Get Updates
Get notified of breaking news, exclusive insights, and must-see stories!

Priyanka Gandhi: ದರ್ಶನ್‌ ಧ್ರುವನಾರಾಯಣ್‌ ಮಾತನಾಡಿಸಿದ ಪ್ರಿಯಾಂಕಾ ಗಾಂಧಿ

ಮೈಸೂರು, ಏಪ್ರಿಲ್‌ 25: ದಿವಂಗತ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌ ಧ್ರುವನಾರಾಯಣ್‌ ಅವರ ಮಗ ದರ್ಶನ್‌ ಧ್ರುವನಾರಾಯಣ್‌ ಅವರನ್ನು ಕಾಂಗ್ರೆಸ್‌ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ವೇದಿಕೆಯಲ್ಲಿ ಮಾತನಾಡಿಸಿದರು.

ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ದರ್ಶನ್‌ ಧ್ರುವನಾರಾಯಣ್‌ ಅವರನ್ನು ಪ್ರಿಯಾಂಕಾ ಗಾಂಧಿ ಅವರು ಮಾತನಾಡಿಸಿದರು. ಇತ್ತೀಚೆಗೆ ನಿಧನರಾಗಿದ್ದ ಆರ್‌ ಧ್ರುವನಾರಾಯಣ್ ಅವರ ಅಂತ್ಯಕ್ರಿಯೆಗೆ ಬರಲಾಗದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರು ಸಂತಾಪ ಸೂಚಿಸಿದ್ದರು.

priyanka gandhi vadra spoke to Darshan Dhruvanarayan in mysuru

ಮಂಗಳವಾರ ಕಾಂಗ್ರೆಸ್‌ ಪರ ಪ್ರಚಾರಕ್ಕಾಗಿ ಟಿ ನರಸೀಪುರಕ್ಕೆ ಬಂದಿದ್ದ ಪ್ರಿಯಾಂಕಾ ಗಾಂಧಿ ಅವರು ದರ್ಶನ್‌ ಧ್ರುವನಾರಾಯಣ್‌ ಅವರನ್ನು ವೇದಿಕೆಯಲ್ಲಿ ಮಾತನಾಡಿಸಿ ಕ್ಷೇತ್ರದ ಮಾಹಿತಿ ಪಡೆದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ದರ್ಶನ್‌ ಧ್ರುವನಾರಾಯಣ್‌ ಅವರು ತಂದೆ ಆರ್‌ ಧ್ರುವನಾರಾಯಣ್ ಹಾಗೂ ತಾಯಿ ವೀಣಾ ಧ್ರುವನಾರಾಯಣ್ ಇಬ್ಬರನ್ನು ಕಳೆದುಕೊಂಡಿದ್ದರು.

ಆರ್‌ ಧ್ರುವನಾರಾಯಣ್‌ ನಿಧನರಾಗಿದ್ದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌, ಡಿಕೆ ಸುರೇಶ್, ವಿ ಶ್ರೀನಿವಾಸ್‌ ಪ್ರಸಾದ್‌ ಸೇರಿದಂತೆ ಹಲವಾರು ಗಣ್ಯರು ಭೇಟಿ ನೀಡಿದ್ದರು. ಒಂದೇ ತಿಂಗಳಲ್ಲಿ ಇಬ್ಬರನ್ನು ಕಳೆದುಕೊಂಡಿದ್ದ ದರ್ಶನ್ ಇದೀಗ ಪ್ರಚಾರಕ್ಕೆ ಧುಮಿಕಿದ್ದಾರೆ.

ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಆರ್‌ ಧ್ರುವನಾರಾಯಣ್‌ ಅವರು ಟಿಕೆಟ್‌ ಆಕಾಂಕ್ಷಿಯಾಗದ್ದರು, ಆದರೆ ಅಕಾಲಿಕವಾಗಿ ನಿಧನರಾಗಿದ್ದರು, ಬಳಿಕ ಮೈಸೂರು ಹಾಗೂ ಚಾಮರಾಜನಗರ ಎರಡೂ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಧ್ರುವನಾರಾಯಣ್ ಅವರ ಮಗ ದರ್ಶನ್‌ಗೆ ಟಿಕೆಟ್‌ ನೀಡುವಂತೆ ಆಗ್ರಹ ಮಾಡಿದ್ದರು.

priyanka gandhi vadra spoke to Darshan Dhruvanarayan in mysuru

ನಂಜನಗೂಡು ವಿಧಾನಸಭಾ ಕ್ಷೇತದ ಟಿಕೆಟ್‌ಗೆ ಮಾಜಿ ಸಚಿವ ಎಚ್‌ಸಿ ಮಹಾದೇವಪ್ಪ ಕೂಡ ಆಕಾಂಕ್ಷಿಯಾಗದ್ದರು. ಅವರು ತಾವು ನಂಜನಗೂಡು ಅಲ್ಲದೆ ತಮ್ಮ ಪುತ್ರ ಸುನೀಲ್‌ ಬೋಸ್‌ಗೆ ಟಿ ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಬೇಕೆಂದು ಕೇಳಿದ್ದರು, ಆದರೆ ಕಾಂಗ್ರೆಸ್‌ ಕಾರ್ಯಕರ್ತರು ನಂಜನಗೂಡಿನಿಂದ ದರ್ಶನ್‌ಗೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸಿದ್ದರು.

ಕಾರ್ಯಕರ್ತರ ಒತ್ತಾಸೆಯಂತೆ ದರ್ಶನ್‌ ಧ್ರುವನಾರಾಯಣ್‌ ಅವರಿಗೆ ಟಿಕೆಟ್‌ ನೀಡಲಾಯಿತು. ನಂಜನಗೂಡಿನಿಂದ ಕಣಕ್ಕೆ ಇಳಿದಿರುವ ದರ್ಶನ್‌ ಧ್ರುವನಾರಾಯಣ್‌ ಅವರಿಗೆ ಜೆಡಿಎಸ್‌ ಕೂಡ ಬೆಂಬಲ ಘೋಷಿಸಿದೆ. ಈ ಭಾರಿ ನಂಜನಗೂಡಿನಲ್ಲಿ ಅಡಳಿತ ವಿರೋಧಿ ಅಲೆ ಇರುವುದರಿಂದ ದರ್ಶನ್‌ ಧ್ರುವನಾರಾಯಣ್ ಅವರು ಗೆಲ್ಲುವುದು ನಿಶ್ಚಿತ ಎನ್ನಲಾಗಿದೆ. ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ದರ್ಶನ್‌ ಧ್ರುವನಾರಾಯನ್‌ ಅಭ್ಯರ್ಥಿಯಾದರೆ ಬಿಜೆಪಿಯಿಂದ ಚಾಮರಾಜನಗರದ ಬಿಜೆಪಿ ಸಂಸದ ವಿ ಶ್ರೀನಿವಾಸ್‌ಪ್ರಸಾದ್‌ ಅವರ ಅಳಿಯ ಹರ್ಷವರ್ಧನ್‌ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+