ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಆರ್ ಮೂರ್ತಿ ಆಯ್ಕೆ
ಇನ್ನೇನು 10 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು ಇದರ ಪೂರ್ವ ಸಿದ್ಧತೆ ಎಂಬಂತೆ ಮೈಸೂರು ನಗರ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆರ್. ಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ.
ಮೈಸೂರು, ಏಪ್ರಿಲ್ 23: ಮೈಸೂರು ನಗರ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆರ್. ಮೂರ್ತಿ ಆಯ್ಕೆಯಾಗಿದ್ದಾರೆ. ಇನ್ನೇನು 10 ತಿಂಗಳಲ್ಲಿ ಚುನಾವಣೆ ಬರಲಿದ್ದು ಇದರ ಪೂರ್ವ ಸಿದ್ಧತೆ ಎಂಬಂತೆ ಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮೂರ್ತಿಯವರಿಗೆ ಶನಿವಾರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಚಿವರಾದ ತನ್ವೀರ್ ಸೇಠ್, ಶಾಸಕರಾದ ಸೋಮಶೇಖರ್ ನೂತನ ಅಧ್ಯಕ್ಷ ಮೂರ್ತಿಯವರನ್ನು ಸನ್ಮಾನಿಸಿದರು. [ಸೋನಿಯಾ, ಪ್ರಿಯಾಂಕಾ, ವಾದ್ರಾಗೆ ರಾಯರೆಡ್ಡಿ ಬೋಧಿಸಲಿ: ಪ್ರತಾಪ್ ಸಿಂಹ]

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ವಾಸು, ಬಿ ಜೆ ವಿಜಯ್ ಕುಮರ್, ಜಿ ಎನ್ ಮಂಜುನಾಥ್ , ಡಿಸಿಸಿ ಬ್ಯಾಂಕ್ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬಾಬು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ ಎಸ್ ರಘು, ಎನ್ಎಸ್'ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ, ರಾಘವೇಂದ್ರ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications