Amruthadhare Serial: ಅಮೃತಧಾರೆ: ಕೆಡಿ ಜೈದೇವ್‌ಗೆ ಶಾಕ್ ಕೊಟ್ಟ ಬೇಬಿ, ಎಸ್ಕೇಪ್‌ನಲ್ಲೂ ಟ್ವಿಸ್ಟ್‌

Amruthadhare Serial: ಅಮೃತಧಾರೆ ಸೀರಿಯಲ್‌ನಲ್ಲಿ ಪ್ರೇಕ್ಷಕರು ಬಹುದಿನಗಳಿಂದ ಅಂದಾಜಿಸಿದ್ದ ಘಟನೆಯೊಂದು ಕೊನೆಗೂ ನಡೆದಿದೆ. ಕೆಡಿ ಜೈದೇವ್‌ಗೆ ಆಕೆಯ ಎರಡನೇ ಪತ್ನಿ ಹಾಗೂ ಪ್ರೇಯಸಿ ಕೈಕೊಟ್ಟಿದ್ದು. ಜೈದೇವ್ ಕಂಗಾಲಾಗಿದ್ದಾನೆ. ಕೆಡಿ ಜೈದೇವ್ ಬೇಬಿಯ ಸೌಂದರ್ಯಕ್ಕೆ ಮನಸೋತಿದ್ದರೂ, ಬೇಬಿಯ ಕಣ್ಣೆಲ್ಲವೂ ದಿವಾನ್ ಕುಟುಂಬದ ಆಸ್ತಿಯ ಮೇಲೆಯೇ ಇತ್ತು. ಇದೇ ಕಾರಣಕ್ಕೆ ಬೇಬಿಯು ಜೈದೇವ್‌ನ ಎಲ್ಲ ಅಟ್ಟಹಾಸಗಳನ್ನೂ ಹಾಗೂ ಶಾಕುಂತಲಾಳ ಕಿರುಕುಳವನ್ನು ಸಹಿಸಿಕೊಂಡಿದ್ದಳು. ಕೊನೆಗೂ ಬೇಬಿಯ ಪ್ಲ್ಯಾನ್ ವರ್ಕ್‌ಔಟ್ ಆಗಿದ್ದು, ಹೊಸ ಟ್ವಿಸ್ಟ್‌ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್‌ನ ಇತ್ತೀಚಿನ ಎಪಿಸೋಡ್‌ಗಳಲ್ಲಿ ಏನಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಅಮೃತಧಾರೆ ಸೀರಿಯಲ್‌ನಲ್ಲಿ ಪ್ರೇಕ್ಷಕರು ಬಹಳಷ್ಟು ದಿನಗಳಿಂದಲೂ ಬೇಬಿ ರೆಬಲ್ ಆಗಿ ಬದಲಾಗುವ ಸನ್ನಿವೇಶ ಹಾಗೂ ದೃಶ್ಯಗಳಿಗೆ ಕಾಯುತ್ತಿದ್ದರು. ಆ ದಿನಗಳು ಕೊನೆಗೂ ಬಂದಿವೆ. ಮಲ್ಲಿಗೆ ಮೋಸ ಮಾಡಿ ಬೇಬಿಯನ್ನು ಜೈದೇವ್ ಮದುವೆಯಾಗಿದ್ದ. ಆದರೆ ಬೇಬಿ - ಜೈದೇವ್‌ನ ಲವ್ ಮಾಡುತ್ತಿರುವಂತೆ ನಟಿಸಿದ್ದಳು. ಆಕೆಯ ಕಣ್ಣೆಲ್ಲವೂ ದಿವಾನ್ ಕುಟಂಬದ ಅಪಾರ ಆಸ್ತಿಯ ಮೇಲೆಯೇ ಇತ್ತು. ಇದೀಗ ದಿವಾನ್ ಕುಟುಂಬದ ಆಸ್ತಿ ಕರಗುತ್ತಿದೆ. ಜೈದೇವ್ ಬೀದಿ ಪಾಲಾಗುತ್ತಿದ್ದಾನೆ. ಈ ಸಂಕಷ್ಟದ ಸಮಯದಲ್ಲೇ ವಿಲನ್‌ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಜೈದೇವ್‌ಗೆ ಮೋಸ ಮಾಡಿರುವ ಬೇಬಿ ರಾತ್ರೋರಾತ್ರಿ ಫಾರಿನ್‌ಗೆ ಪ್ರಯಾಣಿಸಿದ್ದಾಳೆ. ಹೋಗುವಾಗಲೂ ಬೇಬಿ ಟ್ವಿಸ್ಟ್‌ ಕೊಟ್ಟಿದ್ದಾಳೆ.

Amruthadhare Serial

ಜೈದೇವ್‌ ಮಲಗಿರುವಾಗ ಬೇಬಿ ಎಸ್ಕೇಪ್ ಪ್ಲ್ಯಾನ್ ಮಾಡಿದ್ದಾಳೆ. ಇವೊತ್ತು ನಿಮ್ಮ ಅಮ್ಮ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದಾಳೆ, ನಾಳೆ ನಿನಗೂ ಇದೇ ಪರಿಸ್ಥಿತಿಗೆ ಹೋಗಬೇಕು ಎಂದು ಹೇಳಿದ್ದಾಳೆ. ಜೈದೇವ್ ಎದ್ದು ನೋಡುವಾಗ ಬೇಬಿ ಎಸ್ಕೇಪ್ ಆಗಿರುವುದು ಗೊತ್ತಾಗಿದೆ. ಬೆಳಿಗ್ಗೆ ಎದ್ದು ನೋಡುವಾಗ ಫ್ಲೈಟ್ ಮಿಸಾಗಿದೆ ಅಂತ ಜೈ ಟೆನ್ಶನ್ ಆಗಿದ್ದಾನೆ. ಮನೆಯಲ್ಲಿದ್ದ ಹಣ - ಒಡವೆಗಳನ್ನು ತೆಗೆದುಕೊಂಡು ಬೇಬಿ ಪರಾರಿಯಾಗಿದ್ದಾಳೆ.

Shravani Subramanya Serial: ಶ್ರಾವಣಿ ಸುಬ್ರಮಣ್ಯ: ಒಂದಾದ ತಂದೆ - ಮಗಳು; ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಸುಬ್ಬು
Shravani Subramanya Serial: ಶ್ರಾವಣಿ ಸುಬ್ರಮಣ್ಯ: ಒಂದಾದ ತಂದೆ - ಮಗಳು; ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಸುಬ್ಬು

ಅಲ್ಲದೆ ವಾಯ್ಸ್‌ನೋಟ್‌ ವೊಂದನ್ನು ಕಳುಹಿಸಿದ್ದು, ಅದರಲ್ಲಿ ಬಾಯ್ ಜಯ್.. ನಾನು ನಿಮ್ಮ ಹೆಂಡತಿ ಆಗಿದ್ದಕ್ಕೆ ನನಗೆ ಎಷ್ಟು ಸೇರಬೇಕೋ ಅಷ್ಟನ್ನು ಮಾತ್ರ ಎಷ್ಟು ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ಹೇಳಿ ದ್ದಾನೆ. ಪೋನ್‌ನಲ್ಲಿ ಈ ವಾಯ್ಸ್‌ನೋಟ್ ಕೇಳಿದ ಕೂಡಲೇ ಜೈದೇವ್‌ ಕಣ್ಣೀರಾಗಿದ್ದು, ಕುಸಿದು ಬಿದ್ದಿದ್ದಾನೆ. ಆಗ ಮನೆಗೆ ಅಧಿಕಾರಿಗಳು ಬಂದಿದ್ದು, ಫಾರಿನ್‌ಗೆ ಓಡಿ ಹೋಗಬೇಕು ಅಂತ ಪ್ಲ್ಯಾನ್ ಮಾಡಿದ್ದೀರಾ.. ನಿಮ್ಮ ಮನೆಯನ್ನು ಹರಾಜು ಮಾಡುತ್ತಿದ್ದೇವೆ ಎಂದು ಹೇಳಿರುವುದು ಇದೆ.

Karna Serial: ಕೊನೆಗೂ ಸತ್ಯಗಳ ಅನಾವರಣ ಒಂದಾದ ಕರ್ಣ - ನಿಧಿ ಜೋಡಿ, ನಿತ್ಯಾ ನಿರ್ಧಾರಕ್ಕೆ ಪ್ರೇಕ್ಷಕ ಶಾಕ್
Karna Serial: ಕೊನೆಗೂ ಸತ್ಯಗಳ ಅನಾವರಣ ಒಂದಾದ ಕರ್ಣ - ನಿಧಿ ಜೋಡಿ, ನಿತ್ಯಾ ನಿರ್ಧಾರಕ್ಕೆ ಪ್ರೇಕ್ಷಕ ಶಾಕ್

Amruthadhare Serial: ಗೌತಮ್ ಕಾಲಿಗೆ ಬಿದ್ದ ಶಕುಂತಲಾ

ಇನ್ನು ಗೌತಮ್ ದಿವಾನ್ ಅವರ ಕಾಲಿಗೆ ಮಲತಾಯಿ ಶಕುಂತಲಾ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದ್ದಾಳೆ. ನನ್ನನ್ನು ಕ್ಷಮಿಸಿ ಬಿಡು ಗೌತಮ್ ಅಂತ ಕೇಳಿದ್ದಾಳೆ. ಇದಕ್ಕೆ ಗೌತಮ್ ಎದ್ದೇಳೆ ಅಮ್ಮಾ ನೀವು ಏನು ಮಾಡುತ್ತಿದ್ದೀರಾ ನನಗಿಂತ ವಯಸ್ಸಿನಲ್ಲಿ ಹಿರಿಯರು ನೀವು ಅಂತ ಹೇಳಿದ್ದಾನೆ. ಇನ್ನೇನು ಮಾಡಲಿ ಗೌತಮ್ ನಾನು ಮಾಡಿರುವ ತಪ್ಪು ಅಂಥದ್ದು. ಆ ತಪ್ಪು ನನ್ನನ್ನು ಕಾಡುತ್ತಿದೆ ಒದ್ದಾಡುವ ತರ ಮಾಡ್ತಿದೆ.. ಅದರಿಂದ ಆಚೆ ಬರುವುದಕ್ಕೆ ನನಗೆ ಆಗ್ತಿಲ್ಲ. ನಾನು ನಿಮ್ಗಳಿಗೆ ಒಂದು ದಿನವೂ ಒಳ್ಳೆಯದು ಮಾಡಿಲ್ಲ. ಬರೀ ಕೆಟ್ಟದ್ದನ್ನೇ ಮಾಡಿದ್ದೇನೆ. ಆದರೆ ನನ್ನ ಬಗ್ಗೆ ನಿಮ್ಮ ಮಕ್ಕಳು ಹೆಂಡಿತಿಯ ಬಳಿ ಒಂದು ಕೆಟ್ಟ ಮಾತು ಹೇಳಿಲ್ಲ ನೀನು.. ನಿನ್ನಂಥವನಿಗೆ ಹಿಂಗೆ ಮಾಡಿಬಿಟ್ನಲ್ಲ ಅಂತ ನನಗೆ ಅಸಹ್ಯ ಆಗುತ್ತಿದೆ ಎಂದು ಶಕುಂತಲಾ ಹೇಳಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+