ಮೈಸೂರು: ಸುಸಜ್ಜಿತ ವ್ಯವಸ್ಥೆಯೊಂದಿಗೆ ಬರುತ್ತಿದೆ ಪೊಲೀಸ್ ವಾಹನ

ಮೈಸೂರು, ಜುಲೈ 01: ನಗರ ಪೊಲೀಸರೀಗ ಹೈಟೆಕ್ ಆಗುತ್ತಿದ್ದಾರೆ. ಹೊರ ವರ್ತುಲ ರಸ್ತೆಯಲ್ಲಿ ಸಂಚರಿಸುವ ಪೊಲೀಸ್ ವಾಹನವೀಗ ಅಪಘಾತ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನಸ್ನೇಹಿಯಾಗಿ ಮಾರ್ಪಾಡಾಗಿದೆ.

ಇಷ್ಟು ದಿನಗಳ ಕಾಲ ಪೊಲೀಸ್ ಪೆಟ್ರೋಲಿಂಗ್ ವಾಹನಗಳೆಂದರೆ, ಅಲ್ಲಿ ಕೇವಲ ಪೊಲೀಸರನ್ನು ಮಾತ್ರ ನಿಯೋಜಿಸಲಾಗುತ್ತಿತ್ತು. ಅಪಘಾತ, ಹೆದ್ದಾರಿ ದರೋಡೆ ಮುಂತಾದ ಸಂದರ್ಭ ದಲ್ಲಿ ತಕ್ಷಣಕ್ಕೆ ಬೇಕಾದ ಯಾವುದೇ ಮೂಲಭೂತ ಸೌಕರ್ಯಗಳು ವಾಹನಗಳಲ್ಲಿ ಲಭ್ಯವಿರುತ್ತಿರಲಿಲ್ಲ.

ಇದನ್ನು ಮನಗಂಡ ನಗರ ಪೊಲೀಸ್ ಆಯುಕ್ತರು, ರಾತ್ರಿ, ಹಗಲು ವೇಳೆ ವರ್ತುಲ ರಸ್ತೆಯಲ್ಲಿ ಗಸ್ತು ತಿರುಗುವ ಎರಡು ನೂತನ ವಾಹನಗಳಲ್ಲಿ ತುರ್ತು ಸಂದರ್ಭದಲ್ಲಿ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿದ್ದಾರೆ.

Petroling vehicles now have a basic facilities.

ಗಾಯಾಳುವನ್ನು ಕೊಂಡೊಯ್ಯಲು ಸ್ಟ್ರೆಕ್ಚರ್, ಬ್ಯಾರಿಕೇಡ್ ಗಳನ್ನು ವಾಹನದಲ್ಲಿ ಸಿದ್ಧವಿಡಲಾಗಿದೆ.

ದೊಡ್ಡ ದೊಡ್ಡ ಮರಗಳು ಧರೆಗುರುಳಿದ ಸಂದರ್ಭದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ವಿದ್ಯುತ್ ಗರಗಸ, ಕೊಡಲಿ, ಪಿಕಾಸಿ, ಹಾರೆ, ಹಗ್ಗ ಮುಂತಾದ ಉಪಕರಣಗಳನ್ನು ಸಿದ್ಧಗೊಳಿಸಲಾಗಿದೆ. ಜತೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನೂ ಇರಿಸಲಾಗಿದೆ.

ಮುಂಭಾಗ ಹಾಗೂ ಹಿಂಭಾಗ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕ್ಯಾಮೆರಾಗಳು ಸಂಪೂರ್ಣ ಒಂದು ಸುತ್ತು ಸುತ್ತುವ ವ್ಯವಸ್ಥೆ ಇದೆ.

ಅಪಘಾತ, ದೊಂಬಿ, ಗಲಾಟೆಗಳಾದ ಸಂದರ್ಭದಲ್ಲಿ ಅಲ್ಲಿ ನಡೆಯುವ ಸಂಪೂರ್ಣ ಘಟನಾವಳಿಗಳು ಕ್ಯಾಮೆರಾ ದಲ್ಲಿ ದಾಖಲಾಗಲಿವೆ. ಮತ್ತೊಂದು ವಿಶೇಷವೆಂದರೆ, ವಾಹನದಲ್ಲಿ ವಿದ್ಯುತ್ ಪರಿವರ್ತಕವನ್ನು ಕೂಡ ಸಿದ್ಧವಿಡಲಾಗಿದೆ. ಕತ್ತಲನ್ನು ದೂರ ಮಾಡುವ ಉದ್ದೇಶದಿಂದ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿದೆ.

Petroling vehicles now have a basic facilities.

ದಿನಗಳಲ್ಲಿ ಮತ್ತಷ್ಟು ಉತ್ತಮ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಉಪ ಪೊಲೀಸ್ ಆಯುಕ್ತ ಮಹಾಲಿಂಗ ಬಿ. ನಂದಗಾವಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+