಗೊತ್ತಾಗುತ್ತೆ: ಹಳ್ಳಿಹಕ್ಕಿಗೆ ಸಾ.ರಾ.ಮಹೇಶ್ ತಿರುಗೇಟು
ನನ್ನ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾತನಾಡ್ತೀರಿ. ನಾಳೆ ನಿಮ್ಮ ರಿಯಲ್ ಎಸ್ಟೇಟ್ ಬಗ್ಗೆ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ. ಸಾಮಾಜಿಕ ಬದುಕಿನಲ್ಲಿ ನೀವು ಕ್ಲೀನ್ ಇಲ್ಲ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದರು.