• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ಜಿಲ್ಲೆಯಾದ್ಯಂತ ಆರಂಭವಾಯ್ತು ಸಾಕು ಪ್ರಾಣಿಗಳ ಗಣತಿ ಕಾರ್ಯ

|

ಮೈಸೂರು, ನವೆಂಬರ್. 13: ಪ್ರತೀ 5 ವರ್ಷಕ್ಕೊಮ್ಮೆ ನಡೆಸಲಾಗುವ ಸಾಕು ಪ್ರಾಣಿಗಳ ಗಣತಿ ಕಾರ್ಯ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ನವೆಂಬರ್ 1ರಿಂದ ಆರಂಭವಾಗಿದೆ.

ಮೈಸೂರು ಮಹಾನಗರ ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ 20ನೇ ರಾಷ್ಟ್ರೀಯ ಪ್ರಾಣಿ ಗಣತಿ ಯೋಜನೆಯಡಿ ಈ ಕಾರ್ಯ ಆರಂಭಿಸಿದ್ದು, 2019ರ ಜನವರಿ 31 ರಂದು ಮುಕ್ತಾಯಗೊಳ್ಳಲಿದೆ.

ಸಾಕುಪ್ರಾಣಿಗಳನ್ನು ಪಟಾಕಿಗಳಿಂದ ದೂರವಿರಿಸಿ, ಪಶುವೈದ್ಯರ ಎಚ್ಚರಿಕೆ

ಮೈಸೂರು ನಗರದ 65 ವಾರ್ಡು ಗಳಲ್ಲಿ ಪ್ರತೀ 2 ಸಾವಿರ ಕುಟುಂಬಗಳಿಗೊಬ್ಬರಂತೆ 36 ಮಂದಿ ಗಣತಿದಾರರನ್ನು ಪ್ರಾಣಿಗಳ ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಜಿಪಿಎಸ್ ಉಪಕರಣ ಹೊಂದಿರುವ ಟಾಬ್ಲೆಟ್ ಗಳನ್ನು ಗಣತಿದಾರರಿಗೆ ಪೂರೈಸಿದ್ದು, ಸಂಪೂರ್ಣ ಡಿಜಿಟಲೀಕರಣದೊಂದಿಗೆ ಗಣತಿ ಕಾರ್ಯ ನಡೆಸಲಾಗುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ತಿಳಿಸಿದ್ದಾರೆ.

ಗಣತಿದಾರರಿಗೆ ಗುರುತಿನ ಕಾರ್ಡ್ ನೀಡ ಲಾಗಿದ್ದು, ಅವರು ತಮ್ಮ ಮನೆಗಳಿಗೆ ಬಂದಾಗ ಸಾಕು ಪ್ರಾಣಿಗಳ ಮಾಹಿತಿ ಗಳನ್ನು ನೀಡಿ ಸಹಕರಿಸಬೇಕೆಂದು ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಗಣತಿ ನಡೆಸಿದ ಮನೆ ಬಾಗಿಲ ಬಳಿ ಇಲಾಖೆ ನೀಡಿರುವ ಸ್ಟಿಕ್ಕರ್ ಗಳನ್ನು ಗಣತಿದಾರರು ಅಂಟಿಸಬೇಕು. ನಾಯಿ, ಬೆಕ್ಕು, ಕುರಿ, ಕೋಳಿ, ಹಸು, ಎಮ್ಮೆ, ಹಂದಿ, ಮೊಲ ಸೇರಿದಂತೆ ಎಲ್ಲಾ ರೀತಿಯ ಸಾಕು ಪ್ರಾಣಿಗಳ ಬಗ್ಗೆ ಸಂಪೂರ್ಣ ವಿವರ ಕಲೆ ಹಾಕಿ ಪೂರೈಸಲು ಸೂಚಿಸಲಾಗಿದೆ.

ಬೆಂಗಳೂರಲ್ಲಿ ಇನ್ಮುಂದೆ ನಾಯಿಗೂ ಲೈಸೆನ್ಸ್ ಬೇಕು!

ಮಾಹಿತಿ ಕಲೆ ಹಾಕಲು ತೆರಳಿದಾಗ ಅಪಾರ್ಟ್ ಮೆಂಟ್ ಗಳ ಕೆಲ ನಿವಾಸಿಗಳು ತಾವು ಸಾಕಿರುವ ಪ್ರಾಣಿಗಳ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಗಣತಿ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಸಾಕು ಪ್ರಾಣಿಗಳೆಷ್ಟಿವೆ ಎಂಬುದರ ನಿಖರ ಮಾಹಿತಿ ತಿಳಿಯುವುದಿಲ್ಲವಾದ್ದರಿಂದ ನಾಗರಿಕರು, ಗಣತಿದಾರರು ಬಂದಾಗ ಅವರ ಗುರುತಿನ ಚೀಟಿ ನೋಡಿ ಸಹಕರಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಕೋರಿದ್ದಾರೆ.

English summary
Pet Census started on November 1 in Mysore. This time Census is being carried out with complete digitization.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X