ಮೈಸೂರಿನಲ್ಲಿ ಪೊಲೀಸರು, ವಕೀಲರ ನಡುವೆ ಜಿದ್ದಾಜಿದ್ದಿ
ಮೈಸೂರು, ಜನವರಿ 23 : ಬಿಜೆಪಿ ಮುಖಂಡ ಹಾಗೂ ವಕೀಲ ಗೋಕುಲ್ ಗೋವರ್ಧನ್ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣವನ್ನು ಖಂಡಿಸಿ ಇಂದು(ಜ.23) ವಕೀಲರು ಮೈಸೂರು ನಗರದ ನಜರಾ ಬಾದ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಜರಾಬಾದ್ ಠಾಣಾ ವ್ಯಾಪ್ತಿಯ ಬಳಿಯ ಶಾಲೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ದೂರು ನೀಡಲು ಹೋದ ಗೋಕುಲ್ ಗೋವರ್ಧನ್ ಮೇಲೆ ಪೊಲೀಸರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಬ್ ಇನ್ಸ್ ಪೆಕ್ಟರ್ ಶೇಖರ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಹಿಸಿ ವಕೀಲರು ಮಾನವ ಸರಪಳಿ ನಿರ್ಮಿಸಿ ನಜರಬಾದ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅಲ್ಲದೆ ಸ್ಥಳಕ್ಕೆ ಬಂದ ಸಬ್ ಇನ್ಸ್ ಪೇಕ್ಟರ್ ಶೇಖರ್ ಗೆ ಮುತ್ತಿಗೆ ಹಾಕಿ ಯುವ ವಕೀಲರು ಆಕ್ರೋಶ ಹೊರಹಾಕಿದರು. ನಜರ್ ಬಾದ್ ಠಾಣೆ ಮುಂದೆ ಅಮಾನತು ಮಾಡುವವರೆಗೆ ಹೋರಾಟ ಮಾಡವುದಾಗಿ ಎಚ್ಚರಿಕೆ ನೀಡಿದರು. ವಕೀಲರ ಪ್ರತಿಭಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.












Click it and Unblock the Notifications