ಮೈಸೂರಿನಲ್ಲಿ ಮಾರ್ಚ್ 25 ರಂದು ಪ್ರತಾಪ್ ಸಿಂಹ ನಾಮಪತ್ರ ಸಲ್ಲಿಕೆ
ಮೈಸೂರು, ಮಾರ್ಚ್ 21:ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿ ಮಾರ್ಚ್ 25 ರಂದು ನಾಮಪತ್ರ ಸಲ್ಲಿಸುವುದಾಗಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.25 ರಂದು ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ನಾಮಪತ್ರ ಸಲ್ಲಿಕೆಗೆ ಯಡಿಯೂರಪ್ಪ, ಶ್ರೀರಾಮುಲು ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಆಗಮಿಸಲಿದ್ದಾರೆ ಎಂದರು.
ಈಗಾಗಲೇ ಕೊಡಗು ವ್ಯಾಪ್ತಿಯಿಂದಲೇ ಪ್ರಚಾರ ಆರಂಭ ಮಾಡಿದ್ದೇನೆ. ಇನ್ನೆರಡು ದಿನಗಳ ಕಾಲ ಆ ಭಾಗದ ಪ್ರಚಾರ ಮುಗಿಯಲಿದೆ. ಮೋದಿಯವರು ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ನಾನು ನನ್ನ ಚುನಾವಣೆ ಮುಗಿಯುವವರೆಗೂ ಯಾವುದೇ ಅಭ್ಯರ್ಥಿಯ ಪರ ಪ್ರಚಾರ ಹೋಗುವುದಿಲ್ಲ. ನನ್ನ ಚುನಾವಣೆ ಮುಗಿದ ನಂತರ ಇತರೆ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ. ಮೈತ್ರಿ ಪಕ್ಷ ಏನೇ ತಂತ್ರ ಮಾಡಿದರೂ ಗೆಲುವು ನನ್ನದೇ. ಜೆಡಿಎಸ್ ಕಾಂಗ್ರೆಸ್ ಪಕ್ಷದಲ್ಲಿಯೂ ಮೋದಿ ಬೆಂಬಲಿಸುವ ಜನರಿದ್ದಾರೆ. ಅವರಲ್ಲೇ ಬಿಜೆಪಿಯನ್ನು ಬೆಂಬಲಿಸುತ್ತಾರೆ.ಮೈಸೂರು ಭಾಗದಲ್ಲಿ ಮೈತ್ರಿ ಆಟ ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಬಿಜೆಪಿಯನ್ನು ಸೋಲಿಸಲು ಎಲ್ಲರೂ ಒಟ್ಟಾಗಿದ್ದಾರೆ ಎಂದು ತಿಳಿಸಿದರು.












Click it and Unblock the Notifications