ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಜನರು ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲೇ ಕಟ್ಟಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 21: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿಗಳ ಆಸ್ತಿ ತೆರಿಗೆಯನ್ನು 2020-21ನೇ ಸಾಲಿನಿಂದ ಆನ್‌ಲೈನ್ ಮೂಲಕವೇ ಪಾವತಿ ಮಾಡಬಹುದು. ಆಸ್ತಿ ಮಾಲೀಕರ ಅನುಕೂಲಕ್ಕಾಗಿ ಹಾಗೂ ಆಸ್ತಿ ತೆರಿಗೆ ಲೆಕ್ಕಾಚಾರವನ್ನು ಸುಲಭವಾಗಿ ತಿಳಿದುಕೊಳ್ಳಲು ಅವಕಾಶವಾಗುವಂತೆ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ.

ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಈ ಕುರಿತು ಮಾಹಿತಿ ನೀಡಿದ್ದಾರೆ. "ಆಸ್ತಿ ತೆರಿಗೆ ಆನ್ ಲೈನ್ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಆಸ್ತಿಗಳ ಸಂಪೂರ್ಣ ಸರ್ವೇ ಮಾಡುವುದು ಮತ್ತು ಆಸ್ತಿಗಳ ಜಿಯೋ ಸ್ಟ್ಯಾಂಪಿಂಗ್ ಕಾರ್ಯ ಮಾಡುವುದು ಅವಶ್ಯಕವಾಗಿರುತ್ತದೆ" ಎಂದು ಹೇಳಿದ್ದಾರೆ.

ಜನರಿಗೆ ತೆರಿಗೆ ಬರೆ; ಆಸ್ತಿ ತೆರಿಗೆ ಹೆಚ್ಚಿಸಿದ ಮಹಾನಗರ ಪಾಲಿಕೆ ಜನರಿಗೆ ತೆರಿಗೆ ಬರೆ; ಆಸ್ತಿ ತೆರಿಗೆ ಹೆಚ್ಚಿಸಿದ ಮಹಾನಗರ ಪಾಲಿಕೆ

ಆಸ್ತಿಗಳ ಒಟ್ಟು ವಿಸ್ತೀರ್ಣ, ಅಂತಸ್ತು ಮತ್ತು ಆಸ್ತಿಯ ಉಪಯೋಗದ ಬಗ್ಗೆ ಸಮೀಕ್ಷೆಯನ್ನು ಮಾಡಿ ಕಟ್ಟಡದ 3 ಕಡೆಯ ಭಾವಚಿತ್ರ (ಜಿಯೋ ಸ್ಟ್ಯಾಂಪಿಂಗ್) ತೆಗೆಯುವುದರ ಜೊತೆಗೆ ಪ್ರತ್ಯೇಕವಾದ QR code ಸ್ಟಿಕ್ಕರ್ ಅನ್ನು ಆಸ್ತಿಗಳಿಗೆ ಅಂಟಿಸುವ ಕಾರ್ಯವನ್ನು ಮಾಡಲಾಗುತ್ತದೆ.

ITR Filing: ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರಮುಖ ದಿನಾಂಕಗಳುITR Filing: ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರಮುಖ ದಿನಾಂಕಗಳು

People Can Pay Property Tax Online From 2021

ಪ್ರತಿ ಆಸ್ತಿಗೆ QR code ನೀಡುವುದರಿಂದ ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿ ಸೇರಿದಂತೆ ಪಾಲಿಕೆಗೆ ಸಂಬಂಧಿಸಿದ ಇನ್ನಿತರ ಉಪಯುಕ್ತ ಮಾಹಿತಿ ಅಂದರೆ ನೀರಿನ ತೆರಿಗೆ ಪಾವತಿ, ಉದ್ದಿಮೆ ರಹದಾರಿ, ಸ್ವಚ್ಛ ಸರ್ವೇಕ್ಷಣಾ ಮಾಹಿತಿಗಳು ಹಾಗೂ ಇತರೆ ಉಪಯುಕ್ತ ಸೇವೆಗಳನ್ನು QR code Scan ಮೂಲಕ ತಿಳಿದುಕೊಳ್ಳಲು ಸಹಾಯವಾಗುತ್ತದೆ.

'ಪಿಎಂ ಕಿಸಾನ್ ಸಮ್ಮಾನ್’ ಹಣಕ್ಕಾಗಿ 'ರೈತ’ರಾದ ತೆರಿಗೆ ಪಾವತಿದಾರರು!'ಪಿಎಂ ಕಿಸಾನ್ ಸಮ್ಮಾನ್’ ಹಣಕ್ಕಾಗಿ 'ರೈತ’ರಾದ ತೆರಿಗೆ ಪಾವತಿದಾರರು!

ಜನರು ಪಾಲಿಕೆ ಕಛೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಮನೆಯಿಂದಲೇ ನೇರವಾಗಿ ಮಾಹಿತಿ ಪಡೆಯಬಹುದಾದ ಉಪಯುಕ್ತ ಯೋಜನೆ ಇದಾಗಿದೆ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಮೈಸೂರು ಮಹಾನಗರ ಪಾಲಿಕೆಯು ಕ್ಯೂ ಆರ್ ಕೋಡ್ ಅಂಟಿಸುವ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿ/ ಸಿಬ್ಬಂದಿಗಳು ನಿಮ್ಮ ಮನೆಗಳಿಗೆ ಸರ್ವೆ ಕಾರ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿ/ ಸಿಬ್ಬಂದಿಗಳು ಕೇಳುವ ಮಾಹಿತಿಗಳು/ ದಾಖಲೆಗಳನ್ನು ಒದಗಿಸುವುದರ ಜೊತೆಗೆ ಪಾಲಿಕೆ ಸಿಬ್ಬಂದಿಗಳಿಗೆ ಸಹಕಾರ ನೀಡಲು ಮತ್ತು ಆಸ್ತಿಯ ಛಾಯಾಚಿತ್ರ ತೆಗೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.

English summary
Mysuru city corporation announced that people can now pay property tax through online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X