ಮೈಸೂರಿನಲ್ಲಿ ಹಳಿ ತಪ್ಪಿದ ಪೆಟ್ರೋಲಿಯಂ ತುಂಬಿದ ರೈಲು

ಮೈಸೂರು, ಅಕ್ಟೋಬರ್ 26: ಮೈಸೂರಿ ರೈಲು ನಿಲ್ದಾಣದ ಬಳಿ ಪೆಟ್ರೋಲಿಯಂ ಟ್ಯಾಂಕರ್ ರೈಲೊಂದು ಹಳಿ ತಪ್ಪಿದ್ದು, ಅದೃಷ್ಟವಶಾತ್‌ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಮೈಸೂರಿನ ರೈಲ್ವೆ ನಿಲ್ದಾಣ ಎರಡು ಕಿಲೋಮೀಟರ್ ದೂರಲ್ಲಿ ಸಂಜೆ 4:30 ಸುಮಾರಿಗೆ ಘಟನೆ ನಡೆದಿದ್ದು, ರೈಲಿನ ಹಲವು ಪೆಟ್ರೋಲಿಯಂ ದಾಸ್ತಾನಿನ ಬೋಗಿಗಳು ಹಳಿ ಬಿಟ್ಟಿವೆ.

ಪೆಟ್ರೋಲಿಯಂ ರೈಲು ಹಳಿ ತಪ್ಪಿದ ಕಾರಣ ಮೈಸೂರು ರೈಲ್ವೆ ನಿಲ್ದಾಣದ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ಎಲ್ಲ ರೈಲುಗಳು ಸುಮಾರು 2 ಗಂಟೆಗಳ ಕಾಲ ತಡವಾಗಿವೆ.

Petroleom transport train left track near Mysuru Railway station

ಟ್ಯಾಂಕರ್ ಹೊತ್ಯೋಯ್ಯುತ್ತಿದ್ದ ರೈಲಿನ ಚಕ್ರ ಕಳೆದುಕೊಂಡು ಹೋದ ಪರಿಣಾಮ ರೈಲು ಹಳಿ ತಪ್ಪಿದೆ. ಟ್ಯಾಂಕರ್‌ನಲ್ಲಿದ್ದ ಪೆಟ್ರೋಲಿಯಂ ಅನಿಲ ಸೋರಿಕೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಂಡ ಪರಿಣಾಮ ಆಗಬಹುದಾಗಿದ್ದ ಅನಾಹುತ ತಪ್ಪಿದೆ.

ಹಳಿ ತಪ್ಪಿದ ರೈಲು ಟ್ರಾಕ್‌ ಪಕ್ಕದ ರೈಲ್ವೆ ಸಿಗ್ನಲ್‌ಗೆ ಗುದ್ದಿದ ಪರಿಣಾಮ ರೈಲ್ವೆ ಸಿಗ್ನಲ್‌ ಮುರಿದಿದೆ. ಇದು ತಾಂತ್ರಿಕ ಸಮಸ್ಯೆಯನ್ನು ಉಂಟು ಮಾಡಿತ್ತು. ಆದರೆ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.

ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ತ್ವರಿತಗತಿಯಲ್ಲಿ ಕಾರ್ಯಚರಣೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+