Get Updates
Get notified of breaking news, exclusive insights, and must-see stories!

ಸಾಂಸ್ಕೃತಿಕ ನಗರಿ ತುಂಬೆಲ್ಲಾ ಗುಂಡಿಬಿದ್ದ ರಸ್ತೆಗಳು: ಕೇಳುವವರಾರು ಜನರ ಗೋಳು!?

ಮೈಸೂರು, ಡಿಸೆಂಬರ್ 18: 'ಮೈಸೂರಿಗರೇ... ಏಳಿ ಎದ್ದೇಳಿ, ನಿಮ್ಮ ಮನೆ ಮುಂದಿನ ರಸ್ತೆ ಸರಿ ಇದೆ ಅಂತಾ ಕೈಕಟ್ಟಿ ಕೂರಬೇಡಿ...'ಅರೇ ಇದ್ಯಾವ ರಾಜಕೀಯ ಪಕ್ಷದ ಘೋಷಣೆ ಅಂತಾ ಟೆನ್ಶನ್ ಆಗ್ಬೇಡಿ. ಸದ್ಯ ಇದು ಸಾಂಸ್ಕೃತಿಕ ನಗರಿ ಮೈಸೂರಿಗರೆಲ್ಲಾ ಒಗ್ಗೂಡಿ ಹೇಳುತ್ತಿರುವ ಘೋಷ ವಾಕ್ಯ.

ಹೌದು, ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮೈಸೂರಿನ ರಸ್ತೆಗಳೆಲ್ಲಾ ಸಂಪೂರ್ಣ ಹದಗೆಟ್ಟಿದ್ದು, ಮೈಸೂರು ನಗರ ಭಾಗದ ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ. ಈ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವ ಜನರು ಪ್ರತಿನಿತ್ಯ ಸ್ಥಳೀಯ ಜನಪ್ರತಿನಿಧಿಗಳ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

 ಮೈಸೂರು ಅಭಿವೃದ್ಧಿ ಕಾಣದ ಗ್ರಾಮಗಳಂತಾಗಿದೆ

ಮೈಸೂರು ಅಭಿವೃದ್ಧಿ ಕಾಣದ ಗ್ರಾಮಗಳಂತಾಗಿದೆ

ದೇಶದ ಸ್ವಚ್ಛ ನಗರಿ ಎಂಬ ಬಿರುದು ಪಡೆದು ದೇಶದ ಗಮನ ಸೆಳೆದಿದ್ದ ಮೈಸೂರು ಅಭಿವೃದ್ಧಿ ಕಾಣದ ಗ್ರಾಮಗಳಂತಾಗಿದೆ. ಹಳ್ಳ ಹಿಡಿದಿರುವ ನಗರದ ಪ್ರಮುಖ ರಸ್ತೆಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಮೈಸೂರಿಗೆ ಬರುವ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿಗರ ನಿದ್ದೆಗೆಡಿಸಿದ್ದ ಗುಂಡಿಗಳ ಸಮಸ್ಯೆ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿಗೂ ಕಾಲಿಟ್ಟಿದೆ.

ನಗರದ ಹೃದಯಭಾಗ ಸೇರಿದಂತೆ ಇತರೆ ಬಡಾವಣೆಗಳ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ. ಕಳೆದೆರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಎಲ್ಲಾ ರಸ್ತೆಗಳು ಕಿತ್ತುಹೋಗಿದ್ದರೂ, ಮೈಸೂರು ಮಹಾನಗರ ಪಾಲಿಕೆ ಕಣ್ಮುಚ್ಚಿ ಕುಳಿತರೆ ಸ್ಥಳೀಯ ಜನಪ್ರತಿನಿಧಿಗಳು ತಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲದವರಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

 ಉಸ್ತುವಾರಿ ಸಚಿವರ ವೀಕೆಂಡ್ ಭೇಟಿ

ಉಸ್ತುವಾರಿ ಸಚಿವರ ವೀಕೆಂಡ್ ಭೇಟಿ

ಇನ್ನು ಮೈಸೂರಿನ ಉಸ್ತುವಾರಿ ಸಚಿವರಿಗಂತೂ ಮೈಸೂರಿನ ಸಮಸ್ಯೆಗಳ ಬಗ್ಗೆ ಕಣ್ಣು ಹಾಕುವಷ್ಟು ಸಮಯ ಇಲ್ಲದಂತಾಗಿದೆ. ಆಗೊಮ್ಮೆ ಈಗೊಮ್ಮೆ ಅನ್ನುವಂತೆ ವೀಕೆಂಡ್ ವಿಸಿಟ್ ಮಾಡುವ ಉಸ್ತುವಾರಿ ಸಚಿವ ಎಸ್.ಟಿ.‌ ಸೋಮಶೇಖರ್, ಹಳ್ಳ ಹಿಡಿದಿರುವ ಮೈಸೂರಿನ ರಸ್ತೆಗಳನ್ನು ಸರಿಪಡಿಸುವ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಂತೆ ಕಾಣುತ್ತಿಲ್ಲ. ಇಷ್ಟು ದಿನಗಳ ಕಾಲ ಪರಿಷತ್‌ ಚುನಾವಣೆ ಓಡಾಟದಲ್ಲೇ ನಿರತರಾಗಿದ್ದ ಉಸ್ತುವಾರಿ ಸಚಿವರು, ಎಲೆಕ್ಷನ್ ಮುಗಿದು, ಫಲಿತಾಂಶ ಪ್ರಕಟವಾದರೂ ಮೈಸೂರಿನತ್ತ ತಿರುಗಿ ನೋಡಿಲ್ಲ.

 ಸ್ಥಳೀಯ ಜನಪ್ರತಿನಿಧಿಗಳು ಸೈಲೆಂಟ್

ಸ್ಥಳೀಯ ಜನಪ್ರತಿನಿಧಿಗಳು ಸೈಲೆಂಟ್

'ಯಥಾ ರಾಜ ತಥಾ ಪ್ರಜಾ' ಎನ್ನುವಂತೆ ಮೈಸೂರಿನ ಶಾಸಕರು, ಸಂಸದರು ಸಹ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಅನುಸರಿಸುತ್ತಿದ್ದಾರೆ. ಹಾಳಾಗಿರುವ ಮೈಸೂರಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಕಿಂಚಿತ್ತು ಆಲೋಚನೆ‌ ನಡೆಸದ ಸ್ಥಳೀಯ ಜನಪ್ರತಿನಿಧಿಗಳು, ತಾವಾಯಿತು ತಮ್ಮ ಕೆಲಸವಾಯಿತು ಅನ್ನುತ್ತಾ ಜಾಣ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಮೈಸೂರು ಮಹಾನಗರ ಪಾಲಿಕೆ ಸದಸ್ಯರನ್ನು ಈ ಬಗ್ಗೆ ಪ್ರಶ್ನೆ ಮಾಡುವ ಅವಕಾಶವೇ ಇಲ್ಲ. ಏನೇ ಕೇಳಿದರೂ ಅನುದಾನ ಇಲ್ಲ ಎನ್ನುವ ಮೂಲಕ "ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ' ಎಂಬಂತೆ ಎಲ್ಲದಕ್ಕೂ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರುತ್ತಿದ್ದಾರೆ. ಇವರೆಲ್ಲರ ನಡುವೆ ಸಿಲುಕಿರುವ ಮೈಸೂರಿಗರು ಮಾತ್ರ ಗುಂಡಿಬಿದ್ದ ರಸ್ತೆಗಳಲ್ಲೇ ಎದ್ದುಬಿದ್ದು ವಾಹನ ಸಂಚಾರ‌ ಮಾಡುವ ದುಸ್ಥಿತಿ ಎದುರಾಗಿದೆ.

 ರಸ್ತೆ ಸರಿಪಡಿಸುವಂತೆ ಆನ್ಲೈನ್ ಕ್ಯಾಂಪೇನ್

ರಸ್ತೆ ಸರಿಪಡಿಸುವಂತೆ ಆನ್ಲೈನ್ ಕ್ಯಾಂಪೇನ್

ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಬೇಸತ್ತಿರುವ ಮೈಸೂರಿನ‌ ಜನತೆ ಇದೀಗ ಆನ್‌ಲೈನ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಹದಗೆಟ್ಟ ರಸ್ತೆ, ಸರಿಪಡಿಸದ ನಗರ ಪಾಲಿಕೆ ಹಾಗೂ ಇತರ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಜನರು, 'ಮೈಸೂರಿಗರೇ.. ಏಳಿ, ಎದ್ದೇಳಿ, ನಿಮ್ಮ ಮನೆಯ ರಸ್ತೆ ಸರಿಯಿದೆ ಎಂದು ಕೈಕಟ್ಟಿ ಕೂರಬೇಡಿ. ನಗರ ಪಾಲಿಕೆ ಗುಂಡಿಮಯ ರಸ್ತೆಗಳ ಸಹಾಯದೊಂದಿಗೆ ನಮಗೆಲ್ಲಾ ʻಒಂಟೆ ಸವಾರಿʼ ಮಾಡಿಸುತ್ತಿದೆ. ಪ್ರವಾಸಿಗರ ನೆಚ್ಚಿನ ತಾಣ ಇಷ್ಟು ಕೆಟ್ಟ ಪರಿಸ್ಥಿತಿಯಲ್ಲಿದ್ದರೆ ಹೇಗೆ? ಎಂದು ಪ್ರಶ್ನಿಸುತ್ತಾ ರಸ್ತೆ ಸರಿಪಡಿಸುವಂತೆ ಆನ್‌ಲೈನ್ ಅಭಿಯಾನ ನಡೆಸುತ್ತಿದ್ದಾರೆ.

 ಎಚ್ಚೆತ್ತುಕೊಳ್ಳದಿದ್ದರೆ ಬೀದಿಗಿಳಿಯುತ್ತೇವೆ

ಎಚ್ಚೆತ್ತುಕೊಳ್ಳದಿದ್ದರೆ ಬೀದಿಗಿಳಿಯುತ್ತೇವೆ

ಮೈಸೂರು ಸಂಘ- ಸಂಸ್ಥೆಗಳ ಒಕ್ಕೂಟದ ವತಿಯಿಂದ ಈ ಅಭಿಯಾನ ನಡೆಸಲಾಗುತ್ತಿದ್ದು, ಹದಗೆಟ್ಟಿರುವ ಹಾಗೂ ಗುಂಡಿಬಿದ್ದ ರಸ್ತೆಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾ ಫೋಟೋಗಳ ಜೊತೆ ಮೈಸೂರು ಮಹಾನಗರ ಪಾಲಿಕೆ ಎಂದು ಹ್ಯಾಶ್ ಟ್ಯಾಗ್ ಮಾಡುವಂತೆ ಕರೆ ನೀಡುವ ಮೂಲಕ ನಿದ್ರಿಸುತ್ತಿರುವ ಪಾಲಿಕೆ ಹಾಗೂ ಇತರೆ ಜನಪ್ರತಿನಿಧಿಗಳನ್ನು ಎಚ್ಚರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಹದಗೆಟ್ಟಿರುವ ಮೈಸೂರಿನ ರಸ್ತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಇದೀಗ ಆನ್‌ಲೈನ್ ಅಭಿಯಾನ ಆರಂಭಿಸಲಾಗಿದೆ. ಇದರ ಮುಂದಿನ‌ ಭಾಗವಾಗಿ ಸ್ಥಳೀಯ ಜನಪ್ರತಿನಿಧಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತದೆ. ಇಷ್ಟಾದರೂ ಯಾವುದೇ ಕ್ರಮಕೈಗೊಳ್ಳದಿದ್ದಲ್ಲಿ ಮೈಸೂರಿನ ಜನರೆಲ್ಲರೂ ಒಟ್ಟಾಗಿ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಎಂದು ಮೈಸೂರು ಸಂಘ- ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಎಚ್ಚರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+