ಕುಕ್ಕರಹಳ್ಳಿಯಲ್ಲಿ ಪೆಲಿಕಾನ್ ಸಾವು; ಹಕ್ಕಿಜ್ವರ ಕಾರಣವಲ್ಲ
ಮೈಸೂರು, ಅಕ್ಟೋಬರ್ 30: ಕುಕ್ಕರಹಳ್ಳಿ ಕೆರೆಯಲ್ಲಿ ಇತ್ತೀಚೆಗೆ ಎರಡು ಪೆಲಿಕಾನ್ ಪಕ್ಷಿಗಳು ಸಾವನ್ನಪ್ಪಿದ್ದು, ಇವುಗಳ ಸಾವಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ದೊರೆತಿದೆ. ಪೆಲಿಕಾನ್ ಹಕ್ಕಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ ಎಂದು ಡಿಸಿಎಫ್ ಪ್ರಶಾಂತ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕುಕ್ಕರಹಳ್ಳಿ ಕೆರೆಯ ಪ್ರವೇಶದ್ವಾರದಲ್ಲಿ ಅ.25ರಂದು ಸ್ಪಾಟ್ ಬಿಲ್ಡ್ ಪೆಲಿಕಾನ್ ಎಂಬ ಪಕ್ಷಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಮೂರು ದಿನದ ನಂತರ ಮತ್ತೊಂದು ಹಕ್ಕಿಯೂ ಸಾವನ್ನಪ್ಪಿತ್ತು. ಹೀಗೆ ಮೇಲಿಂದ ಮೇಲೆ ಪೆಲಿಕಾನ್ ಪಕ್ಷಿಗಳು ಸಾವಿಗೀಡಾಗುತ್ತಿರುವುದಕ್ಕೆ ಹಕ್ಕಿ ಜ್ವರದ ಕಾರಣವಿರಬಹುದು ಎಂಬ ಆತಂಕ ವ್ಯಕ್ತವಾಗಿತ್ತು.

ಬೆಂಗಳೂರಿನ ಇನ್‌ಸ್ಪಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯಾಲಜಿಕಲ್ಸ್ ಎಂಬ ಪ್ರಯೋಗಾಲಯದ ತಜ್ಞರು ನೀಡಿರುವ ಪ್ರಾಥಮಿಕ ವರದಿಯಲ್ಲಿ ಹಕ್ಕಿಗಳ ಸಾವಿಗೆ ಹಕ್ಕಿಜ್ವರ ಅಥವಾ ಇನ್ನಿತರ ಸಾಂಕ್ರಾಮಿಕ ರೋಗಗಳು ಕಾರಣವಲ್ಲ ಎಂದು ದೃಢಪಡಿಸಿದ್ದಾರೆ. ಜನರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications