ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾರು ಏನೇ ಮಾಡಿದರೂ ನಮ್ಮನ್ನು ಮಣಿಸಲು ಸಾಧ್ಯವಿಲ್ಲ: ಸಂಸದ ಪ್ರತಾಪ್ ಸಿಂಹ

|
Google Oneindia Kannada News

ಮೈಸೂರು, ನವೆಂಬರ್ 18 : ಮೈಸೂರು ಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಪಕ್ಷವನ್ನು ಸೋಲಿಸಲು ಎರಡು ಪಕ್ಷಗಳ ಒಗ್ಗೂಡಿದ್ದು ನಮಗೆ ಹಾಸ್ಯಾಸ್ಪದ ಎಂದೆನಿಸುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಡೆಯು ಮೈತ್ರಿ ಸರಕಾರದಲ್ಲಿ ಬಿಜೆಪಿ ಕುರಿತಾದ ಭಯವನ್ನು ತಿಳಿಸುತ್ತದೆ. ಈ ಎಲ್ಲಾ ಬೆಳವಣಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.

ಮೈಸೂರು ಮೇಯರ್ ಚುನಾವಣೆ: ಮತ್ತೆ ಸಿದ್ದರಾಮಯ್ಯ ಮೇಲುಗೈ..!ಮೈಸೂರು ಮೇಯರ್ ಚುನಾವಣೆ: ಮತ್ತೆ ಸಿದ್ದರಾಮಯ್ಯ ಮೇಲುಗೈ..!

ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿತು. ‌ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

No one can defeat us, said BJP MP Pratap Simha

ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಇದರಿಂದಾಗಿ ನಾನು ಚುನಾವಣೆಯಲ್ಲಿ ಭಾಗವಹಿಸಿ, ಮತದಾನ ಮಾಡುವ ಅವಶ್ಯಕತೆ ಇರಲಿಲ್ಲ. ಆದ್ದರಿಂದ ಗೈರಾಗಿದ್ದೆ. ಈಗ ಆಯ್ಕೆಯಾಗಿರುವ ಮೇಯರ್ ಕಾಂಗ್ರೆಸ್ ನ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಜೆಡಿಎಸ್ ನ ಶಫಿ ಅಹಮದ್ ಅವರಿಗೆ ಶುಭ ಕೋರಿದ್ದೇನೆ ಎಂದು ಹೇಳಿದ್ದರು.

English summary
No one can defeat us, said BJP MP Pratap Simha. He spoke to media about Mysuru mayor election. And also said, no one can beat us in Lok sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X