ಮಂಡ್ಯದಲ್ಲಿ ನಿಖಿಲ್ ಗೆಲ್ಲುತ್ತಾರೆ, ಆದರೆ ಅಂತರ ಕಡಿಮೆ:ಸಾ.ರಾ.ಮಹೇಶ್

Recommended Video

      ಸುಮಲತಾ ವಿರುದ್ಧ ನಿಖಿಲ್ ಗೆಲ್ತಾರಂತೆ | Oneindia Kannada

      ಮೈಸೂರು, ಏಪ್ರಿಲ್ 26: ಮಂಡ್ಯ, ಮೈಸೂರು, ಕೊಡಗು ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಸಾ.ರಾ.ಮಹೇಶ್ ವಿಶ್ವಾಸ ವ್ಯಕ್ತಪಡಿಸಿದರು.

      ಲೋಕಸಭಾ ಚುನಾವಣೆ ವಿಶೇಷ ಪುಟ

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲಿದ್ದಾರೆ. ಆದರೆ ಅಂತರ ಕಡಿಮೆ ಆಗುತ್ತದೆ. ಮಂಡ್ಯ ಜನರ ಮೇಲೆ ನನಗೆ ನಂಬಿಕೆ ಇದೆ. ಕುಮಾರಸ್ವಾಮಿಯವರ 20 ತಿಂಗಳ ಆಡಳಿತ ನಿಖಿಲ್ ಗೆಲುವಿಗೆ ಸಹಕಾರಿಯಾಗಲಿದೆ.ಈ ಬಾರಿ ಮಂಡ್ಯದಲ್ಲಿ ಫಲಿತಾಂಶ ಬದಲಾಗಲಿದೆ ಎಂದು ಮಾತನಾಡುತ್ತಾರೆ. ಅದೆಲ್ಲವೂ ಕೂಡ ಊಹಾಪೋಹಾ. ಇದೆಲ್ಲವನ್ನೂ ಕೂಡ ನಾವು ನಂಬುವುದಿಲ್ಲ.ಮೇ 23 ರ ನಂತರ ಎಲ್ಲವನ್ನೂ ನೀವೇ ನೋಡಿ ಎಂದು ಮಾರ್ಮಿಕವಾಗಿ ನುಡಿದರು.

      ಇನ್ನು ಕೊಡಗಿನಲ್ಲಿ ನಕ್ಸಲರು ಪ್ರತ್ಯಕ್ಷವಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಷಯವನ್ನ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಇದರ ಬಗ್ಗೆ ಈಗಾಗಲೇ ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಸತ್ಯ ಹೊರಬೀಳಲಿದೆ. ಸದ್ಯಕ್ಕೆ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

      Nikhil Kumaraswamy will win in Mandya:Minister Mahesh

      ಕೊಡಗಿನಲ್ಲಿ ಹೆಚ್ಚು ಮಳೆ‌ ಬೀಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಈಗಾಗಲೇ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ. ಜನರು ಯಾವುದೇ ಭಯವಿಲ್ಲದೆ ಜೀವನ ಮಾಡಲಿದ್ದಾರೆ. ಜಿಲ್ಲಾಡಳಿತ ಸೂಕ್ತ ಮಟ್ಟದ ಮುನ್ನೆಚ್ಚರಿಕೆ ಕ್ರಮಕ್ಕೆ‌ ಮುಂದಾಗಿದೆ ಎಂದು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+