ಕಾಸರಗೋಡಿನಲ್ಲಿ ಭೀಕರ ಅಪಘಾತ: ಯುವಕ ಸಾವು
ಕಾಸರಗೋಡು, ಆಗಸ್ಟ್ 2: ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕಿನ ನಡುವೆ ಬಡೆದ ಭೀಕರ ಅಪಘಾತದಲ್ಲಿ, ಬೈಕಿನಲ್ಲಿದ್ದ ಮಾರಿಮುತ್ತು(29) ಎಂಬುವವರು ಸಾವಿಗೀಡಾಗಿದ್ದು, ಕಾರಿನಲ್ಲಿದ್ದ 5 ಜನರಿಗೆ ಮತ್ತು ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.
ತಮಿಳುನಾಡು ಮೂಲದ ಪುಡುಕೊಟ್ಟೈನ ಮಾರಿಮುತ್ತು ಸೆಲೂನ್ ನಲ್ಲಿ ಕೆಲಸ ಮಾಡುತ್ತಿದ್ದ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.













Click it and Unblock the Notifications