ಮೈಸೂರು: ಅಶೋಕಪುರಂ ರೈಲು ನಿಲ್ದಾಣಕ್ಕೆ 8 ರೈಲು ವಿಸ್ತರಣೆಗೆ ವಿರೋಧ

ಮೈಸೂರು, ಜನವರಿ 14: ನಗರದ ಒತ್ತಡ ಕಡಿಮೆ ಮಾಡಲು ರೈಲು ಸೇವೆಯನ್ನು ಹೊರ ವಲಯಕ್ಕೆ ಸ್ಥಳಾಂತರ ಮಾಡಿದರೆ ಅದನ್ನು ಜನರು ಸ್ವಾಗತಿಸುತ್ತಾರೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮೈಸೂರು ನಗರದ ನವೀಕೃತ ಅಶೋಕಪುರಂ ರೈಲು ನಿಲ್ದಾಣಕ್ಕೆ ನಗರ ರೈಲು ನಿಲ್ದಾಣದಿಂದ 8 ರೈಲು ಸೇವೆಗಳನ್ನು ವಿಸ್ತರಣೆ ಮಾಡುವುದನ್ನು ಜನರು ವಿರೋಧಿಸುತ್ತಾರೆ.

ಅಶೋಕಪುರಂ ರೈಲು ನಿಲ್ದಾಣಕ್ಕೆ 8 ರೈಲುಗಳನ್ನು ವಿಸ್ತರಣೆ ಮಾಡುವುದನ್ನು ಜನರು ಏಕೆ ವಿರೋಧಿಸುತ್ತಿದ್ದಾರೆ? ಎಂಬುದು ಬಹಳ ಅಚ್ಚರಿಯ ವಿಚಾರವಾಗಿದೆ. 8 ರೈಲುಗಳ ಟರ್ಮಿನಲ್ ಬದಲಾವಣೆಯಾದರೆ ಪ್ರಯಾಣಿಕರು ಎರಡು ರೈಲ್ವೆ ಕ್ರಾಸಿಂಗ್‌ನಲ್ಲಿ ಹೆಚ್ಚು ಹೆಚ್ಚು ಸಿಲುಕಿಕೊಳ್ಳಬೇಕಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ.

People Opposed To Extension Of 8 Trains To Ashokapuram Railway Station

ಎರಡು ಕ್ರಾಸಿಂಗ್‌ನಲ್ಲಿ ಸಮಸ್ಯೆ: ಒಂದು ವೇಳೆ ಅಶೋಕಪುರಂ ರೈಲು ನಿಲ್ದಾಣಕ್ಕೆ ರೈಲುಗಳು ವಿಸ್ತರಣೆಗೊಂಡರೆ ಜನರು ಹೆಚ್ಚು ಹೊತ್ತು ಮೈಸೂರು ನಗರದ ಟೆನ್ನಿಸ್ ಕೋರ್ಟ್‌/ ಚಾಮರಾಜಪುರಂ ರೈಲ್ವೆ ನಿಲ್ದಾಣ ಮತ್ತು ಕುಕ್ಕರಹಳ್ಳಿ ರೈಲ್ವೆ ಕ್ರಾಸಿಂಗ್‌ನಲ್ಲಿ ಸಿಲುಕಬೇಕಾಗುತ್ತದೆ ಎಂದು ಜನರು ಹೇಳಿದ್ದಾರೆ. ಆದ್ದರಿಂದ ರೈಲು ಸೇವೆ ವಿಸ್ತರಣೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಸದ್ಯ 6 ಜೋಡಿ ರೈಲುಗಳು ಟೆನ್ನಿಸ್ ಕೋರ್ಟ್‌/ ಚಾಮರಾಜಪುರಂ ರೈಲ್ವೆ ನಿಲ್ದಾಣ ಮತ್ತು ಕುಕ್ಕರಹಳ್ಳಿ ರೈಲ್ವೆ ಕ್ರಾಸಿಂಗ್‌ ಮೂಲಕ ಸಂಚಾರ ನಡೆಸುತ್ತವೆ. ಪ್ರತಿ ಬಾರಿ ರೈಲು ಬಂದಾಗಲೂ ಸುಮಾರು 10 ನಿಮಿಷ ಗೇಟ್ ಹಾಕಲಾಗುತ್ತದೆ. ಆಗ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಎಂಬುದು ಜನರ ಆರೋಪವಾಗಿದೆ.

ಕಳೆದ 5-6 ವರ್ಷಗಳಿಂದ ಕುಕ್ಕರಹಳ್ಳಿ ರೈಲ್ವೆ ಕ್ರಾಸಿಂಗ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲಾಗುತ್ತದೆ ಎಂದು ನಾವು ಕೇಳುತ್ತಲೇ ಇದ್ದೇವೆ. ಆದರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ಕ್ರಾಸಿಂಗ್‌ನಲ್ಲಿ ರೈಲು ಹೋಗುವಾಗ ವಾಹನ ಸವಾರರು ರಸ್ತೆಯಲ್ಲಿ ಕಾದು ನಿಲ್ಲಬೇಕಿದೆ. ಈ ಮಾರ್ಗದಲ್ಲಿ ಇನ್ನೂ 8 ರೈಲುಗಳ ಸಂಚಾರ ಆರಂಭವಾದರೆ ಅದರ ಪರಿಣಾಮ ಏನಾಗುತ್ತದೆ? ಎಂಬುದು ತಿಳಿದಿದೆ ಎಂದು ಜನರು ಹೇಳಿದ್ದಾರೆ.

ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ಅಧಿಕಾರಿಗಳಿಗೆ ನಾವು ಮನವಿ ಮಾಡುತ್ತೇವೆ. ಈ ಎರಡು ರೈಲ್ವೆ ಕ್ರಾಸಿಂಗ್‌ನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ತನಕ ಅಶೋಕಪುರಂ ರೈಲು ನಿಲ್ದಾಣಕ್ಕೆ ರೈಲುಗಳ ವಿಸ್ತರಣೆ ಆಲೋಚನೆಯನ್ನು ಕೈಬಿಡಿ ಎಂದು ಒತ್ತಾಯಿಸಿದ್ದಾರೆ.

ನಗರದ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡುವುದು, ದಕ್ಷಿಣ ಭಾಗದ ರೈಲುಗಳ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಅಶೋಕಪುರಂ ರೈಲು ನಿಲ್ದಾಣಕ್ಕೆ ರೈಲುಗಳ ವಿಸ್ತರಣೆ ಮಾಡುವುದು ಬಹಳ ಮುಖ್ಯವಾಗಿದೆ. ಆದರೆ ಕುಕ್ಕರಹಳ್ಳಿಯಲ್ಲಿ ಕ್ರಾಸಿಂಗ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡುವ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಈ ಬೇಡಿಕೆಯ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳು ಸಹ ಪ್ರತಿಕ್ರಿಯೆ ನೀಡಿದ್ದು, ಅಶೋಕಪುರಂ ರೈಲು ನಿಲ್ದಾಣಕ್ಕೆ ರೈಲುಗಳ ಸೇವೆ ವಿಸ್ತರಣೆ ಮಾಡುವುದರಿಂದ ಜನರಿಗೆ ಆಗುವ ತೊಂದರೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಡಿಸೆಂಬರ್ 28ರಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅಶೋಕಪುರಂ ರೈಲು ನಿಲ್ದಾಣಕ್ಕೆ 8 ರೈಲು ಸೇವೆಗಳನ್ನು ವಿಸ್ತರಣೆ ಮಾಡಿರುವ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ಕೊಟ್ಟಿದ್ದರು.

ಶೀಘ್ರದಲ್ಲಿಯೇ ಅಶೋಕಪುರಂಗೆ ಈ ರೈಲುಗಳು ವಿಸ್ತರಣೆಯಾಗಲಿವೆ ಎಂದು ಮಾಹಿತಿ ನೀಡಿದ್ದರು.

* MAS-MYS-MAS ಕಾವೇರಿ ಎಕ್ಸ್‌ಪ್ರೆಸ್ (16021/ 22)
* MAS-MYS-MAS ಎಕ್ಸ್‌ಪ್ರೆಸ್ (12609/ 10)
* SBC-MYS-SBC ಮಾಲ್ಗುಡಿ ಎಕ್ಸ್‌ಪ್ರೆಸ್ (20624/ 23)
* KCG-MYS-KCG ಎಕ್ಸ್‌ಪ್ರೆಸ್ (12785/ 86)
* SBC-MYS-SBC ಮೆಮು (06525/ 26)
* SBC-MYS-SBC ಮೆಮು (06559/ 60)
* SBC-MYS-SBC ಮೆಮು (06255/ 56)
* SBC-MYS ಮೆಮು (06257/ 58)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+