• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ

|

ಮೈಸೂರು, ನವೆಂಬರ್ 17: 12 ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿ ನಂತರ ಆಕೆಯನ್ನು ಕೊಂದು ಹಾಕಿರುವ ಹೃದಯವಿದ್ರಾವಕ ಘಟನೆ ನಂಜನಗೂಡಿನ ಹೊರವಲಯದಲ್ಲಿ ನಡೆದಿದೆ.

ಕಳ್ಳತನಕ್ಕಾಗಿ ಮನೆಗೆ ನುಗ್ಗಿ ಮಹಿಳೆಯ ರೇಪ್ ಮಾಡಿದ್ದವ ಸಿಕ್ಕಿಬಿದ್ದ

ಪಟ್ಟಣದ ಸುಜಾತಪುರಂನ ಹಿಂಭಾಗದ ಸರ್ಕಾರಿ ಶಾಲೆಯ ಸಮೀಪದಲ್ಲಿ ಇನ್ನು ವಿದ್ಯುತ್ ಸಂಪರ್ಕ ಇಲ್ಲದ ಗುಡಿಸಲಿನಲ್ಲಿ ಈ ಕೃತ್ಯ ನಡೆದಿದೆ. ಒಂಟಿ ಮನೆಯಲ್ಲಿ ಬಾಲಕಿ ಒಬ್ಬಳೇ ಇರುವಾಗ ಈ ಕೃತ್ಯ ನಡೆದಿದ್ದು, ತಂದೆ, ತಾಯಿ, ತಮ್ಮ, ತಂಗಿ ಎಲ್ಲರೂ ಹೊರ ಹೋದ ಸಮಯ ನೋಡಿ ಹೊಂಚುಹಾಕಿದ್ದ ನೀಚರು ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ನಂತರ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಹೇಳಲಾಗಿದೆ. ಬಾಲಕಿಯ ಮೃತ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿವೆ.

ಕಾಮುಕರ ಅಟ್ಟಹಾಸಕ್ಕೆ ಗುರಿಯಾದ ಸಿಬಿಎಸ್‌ಸಿ rank ವಿದ್ಯಾರ್ಥಿನಿ

ಪ್ರಕರಣ ವರದಿಯಾದ ಸಂದರ್ಭದಲ್ಲಿ ಬಾಲಕಿಯ ತಂದೆ ಹೋಟೆಲ್ ಕೆಲಸಕ್ಕೆ ಹೋಗಿದ್ದು, ತಾಯಿ ಕೂಡ ಕಾರ್ಖಾನೆ ದುಡಿಮೆಗೆ ಹೋಗಿದ್ದರು. ಬಾಲಕಿಯ ತಮ್ಮ ಹಾಗೂ ತಂಗಿ ಶಾಲೆಗೆ ಹೋಗಿದ್ದರು. ಸಂಜೆ ತಮ್ಮ ಹಾಗೂ ತಂಗಿ ಮನೆಗೆ ಬಂದು ನೋಡಿದಾಗ ಬಾಲಕಿ ಶವವಾಗಿ ಮಲಗಿರುವುದು ಕಂಡು ಬಂದಿದೆ.

ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್

ಚಾಮರಾಜನಗರ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಸುದ್ದಿಗಾರರೊಂದಿಗೆ ಮಾತನಾಡಿ, ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಇದಾಗಿದ್ದು, ಶ್ವಾನದಳ, ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಲಾಗಿದೆ. ಸಾಮೂಹಿಕ ಅತ್ಯಾಚಾರ ಇದ್ದರೂ ಇರಬಹುದು. ಮುಂದಿನ ತನಿಖೆಯ ನಂತರ ಸತ್ಯಾಸತ್ಯತೆ ಹೊರಬೀಳಲಿದೆ ಎಂದರು.

English summary
Perpetrators allegedly raped on 12 years old girl has been reported from Nanjangud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X