• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟ ಪ್ರವೇಶ ಶುಲ್ಕದಿಂದ ಬಂತು 1.50 ಕೋಟಿ

|

ಮೈಸೂರು, ಜುಲೈ 30: ನಾಡ ಅಧಿದೇವತೆ ಚಾಮುಂಡಿ ದೇವಿಗೆ ಈ ವರ್ಷ ವೈಭವದಿಂದ ಆಷಾಢ ಶುಕ್ರವಾರದ ಪೂಜೆಗಳು ನಡೆದಿವೆ. ಜೊತೆಗೆ ನಾಲ್ಕು ಆಷಾಢ ಶುಕ್ರವಾರಗಳು ಹಾಗೂ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಸೇರಿದಂತೆ ಚಾಮುಂಡಿ ಬೆಟ್ಟದಲ್ಲಿ ಪ್ರವೇಶ ಶುಲ್ಕದಿಂದ ಒಟ್ಟು 1,50,15,870 ರೂಪಾಯಿ ಸಂಗ್ರಹವಾಗಿದೆ.

 ಕಡೆ ಆಷಾಢ ಶುಕ್ರವಾರ: ಬೆಟ್ಟದ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಕಡೆ ಆಷಾಢ ಶುಕ್ರವಾರ: ಬೆಟ್ಟದ ತಾಯಿ ಚಾಮುಂಡಿಗೆ ವಿಶೇಷ ಪೂಜೆ

ಕಳೆದ ವರ್ಷದ ಆಷಾಢ ಮಾಸದ ಆದಾಯಕ್ಕೆ ಹೋಲಿಸಿದರೆ 48,98,670 ರೂಪಾಯಿಗಳಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 2018ರಲ್ಲಿ 1,02,17,200 ರೂಪಾಯಿ ಸಂಗ್ರಹವಾಗಿತ್ತು. ಈ ವರ್ಷ ಟಿಕೆಟ್ ದರ ರೂ.50 ಮತ್ತು 300 ರೂ.ಗಳನ್ನು ನಿಗದಿಪಡಿಸಲಾಗಿತ್ತು.

ಪ್ರತೀ ವರ್ಷದ ಆಷಾಢ ಮಾಸದಲ್ಲಿ ಚಾಮುಂಡಿಬೆಟ್ಟ ದೇವಸ್ಥಾನ ಪ್ರವೇಶ ಶುಲ್ಕದ ಆದಾಯ ಹಂತ ಹಂತವಾಗಿ ಏರುತ್ತಿದ್ದು, 2015ರಲ್ಲಿ ತಲಾ ರೂ.50ರಂತೆ ರೂ.29,67,550 ಸಂಗ್ರಹವಾಗಿತ್ತು. 2016ರಲ್ಲಿ ತಲಾ ರೂ.50ರಂತೆ ರೂ. 38,73,300 ಸಂಗ್ರಹವಾಗಿದ್ದರೆ, 2017ರಲ್ಲಿ ರೂ.50 ಮತ್ತು ರೂ.300ರ ಪ್ರವೇಶ ಶುಲ್ಕದಲ್ಲಿ 1,03,83,030, 2018ರಲ್ಲಿ ರೂ.50 ಮತ್ತು ರೂ.300ರ ಶುಲ್ಕದಂತೆ ರೂ.1,02,17,200 ರೂ. ಸಂಗ್ರಹವಾಗಿತ್ತು. ಅಂತೆಯೇ ಈ ವರ್ಷ ರೂ.1,50,15,870 ಸಂಗ್ರಹವಾಗಿದೆ ಎಂದು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

English summary
The total of Rs 1,50,15,870 has been collected from the entrance fee at Chamundi Hill at four Ashada Fridays and Chamundeshwari Vardhanti Mahotsavam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X