ಅದಿಲ್ ಖಾನ್ ನನ್ನ ಬೆತ್ತಲೆ ವಿಡಿಯೋವನ್ನು 2, 3 ಲಕ್ಷಕ್ಕೆ ಮಾರಾಟ ಮಾಡ್ತಿದ್ದಾನೆ, ರಾಖಿ ಸಾವಂತ್ ಆರೋಪ
ಮೈಸೂರು, ಸೆಪ್ಟೆಂಬರ್, 27: ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ಪತಿ ಅದಿಲ್ ಖಾನ್ ವಿಷಯದಲ್ಲಿ ಮತ್ತೊಮ್ಮೆ ಮೈಸೂರಿನಲ್ಲಿ ಸದ್ದು ಮಾಡಿದ್ದಾರೆ.
ಮೈಸೂರಿನಲ್ಲಿರುವ ಪತಿ ಆದಿಲ್ ಖಾನ್ ಮನೆಗೆ ಜೆಸಿಬಿಯಲ್ಲಿ ಬಂದು ಮತ್ತೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಜೆಸಿಬಿಯಲ್ಲಿ ಬರುತ್ತಿದ್ದಂತೆ ವಾದ್ಯಗಳ ಸದ್ದು ರಾಖಿ ಅವರನ್ನು ಸ್ವಾಗತಿಸಿತು. ಈ ಹಿಂದೆ ರಾಖಿ ಸಾವಂತ್ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಕ್ರಮ ಸಂಬಂಧ ಹಾಗೂ ಹಣ ವಂಚನೆ ಆರೋಪ ಮಾಡಿ ಜೈಲಿಗೂ ಕಳುಹಿಸಿದ್ದರು.

2, 3 ಲಕ್ಷಕ್ಕೆ ಬೆತ್ತಲೆ ವಿಡಿಯೋ ಮಾರಾಟ
ಆದಿಲ್ ಖಾನ್ ನನ್ನ ಬೆತ್ತಲೆ ವಿಡಿಯೋವನ್ನು 2, 3 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾನೆ ಎಂದು ರಾಖಿ ಆರೋಪಿಸಿದ್ದಾಳೆ. ಆದಿಲ್ ಬಾಲಿವುಡ್‌ಗೆ ಹೋಗಬೇಕೆಂಬ ಉದ್ದೇಶದಿಂದ ನನ್ನ ಜೊತೆ ಪ್ರೀತಿಯ ನಾಟಕವಾಡಿದ್ದಾನೆ. ಇವನು ಸರಿಯಾದ ಚಿಕಿತ್ಸೆ ಕೊಡಿಸದೆ ನನ್ನ ತಾಯಿ ತೀರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಜೈಲಿನಿಂದ ಹೊರ ಬಂದ ಮೇಲೆ ಆದಿಲ್ ಖಾನ್ ರಾಖಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದನು. ರಾಖಿ ಎಲ್ಲಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ರಾಖಿ ಕೋಪ ಮತ್ತಷ್ಟು ಹೆಚ್ಚಾಗಿತ್ತು. ಇಂದು ಜೆಸಿಬಿಯಲ್ಲಿ ಬಂದ ರಾಖಿ ಆದಿಲ್ ಮನೆ ಸುತ್ತಮುತ್ತ ಇರುವ ನೆರೆಮನೆಯವರ ಜೊತೆ ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮೈಸೂರಿನ ಪೊಲೀಸ್ ಠಾಣೆಗೂ ಭೇಟಿ ನೀಡಿದ್ದಾರೆ. ಆದಿಲ್ ದೊಡ್ಡ ಮೋಸಗಾರ. ನಾನು ಅವನಿಗೆ ವಿಚ್ಚೇಧನ ನೀಡಿದ್ದೇನೆ ಎಂದು ತಿಳಿಸಿದ್ದಾಳೆ.
ಆದಿಲ್‌ಗಾಗಿ ನಾನು ಎಲ್ಲಾ ತ್ಯಾಗ ಮಾಡಿದೆ. ಅವನಿಗಾಗಿ ಫಾತಿಮಾ ಆಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡೆ. ಆದರೆ ಆದಿಲ್ ಮಾತ್ರ ನನ್ನ ಮಾನ ಮಾರ್ಯಾದೆ ತೆಗೆಯುತ್ತಿದ್ದಾನೆ. ನನ್ನ ಬದುಕನ್ನು ನಾಶ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.












Click it and Unblock the Notifications