ಟಿಪ್ಪುವನ್ನು ಹೊಗಳಿದ ರಾಷ್ಟ್ರಪತಿಗೆ ಪ್ರತಾಪ್ ಸಿಂಹ ಟ್ವಿಟ್ಟರ್ ಛಾಟಿ

ಮೈಸೂರು, ಅಕ್ಟೋಬರ್ 26 : ಟ್ವಿಟರ್ ನಲ್ಲಿಯೇ ಯಾವಗಲೂ ಪ್ರತಿಪಕ್ಷದ ಕಾಲೆಳೆಯುವ ಸಂಸದ ಪ್ರತಾಪ್ ಸಿಂಹ , ಅದೇ ಕೆಲಸವನ್ನು ರಾಷ್ಟ್ರಪತಿಗಳಿಗೂ ಮುಂದುವರೆಸಿದ್ದಾರೆ. ಹೌದು, ಟಿಪ್ಪು ಸುಲ್ತಾನ್ ಕುರಿತು ವಜ್ರಮಹೋತ್ಸವದಲ್ಲಿ ರಾಷ್ಟ್ರಪತಿ ಭಾಷಣ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಹಾಕಿದ್ದಾರೆ.

'ಗೌರವಾನ್ವಿತ ರಾಷ್ಟ್ರಪತಿಗಳೆ, ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಪ್ರರ್ವತಕರಾಗಿದ್ದರೆ? 3 ಮತ್ತು 4 ನೇ ಆಂಗ್ಲೋಇಂಡಿಯನ್ ಯುದ್ಧ ಯಾಕೆ ಸೋತರು? ಕ್ಷಿಪಣಿಗಳನ್ನೇಕೆ ಆ ಸಮಯದಲ್ಲಿ ಬಳಸಲಿಲ್ಲ?' ಎಂದು ಟ್ವಿಟರ್ ನಲ್ಲಿ ರಾಷ್ಟ್ರಪತಿಗಳಿಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ.

Pratap Simha questions president Ram Nath Kovind on his remarks on Tippu

'ರಾಷ್ಟ್ರಪತಿಗಳು ಟಿಪ್ಪು ಹಿರೋ ಆಗಿ ಮರಣ ಹೊಂದಿದ ಎಂದಿದ್ದಾರೆ. ಸರ್, ಹಿರೋಗಳು ಯುದ್ಧಭೂಮಿಯಲ್ಲಿ ಹೋರಾಟ ಮಾಡಿ ಸಾಯುತ್ತಾರೆ. ಆದರೆ ಟಿಪ್ಪು ತನ್ನ ಕೋಟೆಯೋಳಗೆ ಯುದ್ಧವನ್ನೇ ಮಾಡದೆ ಮರಣಹೊಂದಿದ್ದಾನೆ' ಎಂದು ಟ್ವಿಟರ್ ನಲ್ಲೆ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದ್ದಾರೆ ಸಂಸದ ಪ್ರತಾಪ್ ಸಿಂಹ. ಇನ್ನು ಈ ಕುರಿತಾಗಿ ಟ್ರೆಂಡಿಂಗ್ ಆಗಿದ್ದು, ಅನೇಕರು ಸಂಸದರ ಟ್ವೀಟ್ ಗೆ ರೀ ಟ್ವೀಟ್ ಮುಂದುವರೆಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+