ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ; 336 ಉಪನ್ಯಾಸಕರ ಹುದ್ದೆಗೆ ಸದ್ಯದಲ್ಲೇ ನೇಮಕಾತಿ

|
Google Oneindia Kannada News

ಮೈಸೂರು, ಜೂನ್ 8: ಮೈಸೂರು ವಿವಿಯಲ್ಲಿ ಖಾಲಿ ಇರುವ 336 ಉಪನ್ಯಾಸಕರ ಹುದ್ದೆಗಳನ್ನು ಮೂರು ತಿಂಗಳೊಳಗಾಗಿ ಭರ್ತಿ ಮಾಡಲು ವಿವಿ ಶಿಕ್ಷಣ ಮಂಡಳಿ ತೀರ್ಮಾನಿಸಿದೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ ತೀಮಾನ ಕೈಗೊಳ್ಳಲಾಯಿತು. ಮುಂದಿರುವ ಆರು ತಿಂಗಳೊಳಗೆ ವಿವಿಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಯುಜಿಸಿ ತಾಕೀತು ಮಾಡಿ ಮಾರ್ಗಸೂಚಿಯನ್ನು ನೀಡಿದ್ದು, ಇದನ್ನು ಪಾಲನೆ ಮಾಡದಿದ್ದರೆ ಅನುದಾನ ಕಡಿತಗೊಳಿಸುವ ಎಚ್ಚರಿಕೆ ನೀಡಿದೆ. ಆದ್ದರಿಂದ ಇದರ ಬೆನ್ನ ಹಿಂದೆಯೇ ರಾಜ್ಯ ಸರ್ಕಾರದಿಂದಲೂ ಬೋಧಕರ ನೇಮಕಾತಿಗೆ ಅನುಮತಿ ಸಿಕ್ಕಿದೆ. ಇದರಿಂದ ಬೋಧಕರ ತೊಂದರೆ ನಿವಾರಣೆಯಾಗಲಿದೆ ಎಂದು ಕುಲಪತಿ ಹೇಮಂತ ಕುಮಾರ್ ತಿಳಿಸಿದ್ದಾರೆ.

ಕೇಂದ್ರೀಕೃತ ಅಡುಗೆ ಕೇಂದ್ರ ಸ್ಥಾಪನೆಗೆ ಮೈಸೂರು ವಿವಿ ಚಿಂತನೆ ಕೇಂದ್ರೀಕೃತ ಅಡುಗೆ ಕೇಂದ್ರ ಸ್ಥಾಪನೆಗೆ ಮೈಸೂರು ವಿವಿ ಚಿಂತನೆ

76 ಬ್ಯಾಕ್ ಲಾಗ್ ಹುದ್ದೆಗಳು ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿರುವ 54 ಹುದ್ದೆಗಳ ನೇಮಕಾತಿಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಸಿಂಡಿಕೇಟ್ ನಿಂದಲೂ ಇದಕ್ಕೆ ಒಪ್ಪಿಗೆ ಪಡೆಯಲಾಗಿದೆ. ಇದನ್ನು ಸೇರಿ ಒಟ್ಟು 350 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಎರಡು - ಮೂರು ವರ್ಷಗಳ ಹಿಂದೆ ಈ ಹುದ್ದೆಗಳಿಗೆ ಅರ್ಜಿ ಸ್ವೀಕರಿಸಲಾಗಿತ್ತು. ಅವರಿಗೆ ಅರ್ಜಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Recruitment for the post of 336 lecturers from Mysuru University shortly

ಹೊಸ ಯೋಗ ಕೋರ್ಸ್ ಆರಂಭಕ್ಕೆ ಅಸ್ತು : 2019-20ನೇ ಸಾಲಿಗೆ ಯೋಗ ಸ್ನಾತಕೋತ್ತರ ಕೋರ್ಸ್ ಆರಂಭಕ್ಕೆ ಶೈಕ್ಷಣಿಕ ಮಂಡಳಿ ತೀರ್ಮಾನ ತೆಗೆದುಕೊಂಡಿತು. ಎಂಎಸ್ಸಿ ಯೋಗ ವಿಜ್ಞಾನ ಹೆಸರಿನಲ್ಲಿ ಕೋರ್ಸ್ ಇರಲಿದೆ. ಯಾವುದೇ ಪದವಿ ಕೋರ್ಸ್ ಹೊಂದಿದವರು ಅರ್ಜಿ ಸಲ್ಲಿಸಬಹುದು. ಕೋರ್ಸ್ ಸೇರಲು ಕನಿಷ್ಠ ವಯೋಮಿತಿ ಇಲ್ಲ. ಆದರೆ, ವೈದ್ಯರಿಂದ ಆರೋಗ್ಯ ಸದೃಢತೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ಎಂದು ಸಭೆಯಲ್ಲಿ ತಿಳಿಸಲಾಯಿತು.

ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ: ರಾಜ್ಯ ಸರ್ಕಾರದ ಆದೇಶದಂತೆ, ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡುವಂತೆ ಸಭೆಯು ಮಹತ್ವದ ತೀರ್ಮಾನ ಕೈಗೊಂಡಿತು. 2019-20ನೇ ಸಾಲಿಗೆ ಪದವಿ ಕೋರ್ಸ್ ಗಳಿಗೆ 3,500, ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ 5,500 ಶುಲ್ಕ ಸ್ವೀಕರಿಸಬೇಕಿದೆ. ಪ್ರವೇಶದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಶುಲ್ಕ ಕಟ್ಟಬೇಕು. ಬಳಿಕ ಹಣವನ್ನು ಹಿಂತಿರುಗಿಸಲಾಗುವುದು ಎಂದು ಕುಲಪತಿ ಪ್ರೊ.ಹೇಮಂತಕುಮಾರ್ ತಿಳಿಸಿದರು.

ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತ

ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಕನಿಷ್ಠ 5 ಸ್ಥಾನ ನೀಡುವುದು ಹಾಗೂ ಪ್ರವೇಶ ವಯೋಮಾನ ಮಿತಿಯಲ್ಲಿ 5 ವರ್ಷಗಳ ರಿಯಾಯಿತಿ ನೀಡಲು ಸಭೆಯು ಒಪ್ಪಿಗೆ ನೀಡಿತು. ಈಗಾಗಲೇ 5 ಸ್ಥಾನಗಳನ್ನು ವಿಶ್ವವಿದ್ಯಾಲಯ ನೀಡುತ್ತಿದೆ. 5 ವರ್ಷಗಳ ರಿಯಾಯಿತಿ ನೀಡಲು ಯಾವುದೇ ತಕರಾರು ಇಲ್ಲ ಎಂದು ಸಭೆ ತಿಳಿಸಿತು.

ಮೈಸೂರು ವಿವಿ ಪ್ರವೇಶಾತಿ, ಪರೀಕ್ಷಾ ಶುಲ್ಕ ದರ ದಿಢೀರ್ ಏರಿಕೆ ಮೈಸೂರು ವಿವಿ ಪ್ರವೇಶಾತಿ, ಪರೀಕ್ಷಾ ಶುಲ್ಕ ದರ ದಿಢೀರ್ ಏರಿಕೆ

ಇದರೊಂದಿಗೆ ಮೈಸೂರು ವಿಶ್ವವಿದ್ಯಾಲಯವು 2019-20ನೇ ಸಾಲಿಗೆ 2.98 ಕೋಟಿ ಕೊರತೆ ಬಜೆಟ್ ಮಂಡಿಸಿತು. ಬಜೆಟ್ ಮಂಡಿಸಿದ ಹಣಕಾಸು ಅಧಿಕಾರಿ ಮಹಾದೇವಪ್ಪ ಮಾತನಾಡಿ, ವಿಶ್ವವಿದ್ಯಾಲಯವು ರಾಜ್ಯ ಸರ್ಕಾರಕ್ಕೆ 183.31 ಕೋಟಿಗಳ ಮಂಜೂರಾತಿಗೆ ಪ್ರಸ್ತಾವ ಮಂಡಿಸಿತ್ತು. ರಾಜ್ಯ ಸರ್ಕಾರ 125.45 ಕೋಟಿ ಮಂಜೂರು ಮಾಡಿದೆ. ವಿ.ವಿ.ಯ ಆಂತರಿಕ ಸಂಪನ್ಮೂಲದಲ್ಲಿ 115.50 ಕೋಟಿ ಹಣವಿದ್ದು, ಒಟ್ಟು 252.80 ಕೋಟಿಗೆ ಬಜೆಟ್ ಸಿದ್ಧಪಡಿಸಲಾಗಿದೆ. 2.98 ಕೋಟಿ ಕೊರತೆ ಬಂದಿದೆ ಎಂದು ತಿಳಿಸಿದರು.

English summary
Recruitment will start for the post of 336 lecturers from Mysuru University shortly. University council committee decided to fulfill this post within few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X