ಮೈಸೂರು ಪೊಲೀಸರ ಜನಸ್ನೇಹಿ ವ್ಯವಸ್ಥೆ; ಎಷ್ಟು ದಂಡ ಸಂಗ್ರಹ?

ಮೈಸೂರು, ಏಪ್ರಿಲ್ 2; ಮೈಸೂರು ನಗರದಲ್ಲಿ ಸಂಚಾರಿ ಪೊಲೀಸರ ಕರ್ತವ್ಯವನ್ನು 'ಜನಸ್ನೇಹಿ'ಯಾಗಿಸಲು ಮತ್ತು ಪಾರದರ್ಶಕವಾಗಿಸಲು ಸುಧಾರಿತ ಸಂಚಾರ ನಿಯಂತ್ರಣಾ ಸೂಚಿಯನ್ನು ಜಾರಿಗೊಳಿಸಲಾಗಿದೆ. ಸ್ವಯಂ ಪ್ರೇರಿತ ತಪಾಸಣಾ ಕೇಂದ್ರವನ್ನು ತೆರೆಯಲಾಗಿದ್ದು, ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ನಗರದ ರಿಂಗ್ ರಸ್ತೆಯಲ್ಲಿ ಪೊಲೀಸ್‍ ತಪಾಸಣೆ ವೇಳೆ ಸಂಭವಿಸಿದ ಅಪಘಾತದ ನಂತರ ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು 'ಸುಧಾರಿತ ಸಂಚಾರ ನಿಯಂತ್ರಣ ಮಾರ್ಗಸೂಚಿ' ಸಿದ್ಧಪಡಿಸಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳನ್ನು ಆರಂಭಿಸಿದ್ದಾರೆ.

ಜನರು ಸ್ವಯಂ ಪ್ರೇರಿತ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ‌ ವಾಹನಗಳ‌ ಮೇಲಿರುವ ಸಂಚಾರ ನಿಯಮಗಳ ಉಲ್ಲಂಘನೆಯ ಬಾಕಿ ಪ್ರಕರಣಗಳ ಮಾಹಿತಿ ಪಡೆದು, ದಂಡ ಪಾವತಿಸುವ ಮತ್ತು ದಾಖಲಾತಿ ಪರಿಶೀಲನೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಏಪ್ರಿಲ್ 1ರಿಂದ ಈ ಕೇಂದ್ರ ಆರಂಭವಾಗಿದೆ.

People Friendly Traffic Police New Guidelines Come To Effect

ಮೊದಲ ದಿನವೇ 59,700 ರೂ. ದಂಡ ಸಂಗ್ರಹ ಆಗಿದ್ದು, ಜನರು ಒಟ್ಟು 78 ಪ್ರಕರಣಗಳಿಗೆ ದಂಡ ಪಾವತಿಸಿದ್ದಾರೆ. ನಗರದ 10 ಕಡೆಗಳಲ್ಲಿ ಸ್ವಯಂ ಪ್ರೇರಿತ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಬೆಳಗ್ಗೆ 10 ರಿಂದ 7ಗಂಟೆವರೆಗೆ ಕೇಂದ್ರಗಳಲ್ಲಿ ಜನರು ಮಾಹಿತಿ ಪಡೆಯಬಹುದು.

People Friendly Traffic Police New Guidelines Come To Effect

ಈ ಕೇಂದ್ರಗಳು ಒಂದು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. ಈ ವೇಳೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಬಾಕಿ ಇರುವ ಹಳೆಯ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+