ಪ್ರೊ.ಕೆ.ಎಸ್.ಭಗವಾನ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು
K.S.Bhagwan, Mysuru, Karnataka, Kannada news, ಪ್ರೊ.ಕೆ.ಎಸ್.ಭಗವಾನ್, ಕರ್ನಾಟಕ, ಕನ್ನಡಸುದ್ದಿ, ಮೈಸೂರು
ಮೈಸೂರು, ಮೇ 17 : ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ.
ಶುಕ್ರವಾರ ಸಂಜೆ ಮೈಸೂರಿನ ಕುವೆಂಪು ನಗರದ ನಿವಾಸದ ಬಳಿ ವಾಕಿಂಗ್ ಮಾಡುವಾಗ ಕೆ.ಎಸ್.ಭಗವಾನ್ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಭಗವಾನ್ (73) ಅವರ ಆರೋಗ್ಯ ಸ್ಥಿರವಾಗಿದೆ. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಸುಯೋಗ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ಕರೆತರುವಾಗ ಅವರ ಹೃದಯ ಬಡಿತ ಕ್ಷೀಣವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಭಗವಾನ್ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
ಕನ್ನಡದ ಜನಪ್ರಿಯ ಅನುವಾದಕ, ಚಿಂತಕ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅವರು ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ನಿವೃತ್ತಿ ಇಂಗ್ಲಿಶ್ ಪ್ರೊಸೆಸರ್ ಕೆ.ಎಸ್.ಭಗವಾಜ್ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮೈಸೂರಿನ ಮಹರಾಜ ಕಾಲೇಜಿನ ಇಂಗ್ಲಿಶ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಕೆ.ಎಸ್.ಭಗವಾನ್ ಅವರ ಹೇಳಿಕೆಗಳು ಸದಾ ವಿವಾದಕ್ಕೆ ಕಾರಣವಾಗುತ್ತವೆ. ಯಾವದೇ ಟೀಕೆ, ವಿರೋಧ, ಬೆದರಿಕೆಗಳಿಗೆ ಬಗ್ಗದ ಅವರು ಇಂದಿಗೂ ತಮ್ಮ ಆಲೋಚನೆಗಳನ್ನು ಜನರ ಮುಂದಿಡುತ್ತಾರೆ.












Click it and Unblock the Notifications